spot_img
Saturday, March 21, 2026
spot_img

ತ್ರಾಸಿಯಲ್ಲಿ ಪ್ರೆಸ್ಟೀಜ್ ಪ್ಯಾಲೇಸ್ ನಕ್ಷತ್ರ ಬ್ಯಾಂಕ್ವೆಟ್ ಹಾಲ್ ಉದ್ಘಾಟನೆ

ಕುಂದಾಪುರ: ಮಾ.31: ತ್ರಾಸಿಯ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಸಕಲ ಆಧುನಿಕ ಸೌಲಭ್ಯಗಳೊಂದಿಗೆ ನೂತನವಾಗಿ ನಿರ್ಮಿಸಿರುವ ಬ್ರಹ್ಮಶ್ರೀ ಸಂಸ್ಥೆಯ ಆಡಳಿತದ ಪ್ರೆಸ್ಟೀಜ್ ಪ್ಯಾಲೇಸ್ ನಕ್ಷತ್ರ ಬ್ಯಾಂಕ್ವೆಟ್ ಹಾಲ್ ಉದ್ಘಾಟನೆ ಮಾ. 31ರ ಸೋಮವಾರ ಜರುಗಿತು.

ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಸಿ. ಸದಾಶಿವ ಶೆಟ್ಟಿ ಸಭಾಂಗಣದ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ತನ್ನ ಊರಿಗೆ ಏನಾದರೂ ಸೇವೆ ನೀಡಬೇಕು ಎನ್ನುವ ಮಹತ್ವಕಾಂಕ್ಷೆ ಇಟ್ಟುಕೊಂಡ ಬ್ರಹ್ಮಶ್ರೀ ಸಂಸ್ಥೆಯವರು ಇದೀಗ ಅತ್ಯಾಧ್ಭುತವಾದ ಎಲ್ಲರಿಗೂ ಅನುಕೂಲಕ್ಕೆ ತಕ್ಕಂತೆ ಸುಸಜ್ಜಿತವಾದ ಸಭಾಭವನವನ್ನು ಕೊಡುಗೆಯಾಗಿ ನೀಡಿದ್ದಾರೆ. ಹೋಟೆಲ್ ಉದ್ಯಮದ ಜೊತೆಯಲ್ಲಿ ಜನರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಸಭಾಭವನ ನಿರ್ಮಾಣ ಮಾಡಿದ್ದಾರೆ. ಬೆಳೆಯುತ್ತಿರುವ ನಗರಗಳಿಗೆ ಇಂಥಹ ಅತ್ಯಾಧುನಿಕ ಸೌಲಭ್ಯಗಳು ಅಗತ್ಯವಾಗಿದೆ ಎಂದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಾಬು ಹೆಗ್ಡೆ ಭೋಜನಾಲಯ ಉದ್ಘಾಟನೆ ಮಾಡಿದರು. ಆಜ್ರಿ ಶ್ರೀ ಶನೇಶ್ವರ ದೇವಸ್ಥಾನದ ಮೊಕ್ತೇಸರಾರದ ಅಶೋಕ ಶೆಟ್ಟಿ ನಕ್ಷತ್ರ ಬ್ಯಾಂಕ್ವೆಟ್ ಹಾಲ್ ಉದ್ಘಾಟಿಸಿದರು. ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿಯವರು ನಾಮಫಲಕವನ್ನು ಅನಾವರಣಗೊಳಿಸಿದರು. ಶೃಂಗೇರಿ ಶ್ರೀ ರಾಜೀವ ಗಾಂಧಿ ಕ್ಯಾಂಪಸ್ ಸಹಾಯಕ ಪ್ರಾಧ್ಯಾಪಕ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಜೋತಿಷ್ಯ ವಿದ್ವಾನ್ ಡಾ| ರಮಾನಂದ ಭಟ್ ಎನ್ ಅವರು ಕಾರ್ಯಕ್ರಮವನ್ನು ಆಶೀರ್ವಚಿಸಿದರು.

ಮುಖ್ಯ ಅತಿಥಿಗಳಾಗಿ ಬಿಜೆಪಿ ಬೈಂದೂರು ಮಂಡಲ ಮಾಜಿ ಅಧ್ಯಕ್ಷರಾದ ಪ್ರಣಯ ಕುಮಾರ್ ಶೆಟ್ಟಿ ಹಕ್ಲಾಡಿ, ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷರಾದ ಸಂತೋಷ ಕುಮಾರ ಶೆಟ್ಟಿ ಬಾಳೆಮನೆ ಹಕ್ಲಾಡಿ, ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಿಥುನ್ ದೇವಾಡಿಗ, ಬೆಂಗಳೂರು ಉದ್ಯಮಿಗಳಾದ ಬಿ.ಎಸ್ ಪ್ರಶಾಂತ್ ಶೆಟ್ಟಿ, ಗಂಗೊಳ್ಳಿ ಎಸ್.ಐ ಹರೀಶ ನಾಯ್ಕ ಹಾಗೂ ಸೀತಾರಾಮ ಶೆಟ್ಟಿ ನಾಲ್ಲಟ್ಟೆ ಶಿರೂರು, ಚಂದ್ರಶೇಖರ ಶೆಟ್ಟಿ ವೇದಾದ್ರಿ ಶಿರೂರುಮನೆ ಇಡೂರು ಕುಂಜ್ಞಾಡಿ, ಪ್ರೆಸ್ಟೀಜ್ ಪ್ಯಾಲೇಸ್ ಮಾಲಕರಾದ ಸುಭಾಶ್ ಕುಮಾರ್ ಶೆಟ್ಟಿ ನಾಲ್ಕಟ್ಟೆ ಉಪಸ್ಥಿತರಿದ್ದರು.’

ಈ ಸಂದರ್ಭದಲ್ಲಿ ಸಭಾಭವನದ ನಿರ್ಮಾಣ ಮಾಡುವಲ್ಲಿ ಶ್ರಮಿಸಿದವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಪ್ರೀತಿ ಸುಭಾಶ್ ಕುಮಾರ್ ಶೆಟ್ಟಿ ವೇದಾದ್ರೀ ಇಡೂರು ಕುಂಜ್ಞಾಡಿ, ಬಿ.ಎನ್ ಸದೀಪ ಶೆಟ್ಟಿ ಶ್ರೇಯಾ ಕುಟೀರ ನೂಜಾಡಿ ಬ್ರಹ್ಮೇರಿ, ಪ್ರವೀಣ್ ಶೆಟ್ಟಿ ಕಾಳಾವರ ಚಾವಡಿಮನೆ, ಕಾರ್ತಿಕ್ ಶೆಟ್ಟಿ ನಟ್ಟಿಬೈಲುಕೆಳಮನೆ ತಲ್ಲೂರು ಪ್ರೆಸ್ಟೀಜ್ ಪ್ಯಾಲೇಸ್ ಆಡಳಿತ ಪಾಲುದಾರರು ಉಪಸ್ಥಿತರಿದ್ದರು.

ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಅರೆಹೊಳೆ ಪ್ರತಿಷ್ಠಾನ (ರಿ) ಮಂಗಳೂರು ನಂದಗೋಕುಲ ಕಲಾವಿದರಿಂದ ‘ಬಿಡುವನೇ ಬ್ರಹ್ಮಲಿಂಗ’ ದೃಶ್ಯರೂಪಕ ಕಾರ್ಯಕ್ರಮ ನಡೆಯಿತು. ಪತ್ರಕರ್ತ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ, ಪೂಜಾ ಅವರು ಪ್ರಾರ್ಥಿಸಿ, ಆರ್ ಜೆ ನಯನ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!