spot_img
Saturday, March 21, 2026
spot_img

ಪ್ರಸಿದ್ಧ ಮಕ್ಕಳ ಸಾಹಿತಿ ನೆಂಪು ನರಸಿಂಹ ಭಟ್ಟ ನಿಧನ

ಕುಂದಾಪುರ: ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಉಪನ್ಯಾಸಕ, ಪ್ರಸಿದ್ಧ ಮಕ್ಕಳ ಸಾಹಿತಿ ನೆಂಪು ನರಸಿಂಹ ಭಟ್ಟ ಇನ್ನೂ ನೆನಪು ಮಾತ್ರ. ಅವರು ಬುಧವಾರ ನಿಧನರಾದರು.

‘ನ.ಭ. ನೆಂಪು’ ಎನ್ನುವ ಕಾವ್ಯನಾಮದ ಮೂಲಕ ಪ್ರಸಿದ್ಧರಾದ ಇವರು ಶಿಶು ಸಾಹಿತ್ಯ ರಚನೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಅಧ್ಯಾಪಕರಾಗಿ ವೃತ್ತಿಜೀವನ ಉಪನ್ಯಾಸಕರಾಗಿ ನಿವೃತ್ತರಾದರು. ರಾಜ್ಯ ಮತ್ತು ರಾಷ್ಟ್ರ ಶಿಕ್ಷಕ ಪ್ರಶಸ್ತಿ ಅವರ ಸೇವೆಗೆ ಸಂದ ಗೌರವಗಳು, ದ.ಕ. ಜಿಲ್ಲಾ ಮಕ್ಕಳ ಸಾಹಿತಿ ’ಸಂಗಮ’, ’ಸುಹಾಸಂ’ ಮೊದಲಾದ ಸಂಸ್ಥೆಗಳಲ್ಲಿ ಅವರು ಜೀವನಾಡಿ. ಭಾಷಾ ಬೋಧನೆಯ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿ) ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಲ್ಲಿಯೂ ನೀಡಿದ ಕೊಡುಗೆ ದೊಡ್ಡದು. ’ಕಂದನಾಕು’ ’ತೋಳವೈದ್ಯ’ (ಕಥನಕವನ), ’ನನ್ನ ದೇವರು’ ಅವರು ಶಿಶು ಸಾಹಿತ್ಯಕ್ಕೆ ನೀಡಿದ ಕಾಣೆ. ’ಕನಸು ಕಳು ’ನಿರ್ಬಂಧಿ’ ’ಬೆಳಕು’ ಮೊದಲಾದವು ಅವರ ಪ್ರಸಿದ್ದ ಕೃತಿಗಳು. ನೆಂಪು ಪ್ರಕಾಶನದ ಮೂಲಕ ಅವರು ಅನೇಕರ ಸಾಹಿತ್ಯ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!