spot_img
Wednesday, April 1, 2026
spot_img

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಲೂವಿಸ್ ಲೋಬೊ ಹಾಗೂ ಉಪಾಧ್ಯಕ್ಷರಾಗಿ ಜೇಮ್ಸ್ ಡಿ’ಸೋಜ ಆಯ್ಕೆ

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ದಿನಾಂಕ 13-2-2025ರ ಗುರುವಾರದಂದು ಉಡುಪಿ ಕ್ರಿಸ್ತಜೋತಿ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಆಡಳಿತ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಲೂವಿಸ್ ಲೋಬೊ ಆದಿ ಉಡುಪಿ ಹಾಗೂ ಉಪಾಧ್ಯಕ್ಷರಾಗಿ ಜೇಮ್ಸ್ ಡಿ’ಸೋಜ ಕಾಪು ಚುನಾಯಿತರಾದರು.

ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿಯ ಸಹಕಾರ ಅಭಿವೃಧಿ ಜಯಂತಿ ರವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಎ. ಫೆರ್ನಾಂಡಿಸ್ ರವರು ಚುನಾವಣಾ ಪ್ರಕ್ರಿಯೆಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಗೆ ನೂತನವಾಗಿ ಚುನಾಯಿತರಾದ ನಿರ್ದೇಶಕರುಗಳಾದ ಇನ್ನೇಷಿಯಸ್ ಮೋನಿಸ್ ಮೂಡುಬೆಳ್ಳೆ, ಪರ್ಸಿ ಜೆ. ಡಿ’ಸೋಜ ಕಲ್ಯಾಣಪುರ, ಆರ್ಚಿಬಾಲ್ಡ್ ಎಸ್. ಡಿ’ಸೋಜ ತೊಟ್ಟಂ, ಡಾ|| ನೇರಿ ಕರ್ನೇಲಿಯೋ ಕಕ್ಕುಂಜೆ-ಅಂಬಾಗಿಲು, ಶ್ರೀಮತಿ ಲಾಯ್ಸಟ್ ಜೆ. ಕರ್ನೆಲಿಯೋ ಕನ್ನರ್ಪಾಡಿ-ಕಡೇಕಾರು, ರಿಚರ್ಡ್ ಡಾಯಸ್ ಸಂತೆಕಟ್ಟೆ, ರಾಬರ್ಟ್ ಮಾಕ್ಸಿಂ ಡಿ’ಸೋಜ ಉಡುಪಿ, ಡಾಲ್ಪಿ ವಿಕ್ಟರ್ ಲೂವಿಸ್ ಉಡುಪಿ, ವಿಲಿಯಂ ಬಿ. ಮಚಾದೋ ಶಿರ್ವ, ಓನಿಲ್ ಜಾನ್ಸನ್ ಡಿ’ಸೋಜ ಕೊಡವೂರು ಹಾಗೂ ಶ್ರೀಮತಿ ಜೆನೆವಿವ್ ಮರೀನಾ ಮಿನೇಜಸ್ ಕಲ್ಮಾಡಿ ಉಪಸ್ಥಿತರಿದ್ದರು.

ಫೆಬ್ರವರಿ ೨ ರಂದು ನಡೆದ ನೂತನ ಆಡಳಿತ ಮಂಡಳಿಯ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲಾ ೧೩ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಸುಮಾರು ೨೮ ವರ್ಷಗಳ ಹಿಂದೆ ಉಳಿತಾಯ, ಅಭಿವೃದ್ಧಿ, ಹಂಚುವಿಕೆ ಎಂಬ ಧೈಯದೊಂದಿಗೆ ಸ್ಥಾಪನೆಗೊಂಡ ಸಹಕಾರ ಸಂಸ್ಥೆಯು ಉಡುಪಿ ಕೆ.ಎಂ. ಮಾರ್ಗದಲ್ಲಿ ಆಡಳಿತ ಕಛೇರಿಯನ್ನು ಹೊಂದಿದ್ದು, ಉಡುಪಿ, ಮಲ್ಪೆ, ಉದ್ಯಾವರ, ಶಿರ್ವ ಮತ್ತು ಹೂಡೆ-ಕೆಮ್ಮಣ್ಣು ಗಳಲ್ಲಿ ಶಾಖೆಗಳು ಕಾರ್ಯಚರಿಸುತ್ತಿದ್ದು, ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!