spot_img
Thursday, April 2, 2026
spot_img

ಸಾಸ್ತಾನ : ತಪಾಸಣೆಗೆಂದು ಬಂದ ಯುವತಿಯೊಡನೆ ಅನುಚಿತವಾಗಿ ವರ್ತಿಸಿದ ಡಾಕ್ಟರ್‌ !

ಜನಪ್ರತಿನಿಧಿ (ಸಾಸ್ತಾನ) : ಅನಾರೋಗ್ಯದ ಕಾರಣದಿಂದಾಗಿ ಕ್ಲಿನಿಕ್ ಗೆ ತಪಾಸಣೆಗೆಂದು ಬಂದ ಯುವತಿಯೊಡನೆ ಡಾಕ್ಟರ್ ಒಬ್ಬರು ಅನುಚಿತವಾಗಿ ವರ್ತಿಸಿದ ಘಟನೆ ಬ್ರಹ್ಮಾವರ ತಾಲೂಕಿನ ಸಾಸ್ತಾನದಲ್ಲಿ ನಡೆದಿದೆ.

ಸಾಸ್ತಾನದ ಸ್ಥಳೀಯ ನಿವಾಸಿ, ಸದ್ಯ ಮುಂಬೈಯಲ್ಲಿ ವಾಸವಿರುವ 20 ವರ್ಷ ಆಸುಪಾಸಿನ ಪ್ರಾಯದ ಯುವತಿಯೊಬ್ಬಳು ಅನಾರೋಗ್ಯದ ಕಾರಣಕ್ಕೆ ತಪಾಸಣೆಗೆಂದು ಸಾಸ್ತಾನದಲ್ಲಿರುವ ಉಪಾಧ್ಯಾಯ ಕ್ಲಿನಿಕ್ ಗೆ ತೆರಳಿದ್ದಾರೆ.

ತಪಾಸಣೆಯ ವೇಳೆ ಅಲ್ಲಿನ ಡಾಕ್ಟರ್ ರಾಘವೇಂದ್ರ ಉಪಾಧ್ಯಾಯ ಯುವತಿಯೊಡನೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಯುವತಿ ಮನೆಯವರಲ್ಲಿ ವಿಷಯ ತಿಳಿಸಿದ್ದು, ಸ್ಥಳೀಯರೆಲ್ಲಾ ಸೇರಿ ಸಂಜೆ ಡಾಕ್ಟರ್ ಬರುವುದಕ್ಕಾಗಿ ಕಾದು ಡಾಕ್ಟರ್ ರಾಘವೇಂದ್ರ ಉಪಾಧ್ಯಾಯ ಅವರನ್ನು ತರಾಟೆಗೆ ತೆಗೆದುಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ಥಳೀಯರು ಆಕ್ರೋಶದಿಂದ ಡಾಕ್ಟರ್‌ ಗೆ ಥಳಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ನಂತರ ಕೋಟ ಪೊಲೀಸರು ಸ್ಥಳಕ್ಕಾಗಮಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಮೇಲೆ ಎಫ್ ಐ ಆರ್ ದಾಖಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಕೋಟ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!