spot_img
Monday, February 16, 2026
spot_img

ಬಸ್ರೂರಿನಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಕಾಂಪ್ಲೆಕ್ಸ್ ಮತ್ತು ಎಮ್.ಎನ್.ಶೆಟ್ಟಿ ಹಾಲ್ ಉದ್ಘಾಟನೆ

ಜನಪ್ರತಿನಿಧಿ ವಾರ್ತೆ] ಕುಂದಾಪುರ, ಮೇ.2: ಬಸ್ರೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬ್ರಹ್ಮಲಿಂಗೇಶ್ವರ ಕಾಂಪ್ಲೆಕ್ಸ್ ಮತ್ತು ಎಮ್.ಎನ್.ಶೆಟ್ಟಿ ಹಾಲ್ ಉದ್ಘಾಟನಾ ಕಾರ್ಯಕ್ರಮ ಮೇ 2ರಂದು ಶುಕ್ರವಾರ ನಡೆಯಿತು.

ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ ಎಮ್.ಎನ್.ಶೆಟ್ಟಿ ಹಾಲ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ಬೆಳೆಯುತ್ತಿರುವ ಪಟ್ಟಣಗಳಿಗೆ ಇಂಥಹ ಸೌಲಭ್ಯಗಳ ಅವಶ್ಯತೆ ಇರುತ್ತದೆ. ಊರಿನ ಬೆಳವಣಿಗೆ, ಅಭಿವೃದ್ಧಿಯಲ್ಲಿ ಇಂಥಹ ಕಟ್ಟಡಗಳ ನಿರ್ಮಾಣ ಬಹಳ ಪೂರಕವಾಗುತ್ತದೆ. ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣವಾಗುತ್ತಿರುವುದು ಊರಿನ ಅಭಿವೃದ್ಧಿಯ ಸಂಕೇತ. ಬಸ್ರೂರು ಪ್ರದೇಶಕ್ಕೆ ಇಂಥದ್ದೊಂದು ಹಾಲ್ ಅವಶ್ಯಕತೆಯನ್ನು ನಾಗರಾಜ ಶೆಟ್ಟಿ ಅವರು ಪೂರೈಸಿದ್ದಾರೆ ಎಂದು ಹೇಳಿದ ಅವರು, ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ಹೆಚ್ಚು ಹೆಚ್ಚಾಗಿ ನಡೆಯಲಿ, ಪರಿಸರದ ಜನತೆಗೆ ಅನುಕೂಲವಾಗಲಿ ಎಂದು ಶುಭ ಹಾರೈಸಿದರು.

ಕುಂದಾಪುರ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಶುಭ ಹಾರೈಕೆಯ ಮಾತುಗಳನ್ನಾಡುತ್ತಾ, ಬಸ್ರೂರು ಹೃದಯ ಭಾಗದಲ್ಲಿ ಉತ್ತಮವಾದ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ. ಸಭಾಂಗಣ ಸೇರಿದಂತೆ ವಾಣಿಜ್ಯ ವ್ಯವಹಾರಕ್ಕೂ ಅವಕಾಶ ನೀಡಲಾಗಿದೆ. ಪರಿಸರ ಜನರು ಇದರ ಪ್ರಯೋಜನ ಪಡೆದುಕೊಳ್ಳಲಿ, ಊರಿನ ಅಭಿವೃದ್ಧಿಗೆ ಎಮ್.ಎನ್.ಶೆಟ್ಟಿ ಹಾಲ್ ಪೂರಕವಾಗಲಿ ಎಂದರು.

ಬಸ್ರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೇಳೂರು ದಿನಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬಸ್ರೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರ ಬಿಲ್ಲವ, ಸಿವಿಲ್ ಇಂಜಿನಿಯರ್ ಬಿ.ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು. ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.

ಶ್ರೀಮತಿ ಮತ್ತು ನಾಗರಾಜ ಶೆಟ್ಟಿ ಕೈಲಾಡಿ ಮೇಲ್ಮನೆ ಚಿತ್ತೂರು ಅತಿಥಿಗಳನ್ನು ಗೌರವಿಸಿದರು. ದಿನಕರ ಹೆಗ್ಡೆ ಸ್ವಾಗತಿಸಿದರು. ಶಿಕ್ಷಣ ಇಲಾಖೆಯ ಸಂತೋಷ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಗುಲಾಬಿ ಶೆಟ್ಟಿ ಮತ್ತು ಮಹಾಬಲ ಶೆಟ್ಟಿ, ಶ್ರೀಮತಿ ಸರೋಜಿನಿ ಪಿ.ಶೆಟ್ಟಿ ಮತ್ತು ಪ್ರಕಾಶ್ಚಂದ್ರ ಶೆಟ್ಟಿ ಗುಲ್ವಾಡಿ ದೊಡ್ಮನೆ, ಶ್ರೀಮತಿ ನಿಶಾ ಎನ್.ಶೆಟ್ಟಿ ಮತ್ತು ನಾಗರಾಜ ಶೆಟ್ಟಿ, ಗಾನವಿ ಎನ್ ಶೆಟ್ಟಿ ಮತ್ತು ಚಿಂತನಾ ಎನ್ ಶೆಟ್ಟಿ ಗುಳ್ಳಾಡಿ ಪದ್ಮಯ್ಯ ಶೆಟ್ರಮನೆ ಬೇಳೂರು ಅತಿಥಿಗಳನ್ನು ಸ್ವಾಗತಿಸಿಕೊಂಡರು.

ಎಮ್.ಎನ್.ಶೆಟ್ಟಿ ಹಾಲ್ ವಿಶೇಷತೆ:
ಬಸ್ರೂರು ಭಾಗಕ್ಕೆ ಅತ್ಯಂತ ಅಗತ್ಯವಾಗಿದ್ದ ಸುಸಜ್ಜಿತ ಸಭಾಂಗಣ ನಿರ್ಮಾಣವಾಗಿದೆ. ಮದುವೆ, ಅರತಕ್ಷತೆ, ಇತ್ಯಾದಿ ಶುಭಸಮಾರಂಭಗಳಿಗೆ ಅತ್ಯಂತ ಪ್ರಶಸ್ತವಾದ ಸಭಾಂಗಣ ಇದಾಗಿದ್ದು, ಸರ್ವಾಂಗ ಸುಂದರವಾಗಿ ನಿರ್ಮಾಣಗೊಂಡಿದೆ. ಈ ಹಾಲ್ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ. 600 ಆಸನಗಳ ವ್ಯವಸ್ಥೆಯನ್ನು ಹೊಂದಿದೆ. ಲಿಪ್ಟ್ ಸೌಲಭ್ಯ ಇದೆ. ಹಾಲ್‌ನಲ್ಲಿ ಕ್ಯಾಟರಿಂಗ್ ಸೌಲಭ್ಯ, ಹಾಗೂ ತಮ್ಮದೇ ಕ್ಯಾಟರಿಂಗ್ ವ್ಯವಸ್ಥೆಗೂ ಅವಕಾಶ ನೀಡಲಾಗಿದೆ. ಸಂಪೂರ್ಣ ಸಿ.ಸಿ ಕ್ಯಾಮರಾದ ಕಣ್ಗಾವಲು, ವಿಶಾಲವಾದ ವಾಹನದ ನಿಲುಗಡೆಗೆ ಸ್ಥಳಾವಕಾಶ ಇದೆ. ತೀರಾ ಬಡತನದಲ್ಲಿರುವವರಿಗೆ ಶೇ.15ರಷ್ಟು ರಿಯಾಯತಿ ವ್ಯವಸ್ಥೆ ಇದೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!