spot_img
Monday, March 16, 2026
spot_img

ವರಲಕ್ಷ್ಮೀ ಟ್ರಸ್ಟ್‌ನ ಗೃಹದಾನ ಯೋಜನೆಯ 20ನೆ ಮನೆ ಶಂಕುಸ್ಥಾಪನೆ

ಮರವಂತೆ: ಬಿಜೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರ ಅಧ್ಯಕ್ಷತೆಯ ಶ್ರೀ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಮರವಂತೆಯ ಬಡ ಮಹಿಳೆ ದೋಳೆಮನೆ ಚೈತ್ರಾ ಮೋಹನ ಪೂಜಾರಿ ಅವರಿಗೆ ಸಂಪೂರ್ಣ ಉಚಿತವಾಗಿ ನಿರ್ಮಿಸಿಕೊಡುತ್ತಿರುವ ವರಲಕ್ಷ್ಮೀ ನಿಲಯ ನಿರ್ಮಾಣದ ಶಂಕುಸ್ಥಾಪನೆ ಶುಕ್ರವಾರ ನಡೆಯಿತು. ಇದು ಟ್ರಸ್ಟ್ ಬಡವರಿಗೆ ನಿರ್ಮಿಸಿಕೊಂಡುತ್ತಿರುವ 20ನೆ ಮನೆಯಾಗಿದೆ.

ಶಂಕುಸ್ಥಾಪನೆಯ ಸಂದರ್ಭ ಗೌರಿಗದ್ದೆ ಆಶ್ರಮದ ಅವದೂತ ವಿನಯ ಗುರೂಜಿ ಮತ್ತು ನಿಪ್ಪಾಣಿಯ ಶ್ರೀ ಕ್ಷೇತ್ರ ಮಹಾಕಾಳಿ ಮಹಾ ಸಂಸ್ಥಾನದ ಸದ್ಧರ್ಮ ಓಂ ಶಕ್ತಿಪೀಠದ ಅಧಿಪತಿ ಅರುಣಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.

ಉಭಯರನ್ನು ಸ್ವಾಗತಿಸಿ ಮಾತನಾಡಿದ ಗೋವಿಂದ ಬಾಬು ಪೂಜಾರಿ ಚೈತ್ರಾ ಪೂಜಾರಿ ತೀರ ಬಡವರಾಗಿದ್ದು ತಮ್ಮ ಎರಡು ಮಕ್ಕಳೊಡನೆ ಮುರುಕು ಮನೆಯಲ್ಲಿ ದಿನ ದೂಡುತ್ತಿದ್ದಾರೆ. ಊರಿನ ಪ್ರಮುಖರ ಕೋರಿಕೆಯ ಮೇರೆಗೆ ತಮ್ಮ ಟ್ರಸ್ಟ್‌ನ ಗೃಹದಾನ ಅಭಿಯಾನದ ಮುಂದುವರಿಕೆಯಾಗಿ ಈ ಮನೆಯನ್ನು ನಿರ್ಮಿಸಿಕೊಡುತ್ತಿರುವುದಾಗಿ ತಿಳಿಸಿದರು.

ಪುರೋಹಿತ ಶ್ಯಾಮಸುಂದರ ಅಡಿಗ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗಣೇಶಪೂಜಾರಿ, ಉದ್ಯಮಿಗಳಾದ ಸತೀಶ ಪೂಜಾರಿ ಗಂಗೊಳ್ಳಿಯರಮನೆ, ಕರುಣಾಕರ ಬಳ್ಕೋಡು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಜನಾರ್ದನ ಮರವಂತೆ, ನಿವೃತ್ತ ಮುಖ್ಯೋಪಾಧ್ಯಾಯ ಎಂ. ಶಂಕರ ಬಿಲ್ಲವ, ಸಾಧನಾ ಸದಸ್ಯರಾದ ನಾಗೇಶ ಎಸ್. ರಾವ್. ದೇವಿದಾಸ ಶ್ಯಾನುಭಾಗ್, ಮೋಹನ ಹೆಬ್ಬಾರ್, ಕೃಷ್ಣ ಮೊಗವೀರ, ಸಂಗಮ ಯುವಕ ಮಂಡಲದ ಅಧ್ಯಕ್ಷ ಶರತ್ ಮರವಂತೆ, ರಾಜು ಗಾಂಧಿನಗರ, ಇತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!