spot_img
Wednesday, April 1, 2026
spot_img

ವಿಜೃಂಭಣೆಯ ಬಾರಕೂರು ಪಂಚಲಿಂಗೇಶ್ವರ ಬ್ರಹ್ಮರಥೋತ್ಸವ

ಜನಪ್ರತಿನಿಧಿ ವಾರ್ತೆ] ಬ್ರಹ್ಮಾವರ: ಉಡುಪಿ ಜಿಲ್ಲೆಯ ಪುರಾಣ ಪ್ರಸಿದ್ಧ, ಐತಿಹಾಸಿಕ ಹಿನ್ನೆಲೆಯ ಮಹತೋಭಾರ ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಬಾರಕೂರು ಇಲ್ಲಿನ ಬ್ರಹ್ಮರಥೋತ್ಸವ ಏಪ್ರಿಲ್ ೫ ಶನಿವಾರ ನಡೆಯಿತು.

ಸಾವಿರಾರು ಭಕ್ತಾಭಿಮಾನಿಗಳು ರಥೋತ್ಸವದಲ್ಲಿ ಪಾಲ್ಗೊಂಡರು. ಚಾರಿತ್ರಿಕ ನಗರಿ ರಥೋತ್ಸವಕ್ಕೆ ಜಿಲ್ಲೆಯ ಬೇರೆ ಬೇರೆ ಭಾಗದಿಂದ ಭಕ್ತಾದಿಗಳು ಆಗಮಿಸಿದ್ದರು. ಅತ್ಯಂತ ಸುಂದರವಾದ, ಭವ್ಯವಾದ ರಥದಲ್ಲಿ ಪಂಚಲಿಂಗೇಶ್ವರ ಸ್ವಾಮಿ ವಿರಾಜಮಾನವಾಗಿ ಸಾಗುವ ದೃಶ್ಯ ನಯನ ಮನೋಹರವಾಗಿತ್ತು.

ಮಾ.30 ಆದಿತ್ಯವಾರ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ನಿತ್ಯವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಶನಿವಾರ ಬ್ರಹ್ಮರಥೋತ್ಸವ, ಮಧ್ಯಾಹ್ನ ೧೧.೩೦ಕ್ಕೆ ಮಹಾಪೂಜೆ, ರಥಾರೋಹಣ ಬಲಿ, ೧೨.೩೦ಕ್ಕೆ ರಥಾವರೋಹಣ, ಸಂಜೆ ೬ ಗಂಟೆಗೆ ರಥೋತ್ಸವ, ಓಲಗ ಮಂಟಪ ಸೇವೆ-ಅಷ್ಟಕ-ಸಂಗೀತ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ೭ ಗಂಟೆಗೆ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ ರಾಜ ರುದ್ರಕೋಪ ಪ್ರದರ್ಶನಗೊಂಡಿತು.

ಈ ಸಂದರ್ಭದಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿ.ಮಂಜುನಾಥ ರಾವ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಸುಗ್ಗಿ ಸುಧಾಕರ ಶೆಟ್ಟಿ, ಸೇವಾ ಸಮಿತಿ ಗೌರವಾಧ್ಯಕ್ಷರಾದ ವಿಠಲ ಎಸ್ ಹೆಗ್ಡ, ಅರ್ಚಕರಾದ ವೆಂಕಟರಮಣ ಭಟ್, ಸೇವಾ ಸಮಿತಿ ಉಪಾಧ್ಯಕ್ಷರಾದ ಶ್ರೀನಿವಾಸ ಶೆಟ್ಟಿಗಾರ್, ಸೇವಾ ಸಮಿತಿ ಅಧ್ಯಕ್ಷರಾದ ಬಿ. ಶಾಂತಾರಾಮ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಂದರ ಶೆಟ್ಟಿ, ಕೂಸ ಎಲ್.ಕುಂದರ್ ಹೊಸ್ಕೆರೆ, ಶ್ರೀಮತಿ ಭಾರತಿ ಆರ್.ಕಾಮತ್, ಮಂಜುನಾಥ ಪೂಜಾರಿ ಹೊಸಾಳ ಗರಡಿ, ಪಾಂಡುರಂಗ ನಾಯಕ್, ಕು.ಉಮಾ ಕೆ.ಎಸ್ ಹಾಗೂ ಉಪಾದಿವಂತರು, ಮಾಗಣಿಯವರು, ಊರವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!