spot_img
Monday, March 16, 2026
spot_img

ವಕ್ವಾಡಿ | ನಿವೃತ್ತ ಪೋಸ್ಟ್‌ ಮಾಸ್ಟರ್‌ ಶರಾವತಿ ಶೆಟ್ಟಿ ಅವರಿಗೆ ಬೀಳ್ಕೊಡುಗೆ ಸಮಾರಂಭ

ಜನಪ್ರತಿನಿಧಿ (ವಕ್ವಾಡಿ) : ವಕ್ವಾಡಿಯಲ್ಲಿ ಅಂಚೆ ಕಚೇರಿಯಲ್ಲಿ ಪೋಸ್ಟ್‌ ಮಾಸ್ಟರ್‌ ಆಗಿ ಸುಧೀರ್ಘ ವಾಗಿ 42 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ ಶರಾವತಿಯವರನ್ನು ವಕ್ವಾಡಿ ಗ್ರಾಮಸ್ಥರು ಹಾಗೂ ಇಲಾಖಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕ ಸಮ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಊರ ಗ್ರಾಮಸ್ಥರು ಹಾಗೂ ಯುವಶಕ್ತಿ ಮಿತ್ರ ಮಂಡಲ (ರಿ.) ಹೆಗ್ಗಾರಬೈಲ ವಕ್ವಾಡಿ ಇದರ ಪ್ರಯುಕ್ತ ನಿವೃತ್ತ ಪೋಸ್ಟ್‌ ಮಾಸ್ಟರ್‌ ಶರಾವತಿ ಅವರನ್ನು ಸನ್ಮಾನಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಪದವೀಧರ ಮುಖ್ಯೋಪಾಧ್ಯಾಯರಾದ ರತ್ನಾಕರ ಶೆಟ್ಟಿ, ಶರಾವತಿಯವರು ಯಾವ ಕಪ್ಪು ಚುಕ್ಕೆ ಇಲ್ಲದೇ ಊರಿನ ಜನರ ಪ್ರೀತಿಯನ್ನು ಗಳಿಸಿದವರು ಹಾಗೂ ಒಂದೇ ಊರಿನಲ್ಲಿ ಸುದೀರ್ಘ ವರ್ಷ ಸೇವೆ ಸಲ್ಲಿಸುವುದು ಸುಲಭ ಅಲ್ಲ. ಪರವೂರಿನಿಂದ ಬಂದು ನಮ್ಮೂರಿನಲ್ಲಿ ಸುದೀರ್ಘ ಪ್ರಾಮಾಣಿಕ ಸೇವೆ ಸಲ್ಲಿಸಿ ಊರವರ ವಿಶ್ವಾಸ ಗಳಿಸಿರುವುದು ಅಭಿನಂದನಾರ್ಹ ಎಂದರು. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹರಸಿ ಹಾರೈಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಪೋಸ್ಟ್‌ ಆಫಿಸ್‌ ನ ಇನ್ಸ್ಪೆಕ್ಟರ್‌ ಶಂಕರ್‌ ಲಮಾಣಿ ಮಾತನಾಡಿ, ಸರ್ಕಾರಿ ಸೇವೆಯಲ್ಲಿದ್ದು, ಜನರ ವಿಶ್ವಾಸ ಗಳಿಸುವುದು ಕಷ್ಟದ ಕೆಲಸ. ಶರಾವತಿಯವರ ಪ್ರಾಮಾಣಿಕ ಸೇವೆ ಆದರ್ಶನೀಯ. ವೃತ್ತಿಯಲ್ಲಿ ಅವರ ನಿಷ್ಠೆ ಮಾದರಿ ಎಂದು ಅವರು ಹೇಳಿದರು.

ಕುಂಭಾಶಿ ಸಬ್‌ ಆಫೀಸ್‌ ನ ಉಮಾನಾಥ್‌, ನಿವೃತ್ತ ಮುಖ್ಯೋಪಾಧ್ಯಯರು ಭಾಸ್ಕರ್‌ ಶೆಟ್ಟಿ ಸಣಗಲ್ಲುಮನೆ, ನಿವೃತ್ತ ಶಿಕ್ಷಕ ಕರುಣಾಕರ ಶೆಟ್ಟಿ, ಸ.ಹಿ.ಪ್ರಾ.ಶಾಲೆ ವಕ್ವಾಡಿ ಇದರ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತ್ಯರಂಜನ್‌ ಹೆಗ್ಡೆ, ಕಾಳಾವರ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷೆ ಆಶಾಲತಾ ಶೆಟ್ಟಿ, ಯೂನಿಯನ್‌ ನ ಮಹೇಂದ್ರ, ಶಿಕ್ಷಕ ಬಾಲಕೃಷ್ಣ ಶೆಟ್ಟಿ ಈ ಸಂದರ್ಭದಲ್ಲಿ ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಂಚೆ ಇಲಾಖೆ, ಪೋಸ್ಟ್ ಯೂನಿಯನ್‌, ಕುಂಭಾಶಿ ಸಬ್‌ ಆಫೀಸ್‌ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಗ್ರಾಮಸ್ಥರು ಗೌರವಾರ್ಪಣೆ ಸಲ್ಲಿಸಿದರು.

ಶಿಕ್ಷಕ ಸದಾನಂದ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾಳಾವರ ಗಾಮ ಪಂಚಾಯತ್‌ ನ ಸದಸ್ಯ ರಮೇಶ್‌ ಶೆಟ್ಟಿ ವಕ್ವಾಡಿ ಶುಭ ಹಾರೈಸಿ, ವಂದಿಸಿದರು. ಪತ್ರಕರ್ತ ಶ್ರೀರಾಜ್‌ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಯುವಶಕ್ತಿ ಮಿತ್ರ ಮಂಡಲ (ರಿ.) ಹೆಗ್ಗಾರಬೈಲು ವಕ್ವಾಡಿ ಇದರ ಅಧ್ಯಕ್ಷ ಶಂಕರ್‌ ಕುಲಾಲ್‌, ಸ.ಹಿ.ಪ್ರಾ. ಶಾಲೆ  ವಕ್ವಾಡಿ ಇದರ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅನಂತ ಪದ್ಮನಾಭ ಶೆಟ್ಟಿಗಾರ್‌, ವಕ್ವಾಡಿ ಅಂಚೆ ಕಚೇರಿಯ ಪೋಸ್ಟ್‌ ಮ್ಯಾನ್‌ ಗೋಪಾಲ ಪೂಜಾರಿ ವಕ್ವಾಡಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!