spot_img
Sunday, May 17, 2026
spot_img

ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ ತ್ರಾಸಿ: ವಿಶ್ವ ಮಹಿಳಾ ದಿನಾಚರಣೆ

ಕುಂದಾಪುರ: ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ (ನಿ) ತ್ರಾಸಿ, ಕುಂದಾಪುರ ಇವರಿಂದ 8ನೇ ವರ್ಷದ ವಿಶ್ವ ಮಹಿಳಾ ದಿನಾಚರಣೆಯನ್ನು ಸಂಘದ ಸಭಾಂಗಣದಲ್ಲಿ ಆಚರಿಸಲಾಯಿತು.

ಮಹಿಳೆಯರಿಗೆ ನೈತಿಕ ಧೈರ್ಯ ತುಂಬಿ ಸಂತೈಸುವ ಸಲುವಾಗಿ ಸಂಘದ ಶ್ರೀ ಸಾಯಿ ನಿರ್ಯಾಣ ನಿಧಿಯಿಂದ ಶ್ರೀ ಸಾಯಿ ಚಕ್ರ ಸ್ವಸಹಾಯ ಸಂಘ, ಮಾಣಿಕೊಳಲು ಇದರ ಸದಸ್ಯೆ ರುಕ್ಮಿಣಿ, ಶ್ರೀ ಸಾಯಿ ರಾಘವೇಂದ್ರ ಸ್ವಸಹಾಯ ಸಂಘ,ಕುಂದಬಾರಂದಾಡಿ ಇದರ ಸದಸ್ಯೆ ಮಾಲತಿ ಶೆಟ್ಟಿ, ಶ್ರೀ ಸಾಯಿ ಸ್ವಾಮಿಕೃಪಾ ಸ್ವಸಹಾಯ ಸಂಘ ಕಮ್ಮಾರಕೊಡ್ಲು ಹೊಸಾಡು ಇದರ ಸದಸ್ಯೆ ಶ್ರೀಮತಿ ಆಚಾರಿ, ಶ್ರೀ ಸಾಯಿ ಭದ್ರಮಹಾಕಾಳಿ ಸ್ವಸಹಾಯ ಸಂಘ,ಹೊಳೆಬದಿ,ಬಗ್ವಾಡಿ ಇದರ ಸದಸ್ಯೆ ಸುಮಲತಾರವರಿಗೆ ಸಾಂತ್ವಾನ ಸಹಾಯಧನ ನೀಡಲಾಯಿತು.

ಸುಷನ್ಯ ಆರೋಗ್ಯ ನಿಧಿಯಿಂದ ಶ್ರೀ ಸಾಯಿ ವೈಷ್ಣವಿ ಸಂಘ, ಕಂಚಗೋಡು ಇದರ ಸದಸ್ಯೆ ಗೀತಾ ರವರ ಮಗ ಆಯುಷ್‌ರವರಿಗೆ ರಕ್ತದಲ್ಲಿ ಪೇಟ್ಲೆಟ್ ಕಡಿಮೆಯಾಗುವ ಕಾಯಿಲೆಗೆ ಹಾಗೂ ಸದಸ್ಯೆ ಸರಿತಾ ಭಗತ್‌ನಗರ ಕಂಚಗೋಡು ಇವರ ಪತಿ ದಾಸ ಖಾರ್ವಿಯವರಿಗೆ ಕಾಲು ಗಂಟು ಬೇನೆ ರೋಗಕ್ಕೆ ಸಾಂತ್ವಾನ ಸಹಾಯಧನ ವಿತರಿಸುವ ಮೂಲಕ ಸದಸ್ಯ ಮಹಿಳೆಯರಿಗೆ ನೈತಿಕವಾಗಿ ಧೈರ್ಯ ತುಂಬಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಸಿಬ್ಬಂದಿ ವರ್ಗ ಮತ್ತು ಗ್ರಾಹಕರು ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಭಾಸ್ಕರ ಬಿಲ್ಲವ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಿಬ್ಬಂದಿ ರೇಖಾ ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!