spot_img
Wednesday, April 1, 2026
spot_img

ಸಂಸ್ಕೃತಿ ಉಳಿಸುವ, ಸಂಸ್ಕಾರ ಬೆಳೆಸುವ ಕಲೆ ಯಕ್ಷಗಾನ-ಬಾಳೆಕುದ್ರು ಶ್ರೀ

ಕೋಟ: ಯಕ್ಷಗಾನ ಒಂದು ಆರಾಧನಾ ಕಲೆ. ಇದರ ಮುಖ್ಯ ಆಶಯ ಸಂಸ್ಕೃತಿ ಉಳಿಸುವುದು, ಸಂಸ್ಕಾರ ಬೆಳೆಸುವುದು. ಪ್ರದರ್ಶನಗಳಿಂದ ಧರ್ಮ ಪ್ರಚಾರವಾಗುತ್ತದೆ, ಭಾರತೀಯ ಸಂಸ್ಕೃತಿ ಉಳಿಯುವಲ್ಲಿ ಸಹಕರಿಸುತ್ತದೆ. ಜನಮಾನಸದ ಒಳಗೆ ಪುರಾಣಗಳ ಆಶಯವನ್ನು ಗಟ್ಟಿ ಮಾಡುತ್ತದೆ. ದೇಹದಂಡನೆಯ ಕಲೆ ಭಗವಂತನಿಗೆ ಪ್ರಿಯವಾದದ್ದು. ಕಲೆಯಿಂದ ಸಂಸ್ಕೃತಿಯ ಉದ್ದಾರವಾಗಬೇಕು. ಮನಸ್ಸು ವಿಕಾಸವಾಗಬೇಕು. ಆದರೂ ಯಕ್ಷಗಾನ ಇತ್ತೀಚಿಗೆ ಭಕ್ತಿ ಹೀನವಾದ, ಲೌಕಿಕ ಪ್ರಸಂಗಗಳ, ಶಾಸ್ತ್ರ ವಿರುದ್ದ ಸಂಭಾಷಣೆಗಳ, ಮನೋವಿಕಾರತೆಯನ್ನು ಹೊಂದಿರುವುದನ್ನು ಗಮನಿಸುತ್ತಿದ್ದೇವೆ. ಹಾಗಾಗಬಾರದು, ಯಾವುದು ಧರ್ಮ ಬಾಹಿರವಾಗಬಾರದು ಎಂದು ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮಿಗಳು ಅಭಿಪ್ರಾಯಪಟ್ಟರು.

ಶ್ರೀ ಗಳು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಆಯೋಜಿಸಿದ್ದ 20 ದಿವಸಗಳ ನಲಿಕುಣಿ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಲಾಕೇಂದ್ರದ ಅಧ್ಯಕ್ಷರಾದ ಆನಂದ.ಸಿ ಕುಂದರ್ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಲೆಕ್ಕಪತ್ರ ಪರಿಶೋಧಕರಾದ ಜತೀಂದ್ರ ಮರವಂತೆ ಉಪಸ್ಥಿತರಿದ್ದರು. ಇಪ್ಪತ್ತು ದಿವಸಗಳ ಶಿಬಿರದ ಪ್ರಾಚಾರ್ಯರನ್ನು ಮತ್ತು ಶಿಕ್ಷಕರನ್ನು ಶ್ರೀಗಳು ಗೌರವಿಸಿದರು, ಆರ್ಥಿಕವಾಗಿ ಸಹಕರಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಲಿಯವರ ಉಪಸ್ಥಿತಿಯಲ್ಲಿ ಶಿಬಿರಾರ್ಥಿಗಳ ಯಕ್ಷಗಾನ ಪ್ರದರ್ಶನ ಪ್ರದರ್ಶಿಸಲ್ಪಟ್ಟಿತು. ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಸ್ವಾಗತಿಸಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ, ಸೀತಾರಾಮ ಸೋಮಯಾಜಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!