spot_img
Wednesday, March 18, 2026
spot_img

ಸೌಹಾರ್ದತೆಗೆ ಭಂಗ ತರುವ ಕಿಡಿಗೇಡಿಗಳ ಕೃತ್ಯವನ್ನು ಬಲವಾಗಿ ಖಂಡಿಸೋಣ : ಮೂಡುಬಿದಿರೆ ಜೈನ ಮಠದ ಶ್ರೀ ಕರೆ

ಜನಪ್ರತಿನಿಧಿ (ಮೂಡುಬಿದಿರೆ) : ಜೈನ, ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಸರ್ವ ಧರ್ಮ ಸಮನ್ವಯದ ಭೂಮಿ ನಮ್ಮ ಕರಾವಳಿ ಜಿಲ್ಲೆ. ಇಲ್ಲಿ ಯಾವುದೇ ಧರ್ಮದ ಅಮಾಯಕರ ಮೇಲಿನ ದಾಳಿ ನಿಲ್ಲಬೇಕು ಅಂತ ಮೂಡುಬಿದಿರೆಯ ಜೈನಮಠದ ಶ್ರೀಗಳು ಕರೆ ನೀಡಿದ್ದಾರೆ.

ಇಂತಹ ಘಟನೆಗಳು ಎಲ್ಲಿಯೂ ಮರು ಕಳಿಸಬಾರದು. ಧರ್ಮ ಧರ್ಮಗಳ ನಡುವೆ ಯಾವುದೇ ದ್ವೇಷವನ್ನು ಉಂಟು ಮಾಡುವ ಹೇಳಿಕೆಗಳನ್ನು ಯಾರೂ ನೀಡಬಾರದು. ಡಿಜಿಟಲ್ ಮಾಧ್ಯಮ ಮೂಲಕ ಮನ ನೋಯಿಸಿ ದ್ವೇಷ ಪೂರಿತ ಅಸವಿಂಧಾನಿಕ ಹೇಳಿಕೆಗಳನ್ನು ನೀಡಬಾರದು. ಶಾಂತಿ ಸೌಹಾರ್ದತೆಗೆ ಸ್ಥಳೀಯ ಪರಮ ಪೂಜ್ಯರುಗಳ ಆಶೀರ್ವಾದ ಇರಲಿ. ವಿವಿಧ ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು ಐಕ್ಯತೆಯಿಂದ ಸಾಮರಸ್ಯಕ್ಕೆ ಸಹಕಾರ ನೀಡಲಿ.

ನಾವೆಲ್ಲರೂ ಭಾರತೀಯರು ಸೌಹಾರ್ದತೆಗೆ ಭಂಗ ತರುವ ಕಿಡಿಗೇಡಿಗಳ ಕೃತ್ಯವನ್ನು ಬಲವಾಗಿ ಖಂಡಿಸೋಣ, ಸಂವಿಧಾನ, ಸರ್ಕಾರ, ನ್ಯಾಯಾಂಗದಲ್ಲಿ ನಂಬಿಕೆ ಇರಿಸಿ ಸುರಕ್ಷತೆ, ಪರಸ್ಪರ, ನಂಬಿಕೆ, ಐಕ್ಯತೆಗಾಗಿ ನಾವು ನಂಬಿದ ದೇವರಲ್ಲಿ ಪ್ರಾರ್ಥಿಸೋಣವೆಂದು ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದರೆಯ ಜಗದ್ಗುರು ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಸ್ವಸ್ತಿಶ್ರೀ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ಕರೆ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!