spot_img
Wednesday, April 1, 2026
spot_img

ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ಸುಶ್ಮಿತಾ ಎಸ್. ಗಾಣಿಗ ರಾಜ್ಯಕ್ಕೆ ದ್ವಿತೀಯ

ಕುಂದಾಪುರ: ಸರಸ್ವತಿ ವಿದ್ಯಾಲಯ ಆಂಗ್ಲ ಮಾದ್ಯಮ ಪ್ರೌಢಶಾಲೆ ಗಂಗೊಳ್ಳಿ ಇಲ್ಲಿನ ವಿದ್ಯಾರ್ಥಿ ಸುಶ್ಮಿತಾ ಎಸ್.ಗಾಣಿಗ 2024-2025 ರ ಸಾಲಿನ ಎಸ್. ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ರಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ.

ಇವರು ಗಂಗೊಳ್ಳಿ ಎಸ್.ವಿ ಜೂನಿಯರ್ ಕಾಲೇಜು ಹತ್ತಿರದ ನಿವಾಸಿ. ಶಿವಾನಂದ ಗಾಣಿಗ ಮತ್ತು ಮಮತ ಗಾಣಿಗ ಇವರ ಪುತ್ರಿ.

ಯಾವುದೇ ಟ್ಯೂಷನ್ ಕೋಚಿಂಗ್ ಇಲ್ಲದೆ ಶಾಲೆಯಲ್ಲಿ ಶಿಕ್ಷಕರು ಕಲಿಸಿದ್ದನ್ನು ಅತ್ಯಂತ ಶ್ರದ್ದೆಯಿಂದ ಮನನ ಮಾಡಿಕೊಂಡು, ಪ್ರತಿನಿತ್ಯ ಆಸಕ್ತಿಯಿಂದ ಅಧ್ಯಯನ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ. ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಹೆತ್ತವರು, ಸಹೋದರಿ ಉತ್ತಮ ಪ್ರೋತ್ಸಾಹ ನೀಡಿದ್ದಾರೆ. ಎಂದು ಸಂತೋಷ ವ್ಯಕ್ತ ಪಡಿಸುವ ಸುಶ್ಮಿತಾ, 625ಅಂಕವನ್ನು ನಿರೀಕ್ಷೆ ಮಾಡಿದ್ದೆ. ಇಂಗ್ಲಿಷ್‌ನಲ್ಲಿ ಒಂದು ಅಂಕ ಕಡಿಮೆ ಬಂತು. ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಲಿದ್ದೇನೆ. 625 ಅಂಕ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ದುಕೊಂಡು, ಜೆ‌ಇ‌ಇ ಪರೀಕ್ಷೆ ಬರೆಯುವ ಯೋಚನೆ ಮಾಡಿದ್ದೇನೆ. ಐ‌ಎ‌ಎಸ್ ಅಧಿಕಾರಿಯಾಗುವ ಗುರಿ ಹೊಂದಿದ್ದೇನೆ ಎನ್ನುತ್ತಾರೆ.

ಮಗಳ ಸಾಧನೆಗೆ ತಂದೆ ಶಿವಾನಂದ ಗಾಣಿಗ ಹಾಗೂ ತಾಯಿ ಮಮತಾ ಎಸ್ ಗಾಣಿಗ ಸಂತೋಷ ಸಿಹಿ ಹಂಚಿ ಸಂತೋಷ ಹಂಚಿಕೊಂಡಿದ್ದಾರೆ. ಸರಸ್ವತಿ ವಿದ್ಯಾಲಯ ಆಂಗ್ಲ ಮಾದ್ಯಮ ಪ್ರೌಢಶಾಲೆಯ ಶಿಕ್ಷಕ ವರ್ಗ ವಿದ್ಯಾರ್ಥಿನಿಯ ಮನೆಗೆ ತೆರಳಿ ಅಭಿನಂದಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!