spot_img
Thursday, April 2, 2026
spot_img

ಮಾ.7ರಂದು ಕಾವ್ರಾಡಿಯಲ್ಲಿ ಏಕ ಪವಿತ್ರ ನಾಗಮಂಡಲೋತ್ಸವ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಕಾವ್ರಾಡಿ ಕುಟುಂಬಸ್ಥರ ಸೇವೆಯಾಗಿ ಮಾ. ಶುಕ್ರವಾರದಂದು ಕಾವ್ರಾಡಿ ಶ್ರೀ ಬೈರವಿ ದೇವಸ್ಥಾನದ ಮೂಲನಾಗ ಸನ್ನಿಧಿಯಲ್ಲಿ ಏಕ ಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆಗೆ ಮಹಾ ಅನ್ನಸಂತರ್ಪಣೆ, ರಾತ್ರಿ ಹಾಲಿಟ್ಟು ಸೇವೆ, ಮಂಡಲೋತ್ಸವ ಸೇವೆ ನಡೆಯಲಿದೆ.

ಮಾರ್ಚ್ 06 ಗುರುವಾರ ಬೆಳಿಗ್ಗೆ ಗಂಟೆ 9.30ಕ್ಕೆ ಸರ್ಪಸಂಸ್ಕಾರ ಸಮಾಹ್ವಂಗ ತಿಲಹವನ, ಸಂಜೆ ಗಂಟೆ 6 ರಿಂದ ಸರ್ವಪ್ರಾಯಶ್ಚಿತ್ತ ಆಶ್ಲೇಷಾ ಬಲಿದಾನ. 108 ಪರಿ ಕಲಶ ಸಹಿತ ಪ್ರಧಾನ ಬ್ರಹ್ಮಕುಂಭಸ್ಥಾಪನಾ, ಮಂಡಲ ಚಪ್ಪರದಲ್ಲಿ ವಾಸ್ತುಪೂಜಾ, ಬಲಿದಾನ, ರಾಕ್ಷೋಘ್ನ ಹೋಮ, ದಿಗ್ನಲಿದಾನ ನಡೆಯಲಿದೆ. ಮಾರ್ಚ್ 7 ಶುಕ್ರವಾರ ಬೆಳಿಗ್ಗೆ ಗಂಟೆ 7ಕ್ಕೆ ಗುರು ಗಣೇಶ ಪೂಜಾ, ಸ್ವಸ್ತಿ ಪುಣ್ಯಾಹ ವಾಚನ, ಋತ್ವಿಗ್‍ವರಣೆ, ಮಧುಪರ್ಕ ಪೂಜಾ, ದ್ವಾದಶ ನಾಳಿಕೇರ ಗಣಯಾಗ, ನವಗ್ರಹ ಹೋಮ, ಪವಮಾನ ಹೋಮ, ಕೂಷ್ಮಾಂಡ ಹೋಮ, ಅಯುತ ಸಂಖ್ಯಾ ತಿಲಹವನ, ಆಶ್ಲೇಷಾ ಬಲ್ಯುದ್ಯುಪಾನಾ ಹೋಮ, ಪ್ರಧಾನ ಅಧಿವಾಸ ಹೋಮ, ಕಲಾತತ್ತ್ವ ಹೋಮ, ಚತುರ್ವೇದ ಪಾರಾಯಣ, ಸುಬ್ರಹ್ಮಣ್ಯ ಹೋಮ, ಪರಿಕಲಶಾಭಿಷೇಕ ಸಹಿತ ಬ್ರಹ್ಮಕುಂಭಾಭೀಷೇಕ, ಬ್ರಾಹ್ಮಣ ವಟು ಆರಾಧನಾ, ಸುವಾಸಿನೀ ಕನ್ನಿಕಾ ಪೂಜಾ, ಮಹಾಪೂಜಾ, ಮಧ್ಯಾಹ್ನ 11.30ಕ್ಕೆ ಸಂದರ್ಶನ, ಪಲ್ಲಪೂಜಾ ತೀರ್ಥಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಹ್ನ ಗಂಟೆ 12ರಿಂದ ‘ಮಹಾ ಅನ್ನ ಸಂತರ್ಪಣೆ, ಸÀಂಜೆ ಗಂಟೆ 6.30ಕ್ಕೆ ಸಂದರ್ಶನ, ಹಾಲಿಟ್ಟು ಸೇವೆ, ರಾತ್ರಿ ಗಂಟೆ 9.00ಕ್ಕೆ ಏಕಪವಿತ್ರ ನಾಗಮಂಡಲೋತ್ಸವ, ನಂತರ ಪ್ರಸಾದ ವಿತರಣೆ, ಫಲ ಮಂತ್ರಾಕ್ಷತೆ ನಡೆಯಲಿದೆ.

ನಾಗಮಂಡಲೋತ್ಸವ ಜ್ಯೋತಿಷ್ಯ ವಿದ್ವಾನ್ ಪಂಚಾಂಗಕರ್ತರಾದ ಟಿ, ವಾಸುದೇವ ಜೋಯಿಸರು ಹಾಲಾಡಿ ತಟ್ಟುವಟ್ಟು ಇವರ ಪ್ರಧಾನ ಪೌರೋಹಿತ್ಯದಲ್ಲಿ ನಡೆಯಲಿದೆ. ಅರ್ಚಕರು-ಶಶಿಧರ ಅಡಿಗರು, ಪುರೋಹಿತರು ಕಾವ್ರಾಡಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಿದ್ದಾರೆ. ನಾಗಪಾತ್ರಿಗಳಾಗಿ ಶ್ರೀ ಶಾರದಾ ಪೀಠ ಶೃಂಗೇರಿಯ ಪ್ರಾಂತೀಯ ಧರ್ಮಾಧಿಕಾರಿಗಳಾದ ವೇ.ಮೂ.ಬಿ.ಲೋಕೇಶ ಅಡಿಗ ಭಾಗವಹಿಸಲಿದ್ದಾರೆ. ವೈದ್ಯರು- ಸರ್ವೋತ್ತಮ ವೈದ್ಯರು ಹಾಗೂ ಬಳಗದವರು ಅಂಪಾರು ಭಾಗವಹಿಸಲಿದ್ದಾರೆ.

ಹೊರೆ ಕಾಣಿಕೆ ಸಲ್ಲಿಸುವ ಭಕ್ತಾದಿಗಳು ದಿನಾಂಕ 05-03-2025ರ ಬೆಳಿಗ್ಗೆಯಿಂದ 06-03-2025ರ ಸಂಜೆ ತನಕ ನೀಡಬಹುದು ಎಂದು ನಾಗಮಂಡಲೋತ್ಸವದ ಸೇವಾಕರ್ತರಾದ ಶ್ರೀಮತಿ ವಸಂತಿ ವಜ್ರಕುಮಾರ್ ಶೆಟ್ಟಿ ಕಾವ್ರಾಡಿ ತಿಳಿಸಿದ್ದಾರೆ.

ಭರದ ಸಿದ್ಧತೆ: ನಾಗಮಂಡಲೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ನಾಗಮಂಡಲೋತ್ಸವದ ಯಶಸ್ಸಿಗೆ ಈಗಾಗಲೇ ಸಾರ್ವಜನಿಕರು, ಗ್ರಾಮಸ್ಥರು, ಧಾರ್ಮಿಕ ಮುಂದಾಳುಗಳ ಸಭೆ ನಡೆಸಲಾಗಿದೆ. ನಾಗಮಂಡಲೋತ್ಸದ ಮಹಾ ಅನ್ನಸಂತರ್ಪಣೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವುದರಿಂದ ಎಲ್ಲಿಯೂ ನೂಕುನುಗ್ಗಲು ಉಂಟಾಗದಂತೆ ಊಟದ ಚಪ್ಪರಗಳ ವ್ಯವಸ್ಥೆ ಮಾಡಲಾಗಿದೆ. ವಾಹನ ನಿಲುಗಡೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಾಗಮಂಡಲೋತ್ಸವದ ಸ್ಥಳದ ತನಕ ತಳಿರು ತೋರಣಗಳಿಂದ ರಾರಾಜಿಸಲಿದೆ. ಕೃಷಿ ಪ್ರಧಾನವಾದ ಕಾವ್ರಾಡಿಯಲ್ಲಿ ನಾಗಮಂಡಲ ನೆಡೆದರೆ ಅಲ್ಲಿ ವಿಶೇಷವಿರುತ್ತದೆ. ಕೃಷಿ, ಪ್ರಕೃತಿ ಪ್ರಿಯ ನಾಗದೇವರು ಹೆಚ್ಚು ಸಂತುಷ್ಟವಾಗುವುದು ನಾಗಮಂಡಲದಿಂದ. ಕಾವ್ರಾಡಿಯಂತಹ ಭೂಮಿಯಲ್ಲಿ ನಾಗಮಂಡಲೋತ್ಸವ ನಡೆಯುತ್ತಿರುವುದಕ್ಕೆ ವಿಶೇಷ ಮಹತ್ವವಿದೆ. ಯಶಸ್ವಿ ಏಕಪವಿತ್ರ ನಾಗಮಂಡಲೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!