spot_img
Tuesday, March 3, 2026
spot_img

ಸುರಭಿ ಬೈಂದೂರು: ವಿಶ್ವ ರಂಗಭೂಮಿ ದಿನಾಚರಣೆ

ಬೈಂದೂರು: ಇಲ್ಲಿನ ರಂಗಭೂಮಿ ಹಾಗೂ ಸಾಂಸ್ಕೃತಿಕ ವೇದಿಕೆಯಾದ ಸುರಭಿ ಸಂಸ್ಥೆಯ ಆಶ್ರಯದಲ್ಲಿ ಬೈಂದೂರು ರೋಟರಿಯ ಸಹಕಾರದಲ್ಲಿ “ವಿಶ್ವ ರಂಗಭೂಮಿ” ದಿನಾಚರಣೆಯನ್ನು ಆಚರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ವಹಿಸಿದ್ದರು.ರಂಗ ಸಂವಾದಕರಾಗಿ ರಥಬೀದಿ ಗೆಳೆಯರು ಉಡುಪಿ ಇದರ ಅಧ್ಯಕ್ಷರು ಹಾಗೂ ರಂಗಕರ್ಮಿಗಳು ಆದ ನಾಗೇಶ್ ಉದ್ಯಾವರ ಆಗಮಿಸಿದ್ದು ರಂಗಸಂವಾದವನ್ನು ನೆರವೇರಿಸಿಕೊಟ್ಟ “ರಂಗಭೂಮಿ ಹವ್ಯಾಸವಲ್ಲ-ಸಾಮಾಜಿಕ ಬದ್ಧತೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿಗಳು ಹಾಗೂ ಹಿರಿಯ ರಂಗ ಕಲಾವಿದ ವಿ ಎಚ್ ನಾಯಕ್ ಉಪ್ಪುಂದ ಇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದ ಮತ್ತೋರ್ವ ಅತಿಥಿಗಳಾಗಿ ಬೈಂದೂರು ರೋಟರಿಯ ಮಾಜಿ ಅಧ್ಯಕ್ಷರು ಹಾಗೂ ರೋಟರಿ ವಲಯ ೧ರ ನಿಯೋಜಿತ ಅಸಿಸ್ಟೆಂಟ್ ಗವರ್ನರಾದ ಐ ನಾರಾಯಣ್ ಆಗಮಿಸಿದ್ದು ರಂಗಭೂಮಿ ದಿನಾಚರಣೆ ಮಹತ್ವದ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ರಂಗಭೂಮಿ ಸಂದೇಶವನ್ನು ರಂಗಕರ್ಮಿ ನೀನಾಸಂ ಪದವೀಧರ ಸತ್ಯನಾ ಕೊಡೇರಿ ಅವರು ವಾಚಿಸಿದರು. ಸ್ವಾಗತವನ್ನು ಸುರಭಿ ಉಪಾಧ್ಯಕ್ಷ  ಲಕ್ಷ್ಮಣ ಕೊರಗ ನೆರವೇರಿಸಿ ಸುರಭಿಯ ನಿರ್ದೇಶಕರಾದ ಸುಧಾಕರ ಪಿ ಬೈಂದೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ರೋಟರಿಯ ಕಾರ್ಯದರ್ಶಿ ಸುನಿಲ್ ಎಚ್.ಜಿ ವಂದಿಸಿದರು. ಸುರಭಿಯ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸುರಭಿಯ ಕಲಾವಿದ ಸತ್ಯನಾ ಕೊಡೇರಿ ಹಾಗೂ ಸುರಭಿಯ ಕಲಾವಿದರಿಂದ ರಂಗಗೀತೆಗಳ ಗಾಯನ ಕಾರ್ಯಕ್ರಮ ನೆರವೇರಿತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!