spot_img
Wednesday, April 1, 2026
spot_img

ಬಿ.ಬಿ. ಹೆಗ್ಡೆ ಕಾಲೇಜು : ಇಂಗ್ಲೀಷ್ ಡೇ ಆಚರಣೆ | ಉಪನ್ಯಾಸ

ಜನಪ್ರತಿನಿಧಿ (ಕುಂದಾಪುರ) : ಇಂಗ್ಲೀಷ್ ಜಾಗತಿಕ ಭಾಷೆಯಾಗಿದ್ದು, ಇಂದು ಆ ಭಾಷೆಯ ಅರಿವು ಅಗತ್ಯ. ಭಾಷೆಯನ್ನು ಕಲಿಯುವ ಸಂದರ್ಭದಲ್ಲಿ ಅದರಲ್ಲಿನ ಲಾಲಿತ್ಯ ಮತ್ತು ಅರ್ಥವಿಶೇಷತೆಗಳನ್ನು ಅರಿತಾಗ ಇಂಗ್ಲೀಷ್ ಕಲಿಕೆ ಸುಲಭ ಸಾಧ್ಯ. ಇದನ್ನು ಅರಿಯಲು ಕವಿ ಶೇಕ್ಸ್ಪಿಯರ್‌ನ ನಾಟಕಗಳು ಮತ್ತು ಕವಿತೆಗಳು ಸಹಾಯ ಮಾಡುತ್ತವೆ ಎಂದು ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ವನಿತಾ ಜೆ. ಶೆಟ್ಟಿ ಹೇಳಿದರು.

ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ವಿಭಾಗ ಮತ್ತು ಇಂಗ್ಲೀಷ್ ಸಂಘದ ಆಶ್ರಯದಲ್ಲಿ ಕವಿ ಶೇಕ್ಸ್ಪಿಯರ್‌ನ ಹುಟ್ಟಿದ ಮತ್ತು ಮರಣ ದಿನವಾದ ಇಂಗ್ಲೀಷ್ ಡೇ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು, ಐಕ್ಯೂಎಸಿ ಸಂಯೋಜಕಿ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ದೀಪಿಕಾ ಜಿ., ಇಂಗ್ಲೀಷ್ ಸಂಘದ ಸಂಯೋಜಕರಾದ ಸ್ಟಾಲಿನ್ ಡಿಸೋಜ, ಸ್ವಾತಿ ಜಿ. ರಾವ್ ಉಪಸ್ಥಿತರಿದ್ದರು.

ಇಂಗ್ಲೀಷ್ ಡೇ ಪ್ರಯುಕ್ತ ಆಯೋಜಿಸಿದ ವಿವಿಧ ಸ್ಪರ್ಧೆಯ ಬಹುಮಾನಿತರ ಪಟ್ಟಿಯನ್ನು

ಕಾರ್ಯಕ್ರಮದ ಸಂಯೋಜಕಿ ರವೀನಾ ಸಿ. ಪೂಜಾರಿ ವಾಚಿಸಿದರು. ವಿದ್ಯಾರ್ಥಿಗಳಾದ ಐಶ್ವರ್ಯ ಸ್ವಾಗತಿಸಿ, ವೈಷ್ಣವಿ ಅತಿಥಿಗಳನ್ನು ಪರಿಚಯಿಸಿ, ಅಭಿಷೇಕ್ ವಂದಿಸಿ, ಸ್ವಸ್ತಿಕ್ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!