spot_img
Tuesday, March 17, 2026
spot_img

ಕಾವ್ರಾಡಿಯಲ್ಲಿ ಏಕ ಪವಿತ್ರ ನಾಗಮಂಡಲೋತ್ಸವಕ್ಕೆ ಚಾಲನೆ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಕಾವ್ರಾಡಿ ಕುಟುಂಬಸ್ಥರ ಸೇವೆಯಾಗಿ ಮಾ.7 ಶುಕ್ರವಾರದಂದು ಕಾವ್ರಾಡಿ ಶ್ರೀ ಬೈರವಿ ದೇವಸ್ಥಾನದ ಮೂಲನಾಗ ಸನ್ನಿಧಿಯಲ್ಲಿ ಏಕ ಪವಿತ್ರ ನಾಗಮಂಡಲೋತ್ಸವ ನಡೆಯುತ್ತಿದೆ.

ಮಾರ್ಚ್ 6 ಗುರುವಾರ ಬೆಳಿಗ್ಗೆ ಗಂಟೆ 9.30ಕ್ಕೆ ಸರ್ಪಸಂಸ್ಕಾರ ಸಮಾಹ್ವಂಗ ತಿಲಹವನ, ಸಂಜೆ ಗಂಟೆ6 ರಿಂದ ಸರ್ವಪ್ರಾಯಶ್ಚಿತ್ತ ಆಶ್ಲೇಷಾ ಬಲಿದಾನ. 108 ಪರಿ ಕಲಶ ಸಹಿತ ಪ್ರಧಾನ ಬ್ರಹ್ಮಕುಂಭಸ್ಥಾಪನಾ, ಮಂಡಲ ಚಪ್ಪರದಲ್ಲಿ ವಾಸ್ತುಪೂಜಾ, ಬಲಿದಾನ, ರಾಕ್ಷೆಘ್ನ ಹೋಮ, ದಿಗ್ನಲಿದಾನ ನಡೆಯಿತು. ಮಾರ್ಚ್ 7 ಶುಕ್ರವಾರ ಬೆಳಿಗ್ಗೆ ಗಂಟೆ 7ಕ್ಕೆ ಗುರು ಗಣೇಶ ಪೂಜಾ, ಸ್ವಸ್ತಿ ಪುಣ್ಯಾಹ ವಾಚನ, ಋತ್ವಿಗ್‌ವರಣೆ, ಮಧುಪರ್ಕ ಪೂಜಾ, ದ್ವಾದಶ ನಾಳಿಕೇರ ಗಣಯಾಗ, ನವಗ್ರಹ ಹೋಮ, ಪವಮಾನ ಹೋಮ, ಕೂಷ್ಮಾಂಡ ಹೋಮ, ಅಯುತ ಸಂಖ್ಯಾ ತಿಲಹವನ, ಆಶ್ಲೇಷಾ ಬಲ್ಯುದ್ಯುಪಾನಾ ಹೋಮ, ಪ್ರಧಾನ ಅಧಿವಾಸ ಹೋಮ, ಕಲಾತತ್ತ್ವ ಹೋಮ, ಚತುರ್ವೇದ ಪಾರಾಯಣ, ಸುಬ್ರಹ್ಮಣ್ಯ ಹೋಮ, ಪರಿಕಲಶಾಭಿಷೇಕ ಸಹಿತ ಬ್ರಹ್ಮಕುಂಭಾಭೀಷೇಕ, ಬ್ರಾಹ್ಮಣ ವಟು ಆರಾಧನಾ, ಸುವಾಸಿನೀ ಕನ್ನಿಕಾ ಪೂಜಾ, ಮಹಾಪೂಜಾ ನಡೆಯಿತು. ಮಧ್ಯಾಹ್ನ 11.30ಕ್ಕೆ ಸಂದರ್ಶನ, ಪಲ್ಲಪೂಜಾ ನಡೆಯಿತು.
ಮಧ್ಯಾಹ್ನ 12 ಗಂಟೆಯಿಂದ ’ಮಹಾ ಅನ್ನ ಸಂತರ್ಪಣೆ ಆರಂಭಗೊಂಡಿತು.

ಸಂಜೆ ಗಂಟೆ 6.30ಕ್ಕೆ ಸಂದರ್ಶನ, ಹಾಲಿಟ್ಟು ಸೇವೆ, ರಾತ್ರಿ ಗಂಟೆ 9ಕ್ಕೆ ಏಕಪವಿತ್ರ ನಾಗಮಂಡಲೋತ್ಸವ, ನಂತರ ಪ್ರಸಾದ ವಿತರಣೆ, ಫಲ ಮಂತ್ರಾಕ್ಷತೆ ನಡೆಯಲಿದೆ.

ನಾಗಮಂಡಲೋತ್ಸವ ಜ್ಯೋತಿಷ್ಯ ವಿದ್ವಾನ್ ಪಂಚಾಂಗಕರ್ತರಾದ ಟಿ, ವಾಸುದೇವ ಜೋಯಿಸರು ಹಾಲಾಡಿ ತಟ್ಟುವಟ್ಟು ಇವರ ಪ್ರಧಾನ ಪೌರೋಹಿತ್ಯದಲ್ಲಿ ನಡೆಯಿತ್ತಿದೆ. ಅರ್ಚಕರು-ಶಶಿಧರ ಅಡಿಗರು, ಪುರೋಹಿತರು ಕಾವ್ರಾಡಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ನಾಗಪಾತ್ರಿಗಳಾಗಿ ಶ್ರೀ ಶಾರದಾ ಪೀಠ ಶೃಂಗೇರಿಯ ಪ್ರಾಂತೀಯ ಧರ್ಮಾಧಿಕಾರಿಗಳಾದ ವೇ.ಮೂ.ಬಿ.ಲೋಕೇಶ ಅಡಿಗ ಭಾಗವಹಿಸಿದ್ದರು. ವೈದ್ಯರು- ಸರ್ವೋತ್ತಮ ವೈದ್ಯರು ಹಾಗೂ ಬಳಗದವರು ಅಂಪಾರು ಭಾಗವಹಿಸುತ್ತಿದ್ದಾರೆ.

ನಾಗಮಂಡಲೋತ್ಸವದ ಸೇವಾಕರ್ತರಾದ ಶ್ರೀಮತಿ ವಸಂತಿ ವಜ್ರಕುಮಾರ್ ಶೆಟ್ಟಿ ಕಾವ್ರಾಡಿ ಹಾಗೂ ಕುಟುಂಬಸ್ಥರು, ಗಣ್ಯಮಾನ್ಯರು ನಾಗಮಂಡಲೋತ್ಸವಕ್ಕೆ ಆಗಮಿಸುತ್ತಿದ್ದಾರೆ. ಭಜನಾ ಕಾರ್ಯಕ್ರಮ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!