spot_img
Wednesday, April 1, 2026
spot_img

ಇದು ವಿಜಯೋತ್ಸವ ಅಲ್ಲ, ಆರಂಭಿಕ ಯಶಸ್ಸು ಅಷ್ಟೇ | ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೆ ಈ ಪ್ರಕರಣದ ಬೆಂಬಿಡೆವು : ಪ್ರತಾಪಚಂದ್ರ ಶೆಟ್ಟಿ

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಬಹುಕೋಟಿ ಹಗರಣ | ಜಿಲ್ಲಾ ರೈತ ಸಂಘದ ಅಹೋರಾತ್ರಿ ಧರಣಿ ಅಂತ್ಯ

ಜನಪ್ರತಿನಿಧಿ (ಬ್ರಹ್ಮಾವರ) : ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿರುವ ಕಾರ್ಯಾಂಗದ ಅಧಿಕಾರಿಗಳು, ನ್ಯಾಯಾಂಗ ವ್ಯವಸ್ಥೆ, ಜನರಿಂದ ಆರಿಸಿ ಹೋದ ಜನಪ್ರತಿನಿಧಿಗಳು ತೋರಿದ ಅಸಡ್ಡೆ ನಿಜಕ್ಕೂ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮಾರಕವಾಗಿದೆ. ಭ್ರಷ್ಟಾಚಾರದ ಪ್ರಕರಣಗಳಲ್ಲಿ ಸರಕಾರದ ಪೂರ್ವಾನುಮತಿಗೆ ಬಂದ 3 ತಿಂಗಳಿನಲ್ಲಿ ಒಪ್ಪಿಗೆ ಅಥವಾ ತಿರಸ್ಕರಿಸಬೇಕೆಂದು ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನವಿದ್ದರೂ ಕಳೆದ ಎರಡೂವರೆ ವರ್ಷಗಳಿಂದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಹಗರಣದ ಬಗ್ಗೆ ಇಡೀ ಸರ್ಕಾರಿ ವ್ಯವಸ್ಥೆ ಮೌನ ವಹಿಸಿರುವುದು ಈ ಕಾಲಮಾನದ ದುರಂತ  ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಬಹುಕೋಟಿ ರೂ. ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ವಿಳಂಬ ನೀತಿ ಖಂಡಿಸಿ, ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಮುಂಭಾಗದಲ್ಲಿ ಕಳೆದ 49 ದಿನಗಳಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಪೂರ್ವಾನುಮತಿ ನೀಡಿರುವ ಹಿನ್ನೆಲೆಯಲ್ಲಿ ಹಿಂಪಡೆದು, ರೈತರನ್ನು, ರೈತಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸರಕಾರದ ಹಣ ಲೂಟಿಯಾದಾಗ ಸಿಗಬೇಕಾದ ನ್ಯಾಯ ದೊರಕಿಲ್ಲ. ಬೇರೆ ಬೇರೆ ಸ್ತರಗಳಲ್ಲಿ ಶಾಸಕಾಂಗ, ಸರಕಾರದ ಗಮನಕ್ಕೆ ತಂದರೂ ಸೂಕ್ತ ಸ್ಪಂದನಸಲಿಲ್ಲ. ಉಡುಪಿ ಜಿಲ್ಲಾ ರೈತ ಸಂಘ ಹೋರಾಟಕ್ಕೆ ಮುಂದಾಯಿತು. ಸಮಾನ ಮನಸ್ಕರ ಒಟ್ಟು ಸೇರಿ ಈ ಪ್ರಕರಣದ ವಿರುದ್ಧ ಅಹೋರಾತ್ರಿ ಧರಣಿ ನಡೆಸಿತ್ತು, ಸದ್ಯ ಸರಕಾರ ಪ್ರಾಸಿಕ್ಯೂಶನ್‌ಗೆ ಒಪ್ಪಿಗೆ ನೀಡಿದ್ದು, ಇದು ನಮ್ಮ ಹೋರಾಟಕ್ಕೆ ಸಿಕ್ಕ ಆರಂಭಿಕ ಹಂತದ ಯಶಸ್ಸು. ಆದರೆ ಇದು ವಿಜಯೋತ್ಸವ ಅಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವರೆಗೆ ಈ ಪ್ರಕರಣದ ಬೆಂಬಿಡುವುದಿಲ್ಲ. ನಾವಿಂದು ಯಾವ ಪರಿಸ್ಥಿತಿಯಲ್ಲಿ ನಮ್ಮ ಹಕ್ಕು, ನ್ಯಾಯ ಕೇಳಬೇಕಾಗಿದೆ ಎಂಬುದು ಈ ಹೋರಾಟದ ಮೂಲಕ ಅರಿತುಕೊಳ್ಳಬೇಕಿದೆ. ಸತತ ಎರಡುವರೆ ವರ್ಷಗಳಿಂದ ಈ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ರೈತ ಸಂಘ ಹೋರಾಟ ಮಾಡುತ್ತಾ ಬಂದಿದೆ. ನಮ್ಮ ಹೋರಾಟಕ್ಕೆ ಅನೇಕ ಸಂಘ ಸಂಸ್ಥಗಳು ಬೆಂಬಲ ಸೂಚಿಸಿವೆ. ನಮ್ಮೊಂದಿಗೆ ಕೈಜೋಡಿಸಿದ ಎಲ್ಲಾ ಸಂಸ್ಥೆಗಳಿಗೆ, ರೈತರಿಗೆ ಇದೇ ಸಂದರ್ಭದಲ್ಲಿ ಅವರು ಕೃತಜ್ಞತೆ ಸಲ್ಲಿಸಿದರು.

ಜಿಲ್ಲೆಯ ಯಾವೊಬ್ಬ ಚುನಾಯಿತ ಪ್ರತಿನಿಧಿಯೂ ಈ ಪ್ರಕರಣದ ಬಗ್ಗೆ ಈವರೆಗೆ ಮಾತನಾಡಿಲ್ಲ. ಚುನಾಯಿತ ಪ್ರತಿನಿಧಿಯೊಬ್ಬ ಎಷ್ಟು ಕಾಲ ಅಧಿಕಾರದಲ್ಲಿದ್ದಾನೆ ಎನ್ನುವುದು ಮುಖ್ಯವಲ್ಲ. ಅಧಿಕಾರದಲ್ಲಿ ಇರುವಾಗ ಜನಪರವಾಗಿ ಏನು ಮಾಡಿದ್ದಾನೆ ಎನ್ನುವುದು ಮುಖ್ಯ. ಇದನ್ನು ನಮ್ಮ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಲಿ. ಇತ್ತೀಚೆಗೆ ಐವನ್‌ ಡಿಸೋಜಾ ಹಾಗೂ ಮಂಜುನಾಥ ಭಂಡಾರಿ ಅವರು ಈ ಸಂಬಂಧಿಸಿದಂತೆ ಧ್ವನಿ ಎತ್ತಿರುವುದನ್ನು ಬಿಟ್ಟರೇ, ಯಾವೊಬ್ಬ ಚುನಾಯಿತ ಜನರ ಪ್ರತಿನಿಧಿ ಈ ಬಗ್ಗೆ ಧ್ವನಿ ಎತ್ತದೆ ಇರುವುದು ದುರಂತ ಎಂದು ಅವರು ಆಕ್ರೋಶ ಹೊರ ಹಾಕಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ನ್ಯಾಯವಾದಿ ಉಮೇಶ್‌ ಶೆಟ್ಟಿ ಶಾನ್ಕಟ್ಟು ಸೇರಿ ಮತ್ತಿತರರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರೈತ ಸಂಘದ 13 ವಲಯಗಳ ಅಧ್ಯಕ್ಷರಗಳು ಮಾತ್ರವಲ್ಲದೇ, ರೈತ ಮುಖಂಡರಾದ ಜಯಶೀಲ ಶೆಟ್ಟಿ, ಭೋಜು ಕುಲಾಲ್, ಅಶೋಕ್ ಶೆಟ್ಟಿ ಚೋರಾಡಿ, ಪ್ರದೀಪ್ ಬಲ್ಲಾಳ್ ಶಶಿಧರ ಶೆಟ್ಟಿ, ಭುಜಂಗ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಮುಖಂಡರಾದ ಅಶೋಕ್ ಕುಮಾರ್ ಕೊಡವೂರು, ಎಸ್. ರಾಜು ಪೂಜಾರಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಮುನಿಯಾಲು ಉದಯಕುಮಾ‌ರ್ ಶೆಟ್ಟಿ, ಎಂ.ಎ.ಗಫೂರ್, ಗೀತಾ ವಾಗ್ಲೆ, ವೆರೆನಿಕಾ ಕರ್ನೆಲಿಯೋ, ಮಲ್ಯಾಡಿ ಶಿವರಾಮ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ ಸ್ವಾಗತಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ಉದಯ್ ಕುಮಾರ್ ಶೆಟ್ಟಿ ಅಡಿಕೆಕೊಡ್ಲು ಧನ್ಯವಾದ ಸಮರ್ಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!