spot_img
Monday, March 16, 2026
spot_img

ರಾಜಸ್ಥಾನ ಆಜ್ಮೀರ್ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ಡಾ.ಜೋನ್ ಕರ್ವಾಲೊ ರೋಜರಿ ಮಾತಾ ಇಗರ್ಜಿಗೆ ಭೇಟಿ

ಕುಂದಾಪುರ: ಮೂಲತಃ ಕುಂದಾಪುರ ಬಸ್ರೂರಿನವರಾದ ಬಿಶಪ್ ಅ|ವಂ|ಡಾ|ಜೋನ್ ಕರ್ವಾಲ್ಲೊ ಇವರು ರಾಜಸ್ಥಾನದ ಆಜ್ಮೀರ್ ಧರ್ಮಪ್ರಾಂತ್ಯಕ್ಕೆ ನೂತನ ಧರ್ಮಾಧ್ಯಕ್ಷರಾಗಿ ಅಯ್ಕೆಯಾಗಿದ್ದು ಜೂ.1 ರಂದು ಕೆನರಾದಲ್ಲೆ ಅತೀ ಪ್ರಾಚೀನ ಎರಡನೇ ಇಗರ್ಜಿಯಾದ ರೋಜರಿ ಮಾತಾ ಇಗರ್ಜಿಗೆ ಭೇಟಿ ಕೊಟ್ಟು ಪವಿತ್ರ ಬಲಿದಾನವನ್ನು ಅರ್ಪಿಸಿದರು.

ಬಲಿದಾನ ಅರ್ಪಿಸಿ ಮಾತನಾಡಿದ ಅವರು, ‘ನಾವು ಮಾನವ ರಚಿಸಿದ ಕಂಪ್ಯೂಟರ್, ಮೊಬೈಲ್ ಬಳಸುತ್ತೇವೆ, ಅದು ನಾವು ಆಜ್ಞೆ ಕೊಟ್ಟಂತೆ ಕಾರ್ಯ ನಿರ್ವಹಿಸುತ್ತವೆ. ಅವು ನಶ್ವರ. ನಮಗೆ ಜನ್ಮ ಕೊಟ್ಟಿದ್ದು ದೇವರು, ನಾವು ದೇವರ ವಾಕ್ಯದಂತೆ ನ್ಯಾಯ ಸಮ್ಮತವಾಗಿ ಜೀವಿಸಬೇಕು, ದೇವರು ನಮ್ಮ ಸೇವಕನಂತೆ, ನಮ್ಮ ಮಿತ್ರರು ಆಗಿದ್ದಾರೆ, ಅವರು ನಮ್ಮನ್ನು ಅಗಾಧವಾಗಿ ಪ್ರೀತಿಸುತ್ತಾರೆ. ನಾವು ಎಲ್ಲಿಂದ ಬಂದಿದ್ದೇವೊ ಅಲ್ಲಿ ನಾವು ಮರಳಬೇಕು. ಅದಕ್ಕೆ ನಾವು ಬೈಬಲನಲ್ಲಿ ಹೇಳಿದ ಹಾಗೇ ಕ್ರಿಸ್ತನ ಬೋಧನೆಯಂತೆ ಜೀವಿಸಬೇಕು, ನಮ್ಮ ಜೀವನವೇ ಇತರರಿಗೆ ಆದರ್ಶವಾಗಬೇಕು‌ ಎಂದರು.

ರೋಜರಿ ಚರ್ಚಿನ ಧರ್ಮಗುರು ಅ|ವಂ|ಪೌಲ್ ರೇಗೊ ಸಹಬಲಿದಾನವನ್ನು ಅರ್ಪಿಸಿದರು. ಅವರು ಮತ್ತು ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಕುಂದಾಪುರ ಸಂತ ಜೋಸೆಪ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಇವರುಗಳು ಚರ್ಚಿನ ಪರವಾಗಿ ಬಿಶಪ್ ಜೋನ್ ಇವರನ್ನು ಸನ್ಮಾನಿಸಿದರು. ಚರ್ಚಿನ ಜನತೆ ಅವರನ್ನು ಅಭಿನಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!