spot_img
Thursday, April 2, 2026
spot_img

ಯಳಜಿತ್: ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೈಂದೂರು: ಯಳಜಿತ ಗ್ರಾಮ ಬಸವ (38ವ) ಅವರು ಏಪ್ರಿಲ್ 17-2025 ರಂದು ಕಾಣೆಯಾಗಿದ್ದು ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೇ 15ರಂದು ಆ ವ್ಯಕ್ತಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಯಳಜಿತ ಗ್ರಾಮದ ಗುರುವನಕೋಟೆಯ ಪಾರೆಸ್ಟ್ ಒಳಗೆ ಮರಕ್ಕೆ ವ್ಯಕ್ತಿ ಕುತ್ತಿಗೆಗೆ ನೇಣು ಬಿಗಿದು ಮೃತ ಶರೀರ ಕೊಳೆತು ಹೋಗಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಮಾಹಿತಿ ಸಿಕ್ಕಿದ ಮೇರೆಗೆ ಬಸವ ಅವರ ಕುಟುಂಬಿಕರು ಹೋಗಿ ನೋಡಿದ್ದಾರೆ. ಮೃತದೇಹವು ತಲೆಯಿಂದ ಪಾದದ ವರಗೆ ಪೂರ್ತಿ ಕೊಳೆತು ಎಲುಬು ಕಾಣುವ ಸ್ಥಿತಿಯಲ್ಲಿದ್ದು ಮೃತ ದೇಹದ ಮೈಮೇಲಿನ ಅಂಗಿ ಕುತ್ತಿಗೆಯಲ್ಲಿರುವ ದಾರ ಮತ್ತು ಪದಕ ಹಾಗೂ ಕಪ್ಪು ಬಣ್ಣದ ನೈಲಾನ ಚಡ್ಡಿಯನ್ನು ಅವರ ಕುಟುಂಬದವರು ಮತ್ತು ಅವರ ತಾಯಿ ಗುರುತಿಸಿ ಮೃತದೇಹವು ಬಸವ ರವರ ಮೃತದೇಹವೆಂದು ಖಚಿತಪಡಿಸಿದ್ದಾರೆ.

ಮೃತ ಬಸವ ಆತನ ಸಂಸಾರದ ಜೀವನದಲ್ಲಿ ಭಿನ್ನಾಪ್ರಾಯ ಉಂಟಾಗಿ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದು ಅದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

(ಆತ್ಮಹತ್ಯೆ ಅಂತಿಮವಲ್ಲ, ಆತ್ಮಹತ್ಯೆ ಯಾವುದೇ ಸಮಸ್ಯೆಗೂ ಪರಿಹಾರವಲ್ಲ, ದುಡುಕಿನ ನಿರ್ಧಾರ ತಗೆದುಕೊಳ್ಳುವುದು ಸರಿಯಲ್ಲ.)

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!