spot_img
Sunday, February 15, 2026
spot_img

ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ-ನೆಂಪು: ಸಾಂಸ್ಕøತಿಕ ಭವನ ‘ಐಕ್ಯಮ್’ ಮೇ 1ರಂದು ಉದ್ಘಾಟನೆ

ಜನಪ್ರತಿನಿಧಿ ವರದಿ] ಅವಿಭಜಿತ ದ.ಕ ಜಿಲ್ಲೆ ಶೈಕ್ಷಣಿಕ ಭೂಪಟದಲ್ಲಿ ತನ್ನದೆಯಾದ ಮಹತ್ವಿಕೆ ಹೊಂದಿದ ಅಂದಿನ ಮಲ್ನಾಡು ಹೈಸ್ಕೂಲು, ಇಂದಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರು ದಶಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡುತ್ತಿದೆ. ಸಾವಿರಾರು ಸಾಧಕರನ್ನು ಪ್ರಪಂಚಮುಖಕ್ಕೆ ನೀಡಿದ ಈ ವಿದ್ಯಾದೇಗುಲ ಕುಂದಾಪುರ ತಾಲೂಕಿನ ಪ್ರಮುಖ ವಿದ್ಯಾ ಸನ್ನಿಧಿ. ಈ ವಿದ್ಯಾ ಸಂಸ್ಥೆಗೆ ಇನ್ನೊಂದು ಭವ್ಯ ಕೊಡುಗೆ ಸೇರಿಕೊಂಡಿದೆ. ಈ ಸಂಸ್ಥೆಯಲ್ಲಿ ಓದಿ, ಉನ್ನತ ಸ್ಥಾನಮಾನ ಅಲಂಕರಿಸಿದ ಸುಮಾರು 38 ವಿದ್ಯಾರ್ಥಿಗಳು ಒಟ್ಟು ದೇಣಿಗೆಯಿಂದ ಸುಸಜ್ಜಿತವಾದ ಸಾಂಸ್ಕøತಿಕ ಭವನ ತಲೆ ಎತ್ತಿನಿಂತಿದೆ. ಸರಕಾರಿ ಶಿಕ್ಷಣ ಸಂಸ್ಥೆಯ ಮುಂಭಾಗದಲ್ಲಿ ಭವ್ಯವಾದ ಈ ಸಾಂಸ್ಕøತಿಕ ಭವನ ನಿರ್ಮಾಟನ, ಉದ್ದೇಶ, ಆಶಯ ಸಮಸ್ತ ಶಿಕ್ಷಣಾಬಿಮಾನಿಗಳಿಗೆ ಮಾದರಿಯಾಗಿದೆ.

ಸುಮಾರು 1.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಬಹುಮಹ್ವಕಾಂಕ್ಷಿ ಸಾಂಸ್ಕøತಿಕ ಭವನ ಐಕ್ಯಮ್ ಇದೇ ಮೇ 10 ಶನಿವಾರ ಲೋಕಾರ್ಪಣೆಗೊಳ್ಳಲಿದೆ. ಹಳೆ ವಿದ್ಯಾರ್ಥಿ ಸಂಘ, ಸರಕಾರಿ ಪದವಿಪೂರ್ವ ಕಾಲೇಜು-ಕೆ.ಪಿ.ಎಸ್ ವಂಡ್ಸೆ-ನೆಂಪು, ಇಲ್ಲಿ ಸಾಂಸ್ಕøತಿಕ ಸಭಾ ಭವನದ ಉದ್ಘಾಟನೆ ಹಾಗೂ ಹಸ್ತಾಂತರ ಕಾರ್ಯಕ್ರಮ ಮತ್ತು ಹಳೆ ವಿದ್ಯಾರ್ಥಿಗಳ ಸ್ನೇಹ ಸಂಗಮ ಸಮಾರಂಭ ನಡೆಯಲಿದೆ.

ಬೆಳಿಗ್ಗೆ 10-30ಕ್ಕೆ ನಡೆಯುವ ಕಾರ್ಯಕ್ರಮ ಸಭಾಭವನ ಸರಕಾರ (ಶಾಲೆಗೆ) ಹಸ್ತಾಂತರ ಹಾಗೂ ಸಂಸ್ಥೆಯ ಸ್ಥಾಪಕರ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಸಂಜೆ 6 ಗಂಟೆಗೆ ಹಳೆ ವಿದ್ಯಾರ್ಥಿಗಳ ಸ್ನೇಹ ಸಂಗಮ ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದೆ. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಎನ್.ಸಂತೋಷ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ 2.30ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಸಿಂಚನ, 3 ಗಂಟೆಯಿಂದ ಪಂಚವಟಿ ರಂಗಶಾಲೆ ಹಕ್ಲಾಡಿ ಇದರ ಸದಸ್ಯರಿಂದ ನಾಟಕ ‘ಪಂಚವಟಿಯ ಮಾಯಾ ಮುಖಗಳು’ ಸಂಜೆ 7ಕ್ಕೆ ಸನ್ನಿಧಿ ಕಲಾವಿದರು ಉಡುಪಿ ಇವರಿಂದ ಕನ್ನಡ ನಾಟಕ ಅಪ್ಪೆ ಮಂತ್ರದೇವತೆ ಪ್ರದರ್ಶನಗೊಳ್ಳಲಿದೆ.

ಅಂದಿನ ಶಾಸಕ ಯಡ್ತರೆ ಮಂಜಯ್ಯ ಶೆಟ್ಟಿಯವರ ಪ್ರಯತ್ನದಿಂದ 1962ರಲ್ಲಿ 10 ಎಕರೆ ಪ್ರದೇಶದಲ್ಲಿ ಸರಕಾರಿ ಹೈಸ್ಕೂಲ್ ಆರಂಭವಾಯಿತು. ಅಂದಿನಿಂದ ಈ ಪ್ರದೇಶ ಶಿಕ್ಷಣದಲ್ಲಿ ಕ್ರಾಂತಿಕಾರಕ ಹೆಜ್ಜೆ ಇಟ್ಟಿತ್ತು. ವಂಡ್ಸೆ ಹೋಬಳಿಯ ಪ್ರಮುಖ ಹೈಸ್ಕೂಲ್ ಆಗಿ, ಬಳಿಕ ಹೋಬಳಿಯ ಪ್ರಸಿದ್ಧ ಕಾಲೇಜಾಗಿ ಬೆಳೆಯಿತು. ಈ ಪರಿಸರದ ಸಾವಿರಾರು ವಿದ್ಯಾರ್ಥಿಗಳ ಪದವಿಪೂರ್ವ ಶಿಕ್ಷಣದ ಕನಸು ನನಸಾಯಿತು.

ಈ ಸಂಸ್ಥೆ ಕೆ.ಪಿ.ಎಸ್ ಆದ ಬಳಿಕ ಇನ್ನಷ್ಟು ಅಬಿವೃದ್ಧಿಯ ಶಕೆ ಆರಂಭವಾಯಿತು. ಆದರೆ ಒಂದು ವ್ಯವಸ್ಥಿತ ಸಾಂಸ್ಕøತಿಕ ಭವನದ ಅವಶ್ಯತೆ ಇತ್ತು. ಈ ಮಹತ್ವಾಕಾಂಕ್ಷೆಯ ಜವಬ್ದಾರಿ ಸ್ವೀಕರಿಸಿದ ಸಂಸ್ಥೆಯ ಹಳೆವಿದ್ಯಾರ್ಥಿ ಹಾಗು ಸಾಂಸ್ಕೃತಿಕ ಭವನ ನಿರ್ಮಾಣ ಸಮಿತಿ ಅಧ್ಯಕ್ಷ, ನಿವೃತ್ತ ಹಿರಿಯ ಅಧಿಕಾರಿ ಬಿ.ಎನ್.ಶೆಟ್ಟಿ ಅವರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಅವರ ಮಾರ್ಗದರ್ಶನದಲ್ಲಿ ಕಟ್ಟಡದ ನಿರ್ಮಾಣದ ರೂಪುರೇಷೆ ಸಿದ್ಧಪಡಿಸಿದರು. ಈ ಭವನ ನಿರ್ಮಾಣಕ್ಕೆ ಸ್ಫೂರ್ತಿ ತುಂಬಿ ಶಾಲೆಯ ಪ್ರಾಕ್ತನ ವಿದ್ಯಾರ್ಥಿನಿ ಹೊಳ್ಮಗೆ ವಿನೋದ ಶೆಟ್ಟಿಯವರ ಹೆಸರಿನಲ್ಲಿ 75 ಲಕ್ಷ ರೂ. ದೇಣಿಗೆಯನ್ನು ಅಮೆರಿಕದಲ್ಲಿರುವ ಅವರ ಪತಿ ಇಂಜಿನಿಯರ್ ಹಾಗು ಸಂಶೋಧಕ ಹಳ್ಳಾಡು ರವಿ ಎಸ್. ಶೆಟ್ಟಿ ಸಹಕರಿಸಿದ್ದರು. ಪೆÇ್ರೀತ್ಸಾಹದಿಂದ ಉದ್ದೇಶಿತ ಯೋಜನೆಯನ್ನು ಇನ್ನಷ್ಟು ವಿಸ್ತಾರಗೊಳಿಸಿ 1.25 ಕೋಟಿ ರೂ. ವೆಚ್ಚದ 4600 ಚದರ ಅಡಿ ವಿಸ್ತೀರ್ಣದ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು.

ಯೋಜನೆಗೆ ತಗಲುವ ಒಟ್ಟು ವೆಚ್ಚದ ಬಹುಪಾಲನ್ನು ರವಿ ಎಸ್. ಶೆಟ್ಟಿಯವರು ನೀಡಿದ ಬಳಿಕ ಉಳಿದ ಮೊತ್ತವನ್ನು ಶಾಲೆಯ 38 ಹಳೆ ವಿದ್ಯಾರ್ಥಿಗಳು ವೈಯಕ್ತಿಕ ದೇಣಿಗೆ ಮೂಲಕ ಭರಿಸುವ ಮೂಲಕ ಭವ್ಯವಾದ ಭವನ ನೆಂಪುವಿನಲ್ಲಿ ನಿರ್ಮಾಣಗೊಂಡಿದೆ.

ಅತ್ಯಾಧುನಿಕವಾಗಿ ಭವನ ನಿರ್ಮಾಣವಾಗಿದೆ. ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅತ್ಯಂತ ಸೂಕ್ತವಾಗಿ ಧ್ವನಿ ಬೆಳಕು ವಿನ್ಯಾಸ ಮಾಡಲಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಸದಾಕಾಲ ಅನುಕೂಲವಾಗುವಂತೆ ಡಿಜಿಟಲ್ ಗ್ರಂಥಾಲಯ, ಯೋಗ, ಸ್ಮಾರ್ಟ್‍ಕ್ಲಾಸ್, ಬೇರೆ ಬೇರೆ ತರಬೇತಿಗಳಿಗೂ ಪೂರಕವಾಗುವಂತೆ ವಿನ್ಯಾಸ ಮಾಡಲಾಗಿದೆ.

ಇದೊಂದು ಮಾದರಿಯಾದ ಹೆಜ್ಜೆಯಾಗಿದೆ. ಶಿಕ್ಷಣಾಸಕ್ತ ಮನಸ್ಸುಗಳಿಗೆ ಇದು ಸ್ಪೂರ್ತಿಯಾಗಿದೆ. ಸರಕಾರಿ ವಿದ್ಯಾಸಂಸ್ಥೆಗೆ ಹಳೆವಿದ್ಯಾರ್ಥಿಗಳು ಇಷ್ಟೊಂದು ದೊಡ್ಡ ಮೊತ್ತವನ್ನು ಕ್ರೋಡಿಕರಿಸಿ ಶಾಲೆಗೆ ಸಮರ್ಪಿಸುವುದು ರಾಜ್ಯಕೊಂದು ಮಾದರಿಯಾಗಿದೆ. ಈ ವಿಚಾರ ಎಲ್ಲೆಡೆ ಪ್ರಚಾರಕ್ಕೆ ಬರಬೇಕು, ಎಲ್ಲ ಸರಕಾರಿ ವಿದ್ಯಾ ಸಂಸ್ಥೆಗಳಿಗೂ ಇಲ್ಲಿಯ ಹಳೆ ವಿದ್ಯಾರ್ಥಿಗಳು ಆದರ್ಶಪ್ರಾಯರಾಗಿ ನಿಲ್ಲಬೇಕು. ಸರಕಾರಿ ಶಿಕ್ಷಣ ಸಂಸ್ಥೆಗಳು ಎಂದೂ ತಲೆ ತಗ್ಗಸಿಬಾರದು, ತಲೆ ಎತ್ತಿ ಸ್ವಾಭಿಮಾನದಿಂದ ಬಿಗಬೇಕು. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿಯಾಗಿ, ದಕ್ಷ ಸೇವೆ ಸಲ್ಲಿಸಿದ ಬಿ.ಎನ್ ಶೆಟ್ಟಿ ಅವರ ನೇತೃತ್ವದ ತಂಡದ ಕಾರ್ಯ ಶ್ಲಾಘನಾರ್ಯ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!