spot_img
Monday, March 16, 2026
spot_img

ಜನ್ಮದಿನವನ್ನು ಸೈನಿಕರೊಂದಿಗೆ ಆಚರಿಸಿಕೊಂಡ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ

ಬೈಂದೂರು: ಸದಾ ವಿಭಿನ್ನ ಚಿಂತನೆಗಳ ಮೂಲಕ ಸುದ್ಧಿಯಾಗುವ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಈ ಬಾರಿ ತಮ್ಮ ಜನ್ಮದಿನವನ್ನು ಸೈನಿಕರೊಂದಿಗೆ ಆಚರಿಸಿಕೊಳ್ಳುವ ಮೂಲಕ ಗಮನಸಳೆದಿದ್ದಾರೆ.

ಗಡಿಯಲ್ಲಿ ದೇಶ ಕಾಯುತ್ತಿರುವ ಬೈಂದೂರಿನ ಹೆಮ್ಮೆಯ ಸೈನಿಕರ ಮನೆಯ ಸದಸ್ಯರು ಹಾಗೂ ದೇಶ ರಕ್ಷಣೆಯ ಸೇವೆ ಮಾಡಿ ನಿವೃತ್ತಿ ಹೊಂದಿರುವ ಸೈನಿಕರ ಮನೆಗಳಿಗೆ ತೆರಳಿ ಅವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾದರು. ಬೈಂದೂರು ತಾಲ್ಲೂಕಿನ ನಿವೃತ್ತ ವಾಯು ಸೇನಾಧಿಕಾರಿ ಟಿ. ದಿನಕರ್ ಶಾನುಭೋಗ್ ಹಾಗೂ ನಿವೃತ್ತ ಜೆಸಿ‌ಒ ರತ್ನಾಕರ ಬೈಂದೂರು ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ಎಲ್ಲರಿಗೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಯೋಗ ಮತ್ತು ಅವಕಾಶ ಲಭಿಸುವುದಿಲ್ಲ, ನಾವು ಸೈನಿಕರನ್ನು ಸೈನಿಕ ಕುಟುಂಬವನ್ನು ಗೌರವಿಸುವ ಮೂಲಕವೂ ದೇಶಪ್ರೇಮ ಮೆರೆಯಬಹುದು, ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮದಲ್ಲೂ ಸೈನಿಕರನ್ನು ಗೌರವಿಸುವ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!