spot_img
Monday, March 16, 2026
spot_img

ಪಂಚ ಗ್ಯಾರಂಟಿ ಪ್ರಗತಿ ಪರಿಶೀಲನೆ ಸಭೆ : ಕೊಲ್ಲೂರಿಗೆ ಬಾರದ ಮೈಸೂರು ಬಸ್ಸು : ಪುನರಾರಂಭಿಸುವಂತೆ ಹರಿಪ್ರಸಾದ್‌ ಶೆಟ್ಟಿ ಒತ್ತಾಯ

ಈವರೆಗೆ ತಾಲೂಕಿನ ಗ್ಯಾರಂಟಿ ಯೋಜನೆಗಳಿಗಾಗಿ 2,63,54,74,413 ರೂ. ಬಿಡುಗಡೆ  

ಜನಪ್ರತಿನಿಧಿ (ಕುಂದಾಪುರ) : ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುಂದಾಪುರ ತಾಲೂಕಿನಲ್ಲಿ ಸುಸೂತ್ರವಾಗಿ ನಡೆಯುತ್ತಿದೆ. ಕೆಲವು ತಾಂತ್ರಿಕ ಸಮಸ್ಯೆಗಳನ್ನು ಆಯಾಯ ಇಲಾಖೆಯ ಮಟ್ಟದಲ್ಲಿ ಪರಿಹರಿಸಲಾಗುತ್ತಿದೆ ಎಂದು ಕುಂದಾಪುರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ತಿಳಿಸಿದ್ದಾರೆ.

ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾಹಿತಿ ನೀಡಿದರು.

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಜನವರಿಯಲ್ಲಿ ಅಕ್ಟೋಬರ್ ತಿಂಗಳ  18538295 ರೂ. 25424 ಫಲಾನುಭವಿಗಳಿಗೆ ಬಿಡುಗಡೆಯಾಗಿದೆ. ಈವರೆಗೆ ಈ ಯೋಜನೆಯಿಂದ ತಾಲೂಕಿಗೆ 1468620000 ರೂ. ಬಿಡುಗಡೆಯಾಗಿದೆ.

ಗೃಹಜ್ಯೋತಿ ಯೋಜನೆಯಿಂದ ಕುಂದಾಪುರ ಘಟಕದಲ್ಲಿ 25499 ಫಲಾನುಭವಿಗಳಿಗೆ  18538295 ರೂ. ಬಿಡುಗಡೆಯಾಗಿದೆ. ಶಂಕರನಾರಾಯಣ ಘಟಕದಲ್ಲಿ 19495 ಫಲಾನುಭವಿಗಳಿಗೆ 10001431 ರೂ. ಬಿಡುಗಡೆಯಾಗಿದೆ. ತಲ್ಲೂರು ಘಟಕದಲ್ಲಿ 20224 ಫಲಾನುಭವಿಗಳಿಗೆ 12952506 ರೂ. ಬಿಡುಗಡೆಯಾಗಿದೆ. ಒಟ್ಟಾರೆಯಾಗಿ ತಾಲೂಕಿಗೆ ಈ ಯೋಜನೆಯಿಂದ ಈವರೆಗೆ 714418678 ರೂ. ಬಿಡುಗಡೆಯಾಗಿದೆ.

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ತಾಲೂಕಿಗೆ ಈವರೆಗೆ 34186810 ರೂ. ಮತ್ತು ಯುವನಿಧಿ ಯೋಜನೆಯಡಿಯಲ್ಲಿ ಈವರಗೆ 10417500 ರೂ. ಹಾಗೂ ಶಕ್ತಿ ಯೋಜನೆಯಿಂದ ತಾಲೂಕಿಗೆ ಈವರೆಗೆ ಒಟ್ಟು 407831425 ರೂ. ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಕುಂದಾಪುರ ತಾಲೂಕಿಗೆ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಈವರೆಗೆ 2,63,54,74,413 ರೂ. ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೊಲ್ಲೂರಿಗೆ ಬಾರದ ಮೈಸೂರು ಬಸ್ಸು !

ಮೈಸೂರಿನಿಂದ ಕೊಲ್ಲೂರಿಗೆ ಸಂಜೆ ವೇಳೆಗೆ ಬರುತ್ತಿದ್ದ ಬಸ್ಸು ಸ್ಥಗಿತಗೊಂಡಿರುವುದರ ಬಗ್ಗೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಗಮನ ಸೆಳೆದಿದ್ದರು. ಫೆಬ್ರವರಿಯಲ್ಲಿ ಮರು ಆರಂಭಗೊಳ್ಳಬಹುದು ಎಂದು ಕಳೆದ ಸಭೆಯಲ್ಲಿ ಮಾಹಿತಿ ನೀಡಲಾಗಿತ್ತು. ಆದರೇ, ಫೆಬ್ರವರಿ ಕಳೆದರೂ ಕೊಲ್ಲೂರಿಗೆ ಮೈಸೂರು ಬಸ್ಸು ಬಂದಿಲ್ಲ. ಪ್ರಸ್ತುತ ಪುನಃ ಕಾರ್ಯಾಚರಣೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಮನವಿಗೆ ಪ್ರತಿಕ್ರಿಯಿಸದೇ ಇರುವುದರ ಬಗ್ಗೆ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಮತ್ತೊಮ್ಮೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ ಎಂದು ಸೂಚಿಸಿದ್ದಲ್ಲದೇ, ಸಾರಿಗೆ ಇಲಾಖೆಯ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದೆಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸದ ಕೊರಗ ಸಮುದಾಯದ ಮಹಿಳೆಯರು  

ಕುಂಭಾಶಿ ಗ್ರಾಮದಲ್ಲಿನ ಪ.ಪಂಗಡಕ್ಕೆ ಸೇರಿದ ನಾಲ್ಕು ಕುಂಟಬದ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸದೇ ಇರುವುದರ ಬಗ್ಗೆ ಪ್ರಸ್ತಾಪ ಮಾಡಿದ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳಿಂದ ಕಾರಣ ಕೇಳಿದರು.ರೇಷನ್‌ ಕಾರ್ಡ್‌ ಹೊಂದದೇ ಇರುವುದು ಮತ್ತು ಹೊಸ ರೇಷನ್‌ ಕಾರ್ಡ್‌ ಮಾಡಲು ಅವಕಾಶವಿರದ ಹಿನ್ನೆಲೆಯಲ್ಲಿ ಅವಕಾಶ ಕಲ್ಪಿಸಿದಾಗ ರೇಷನ್‌ ಕಾರ್ಡ್‌ ಮಾಡಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಮತ್ತೊಂದು ಕುಟುಂಬದ ಮಹಿಳೆ ಬೇರೆ ಊರಿಗೆ ವಲಸೆ ಹೋಗಿದ್ದಾರೆ. ಮತ್ತೊಂದು ಕುಟುಂಬದ ಮಹಿಳೆಯ ತಾಯಿ ಅವರ ಹೆಸರು ರೇಷನ್‌ ಕಾರ್ಡ್‌ ಗೆ ಸೇರ್ಪಡೆ ಆಗಬೇಕಿತ್ತು ಅಗತ್ಯ ದಾಖಲೆಗಳೊಂದಿಗೆ ಹೆಸರು ತಿದ್ದುಪಡಿ ಮಾಡುಂತೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಆಧಾರ್‌ ಮ್ಯಾಪಿಂಗ್‌ ಬಾಕಿ  

ಆಧಾರ್ ಮ್ಯಾಪಿಂಗ್ ಮಾಡಲು ಬಾಕಿ ಇರುವ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಮಾಹಿತಿ ಸೇವಾಸಿಂಧು ಪೋರ್ಟ್ ಬಗ್ಗೆ ಲ್‌ನಲ್ಲಿ ಸರಿಪಡಿಸಲು ಅವಕಾಶ ಕಲ್ಪಿಸಿದ್ದು, ಆ‌ಧಾರ್ ಮ್ಯಾಪಿಂಗ್ ಬಾಕಿ ಇರುವ ಫಲಾನುಭವಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಛೇರಿಗೆ ಕರೆಸಿ ಅವರಿಂದ ಬ್ಯಾಂಕ್ ಖಾತೆಯ ವಿವರ ಪಡೆದು ಆಧಾರ್ ಮ್ಯಾಪಿಂಗ್ ಮಾಡಲಗುತ್ತಿದೆ. ಪ್ರಸ್ತುತ 104 ಮಂದಿ ಫಲಾನುಭವಿಗಳು ಬಾಕಿ ಇರುತ್ತದೆ. ಬಾಕಿ ಇರುವ ಫಲಾನುಭವಿಗಳಿಗೆ ಈಗಾಗಲೇ ದೂರವಾಣಿ ಮುಖಾಂತರ ಮಾಹಿತಿ ನೀಡಿದ್ದು ಸದ್ಯದಲ್ಲೆ ಸರಿಪಡಿಸಲಾಗುವುದು. ಕುಂದಾಪುರ ತಾಲೂಕಿನಲ್ಲಿ ಒಟ್ಟು-723 ಪ.ಪಂಗಡದ ಕುಟುಂಬವಿದ್ದು ಅದರಲ್ಲಿ 622 ಕುಟುಂಬಗಳು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ನೊಂದಾಯಿಸಿಕೊಂಡಿರುತ್ತಾರೆ.

ಹೊಸ ರೇಷನ್ ಕಾರ್ಡ್ ಮಾಡಲು ಬಾಕಿ ಇರುವ ಕುಟುಂಬ 44, ವಲಸೆ ಕುಟುಂಬ 5, ಪುರುಷ ಸದಸ್ಯರು ಮಾತ್ರ ಇರುವ ಕುಟುಂಬ 34, ತೆರಿಗೆ ಪಾವತಿದಾರರು 5, ಆದಾರ್ ಕಾರ್ಡ್ ಮಾಡಲು ಬೆರಳಚ್ಚು ತೆಗೆದುಕೊಳ್ಳದೇ ಇರುವುದು, ಆಧಾರ್ ಜೊತೆ ಮೊಬೈಲ್ ಸಂಖ್ಯೆ ಜೋಡಣೆ ಆಗದೇ ಇರುವ ಕುಟುಂಬ 13 ಎಂದು ತಾಲೂಕು ಇಲಾಖಾಧಿಕಾರಿ ಮಾಹಿತಿ ನೀಡಿದರು. ಬಾಕಿ ಇರುವ ಫಲಾನುಭವಿಗಳಿಗೆ ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮುಖೇನ ಮಾಹಿತಿ ನೀಡಿ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಾರ್ಚ್ ಅಂತ್ಯದೊಳಗೆ ಎಲ್ಲಾ ಬಾಕಿ ಇರುವ ಎಲ್ಲಾ ಫಲಾನುಭವಿಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಆಧಾರ್‌ ಮ್ಯಾಪಿಂಗ್‌ ಪ್ರಕ್ರಿಯೆಯನ್ನು ಅಗತ್ಯವಾಗಿ ಪೂರೈಸುವಂತೆ ಅಧಿಕಾರಿಗಳಿಗೆ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ನಿರ್ದೇಶಿಸಿದರು.

ಹೆಂಗವಳ್ಳಿ : ಹೊಸ ಹೆಚ್.ಟಿ ಲಿಂಕ್ !

ಕಳೆದ ಸಭೆಯಲ್ಲಿ ಗೋಳಿಯಂಗಡಿಯಿಂದ ಹೆಂಗವಳ್ಳಿಗೆ ಹೋಗುವ ರಸ್ತೆಯಲ್ಲಿ ಹೊಸದಾಗಿ ಹೆಚ್‌ ಟಿ ಲಿಂಕ್‌ ಲೈನ್‌ ಎಳೆಯುವ ಬಗ್ಗೆ ಕ್ರಮ ವಹಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೇ, ಈ ಕಾಮಗಾರಿಯು ಗ್ಯಾರಂಟಿ ಯೋಜನೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದಾಗ್ಯೂ ಬಜೆಟ್‌ ಅನುದಾನ ಲಭ್ಯತೆಗೆ ಅನುಗುಣವಾಗಿ ಕಾಮಗಾರಿಯನ್ನು ನಿರ್ವಹಿಸಲಾಗುವುದು. ಅಲ್ಲದೇ, ವಿದ್ಯುತ್‌ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾರ್ಗ ಮುಕ್ತತೆಯನ್ನು ಇಲಾಖಾ ಅಧಿಕೃತ ಸಿಬ್ಬಂಧಿಗಳ ಮೂಲಕವೇ ಮಾಡಲಾಗುತ್ತಿದೆ ಎಂದು ಮೆಸ್ಕಾಂ ಕುಂದಾಪುರ ವಿಭಾಗದ ಅಧಿಕಾರಿ ಮಾಹಿತಿ ನೀಡಿದರು. ಮಂಗಳವಾರ ದಿನವಿಡಿ ವಿದ್ಯತ್‌ ವ್ಯತ್ಯಯವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಪರೀಕ್ಷಾ ಸಂಬಂಧಿಸಿದಂತೆ ಅಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಮಿತಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮಿತಿ ಸದಸ್ಯರ ಅಭಿಪ್ರಾಯವನ್ನು ಪರಿಗಣಿಸಿ ವಿದ್ಯುತ್‌ ವ್ಯತ್ಯಯವಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ಪ್ರಗತಿ ಪರಿಶೀಲನೆ ಸಭೆಯಲ್ಲಿ ಸದಸ್ಯರಾದ ವಸುಂಧರ ಹೆಗ್ಡೆ ಹೆಂಗವಳ್ಳಿ, ವಾಣಿ ಆರ್ ಶೆಟ್ಟಿ ಮೊಳಹಳ್ಳಿ , ನಾರಾಯಣ ಆಚಾರ್ ಕೋಣಿ , ಅಭಿಜಿತ್ ಪೂಜಾರಿ ಹೇರಿಕುದ್ರು , ಮಂಜು ಕೊಠಾರಿ ಕೆರಾಡಿ, ಗಣೇಶ್ ಕುಂದಾಪುರ , ಆಶಾ ಕರ್ವೆಲ್ಲೋ, ಸವಿತಾ ಪೂಜಾರಿ ಚಿತ್ತೂರು , ಜಹೀರ್ ಅಹಮದ್ ಗಂಗೊಳ್ಳಿ, ಚಂದ್ರ ಕಾಂಚನ್ ಜನ್ನಾಡಿ , ಅರುಣ್ ಹಕ್ಲಾಡಿ , ಮತ್ತು ವಿವಿಧ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ರವಿಕುಮಾರ್ ಹುಕ್ಕೇರಿ ಸ್ವಾಗತಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!