spot_img
Sunday, February 15, 2026
spot_img

ಫಾಸ್ಟ್ಯಾಗ್ : ಸಕಾಲದಲ್ಲಿ ರೀಚಾರ್ಜ್‌ ಮಾಡದಿದ್ದರೆ ತಪ್ಪಿದ್ದಲ್ಲ ದಂಡ !

ಜನಪ್ರತಿನಿಧಿ (ಬೆಂಗಳೂರು) : ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಕೇಂದ್ರಗಳಲ್ಲಿ ಫಾಸ್ಟ್ಯಾಗ್ ಬಳಸುವಾಗ ಅನ್ವಯವಾಗುವ ಕೆಲವು ನಿಯಮಗಳು ಫೆಬ್ರುವರಿ 17ರಿಂದ ಜಾರಿಗೆ ಆಗುವಂತೆ ಬದಲಾಗಿವೆ. ರಾಷ್ಟ್ರೀಯ ಪಾವತಿ ನಿಗಮ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವರಿಸಿರುವ ಬದಲಾವಣೆಯ ಮಾಹಿತಿ ಇಲ್ಲಿದೆ.

ಟೋಲ್ ಕೇಂದ್ರವನ್ನು ತಲುಪುವುದಕ್ಕಿಂತ (ಅಂದರೆ, ಫಾಸ್ಟ್ಯಾಗ್ ಆ ಟೋಲ್ ಕೇಂದ್ರದ ಸ್ಕ್ಯಾನ‌ರ್ ಕಣ್ಣಿಗೆ ಬೀಳುವ ಸಮಯ) ಒಂದು ತಾಸು ಮೊದಲು ಫಾಸ್ಟ್ಯಾಗ್ ಅನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದ್ದರೆ, ಅದರಲ್ಲಿ ಅಗತ್ಯ ಪ್ರಮಾಣದಲ್ಲಿ ಹಣವಿಲ್ಲದಿದ್ದರೆ ಹಾಗೂ ಟೋಲ್ ಕೇಂದ್ರ ತಲುಪಿದ ಹತ್ತು ನಿಮಿಷಗಳ ನಂತರವೂ ಆ ಟ್ಯಾಗ್ ಸಕ್ರಿಯಗೊಂಡಿಲ್ಲದೆ ಇದ್ದರೆ ವಹಿವಾಟು ತಿರಸ್ಕೃತಗೊಳ್ಳಲಿದೆ ಎಂದು ನಿಗಮ ಹೇಳಿದೆ.

ಅಂದರೆ, ವಾಹನ ಚಾಲಕರು, ಮಾಲೀಕರು ಟೋಲ್ ಕೇಂದ್ರ ತಲುಪುವ ಒಂದು ತಾಸಿನ ಮೊದಲೇ ಅಗತ್ಯ ಪ್ರಮಾಣದಲ್ಲಿ ಹಣವನ್ನು ಟ್ಯಾಗ್‌ನ ವಾಲೆಟ್‌ಗೆ ಭರ್ತಿ ಮಾಡಿರಬೇಕು. ಅದು ಒಂದು ವೇಳೆ ಸಾಧ್ಯವಾಗದೆ ಇದ್ದಲ್ಲಿ, ಟೋಲ್ ಕೇಂದ್ರ ಪ್ರವೇಶಿಸಿದ ಹತ್ತು ನಿಮಿಷಗಳ ಒಳಗೆ ಫಾಸ್ಟಾಗ್ ವಾಲೆಟ್‌ಗೆ ಹಣ ಭರ್ತಿ ಮಾಡಬೇಕು.

ಚಾಲಕರು ಅಥವಾ ಮಾಲೀಕರು ಇವೆರಡರಲ್ಲಿ ಯಾವೊಂದು ಕೆಲಸವನ್ನೂ ಮಾಡದೆ ಇದ್ದರೆ, ಫಾಸ್ಟಾಗ್ ಮೂಲಕವೇ ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!