spot_img
Wednesday, April 1, 2026
spot_img

ವಿ.ಕೆ.ಆರ್.ಕುಂದಾಪುರ: ಶುಭ ವಿದಾಯ ಕೂಟ

ಕುಂದಾಪುರ: ವಿದ್ಯಾರ್ಥಿ ಜೀವನವೆಂದರೆ ತಪಸ್ವಿ ಜೀವನ ಎಂಬ ಕುವೆಂಪುರವರ ಮಾತನ್ನು ನೆನಪಿಸುತ್ತಾ, ಒಂದು ಅಂಕಪಟ್ಟಿಯಿಂದ ವ್ಯಕ್ತಿಯ ಚಾರಿತ್ರ್ಯವನ್ನು ಅಳೆಯಲು ಸಾಧ್ಯವಿಲ್ಲ. ಚಾರಿತ್ರ್ಯ ಎಂದರೆ ಶಿಕ್ಷಣ. ಜ್ಞಾನವೆನ್ನುವುದು ನಮ್ಮ ಜೀವನದಲ್ಲಿ ನಿಜವಾಗಿ ಕಾಣುವಂತಹ ಒಂದು ಕಣ್ಣು. ಈ ಕಣ್ಣಿನ ಮೂಲಕ ಪ್ರಪಂಚವನ್ನು ಕಾಣಬಹುದು. ಮಕ್ಕಳು ಯಾರೂ ಕೆಟ್ಟವರಲ್ಲ; ಮಕ್ಕಳು ಕೆಟ್ಟವರಾಗಬೇಕಾದರೆ ಮನೆಯ ಪರಿಸರಕೆಟ್ಟದ್ದಾಗಿರಬೇಕು; ಮಕ್ಕಳ ಒಳ್ಳೆತನವನ್ನು ಪ್ರೋತ್ಸಾಹಿಸಬೇಕು ಎಂದು ಬೆಂಗಳೂರು ರಾಮಕೃಷ್ಣಮಠದ ಸ್ವಾಮಿ ವೀರೇಶಾನಂದಜಿಯವರು ಮಾತನಾಡಿದರು.

ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಮತ್ತುವಿ. ಕೆ. ಆರ್. ಶಾಲೆಗಳು‌ಆಯೋಜಿಸಿದ ೧೦ನೇ ತರಗತಿ ವಿದ್ಯಾರ್ಥಿಗಳ ವಿದಾಯ ಕೂಟದಲ್ಲಿ ಪೋಷಕರನ್ನು ಮತ್ತು ಮಕ್ಕಳನ್ನು ಕುರಿತು ಮಾತನಾಡಿದರು.

ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾರಾಜೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೀತೇಶ್ ಶೆಟ್ಟಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವಿವಿಧವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಉಪಪ್ರಾಂಶುಪಾಲೆ ಮತ್ತು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿಶುಭಾಕೆ. ಎನ್. ಮತ್ತು ಶಿಕ್ಷಕಿ ಪವಿತ್ರಾ ಎಸ್. ಪುತ್ರನ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!