spot_img
Wednesday, April 1, 2026
spot_img

ಸೌಕೂರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲಿಕಾ ಹಬ್ಬ

ಕುಂದಾಪುರ: ಸೌಕೂರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.17 ರಂದು ಮಕ್ಕಳ ಕಲಿಕಾ ಹಬ್ಬ ಜರುಗಿತು. ಸಭಾ ಅಧ್ಯಕ್ಷತೆಯನ್ನು ಎಸ್‌ಡಿ‌ಎಂಸಿ ಅಧ್ಯಕ್ಷರಾದ ಭಾಸ್ಕರ್ ಭಂಡಾರಿ ಅವರು ವಹಿಸಿದ್ದರು.

ವಿದ್ಯಾರ್ಥಿ ನಾಯಕಿ ಚಿಂತನಾ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲೆ ಮುಖ್ಯ ಶಿಕ್ಷಕಿ ನಮೃತಾ ಶಾಸ್ತ್ರಿ ಸ್ವಾಗತಿಸಿದರು. ಕರ್ಕುಂಜೆ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರವಿಚಂದ್ರ ಇವರು ಸರ್ವರಿಗೂ ಶಾಲುಹೊದಿಸಿ ಕಲಿಕಾ ಹಬ್ಬದ ಟೋಪಿ ಧರಿಸಿ ಗೌರವಿಸಿದರು. ಶಿಕ್ಷಣ ಸಂಯೋಜಕರಾದ ಸತ್ಯನಾ ಕೊಡೇರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಂದ್ರ ಶೆಟ್ಟಿ ಮತ್ತು ಸಂಜೀವಿ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶರತ್ ಶೆಟ್ಟಿ, ಗೌರವಾಧ್ಯಕ್ಷರಾದ ಗೋಪಾಲ ದೇವಾಡಿಗ, ಕಾರ್ಯದರ್ಶಿ ಸರ್ಫುದ್ದೀನ್, ಊರಿನ ಹಿರಿಯರಾದ ವಾಸುದೇವಾಚಾರ್ ಕೌಂಜೂರು, ಇಲಾಖಾ ವತಿಯಿಂದ ಬಿ.ಆರ್.ಪಿಗಳಾದ ರಾಧಿಕಾ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ್ ಶೆಟ್ಟಿ, ನೆಂಪು ಪಬ್ಲಿಕ್ ಸ್ಕೂಲ್ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾದ ಕುಪ್ಪಯ್ಯ ಮರಾಠಿ, ಕೊಡ್ಲಾಡಿ ಶಾಲೆ ಶಿಕ್ಷಕರಾದ ಸುಕುಮಾರ ಶೆಟ್ಟಿ, ಕಲಿಕಾ ಹಬ್ಬದ ಸಂಪನ್ಮೂಲ ವ್ಯಕ್ತಿಗಳಾದ ಕೃಪಾ ತಲ್ಲೂರು, ನವೀನ್ ಕುಮಾರ್ ಉಪ್ಪಿನಕುದ್ರು, ಪ್ರಭಾಕರ್ ಅಂಡಾರುಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಸಹ ಶಿಕ್ಷಕಿಯಾದ ಮಂಜುಳಾ ಪೂಜಾರಿ ವಂದಿಸಿದರು. ಕರ್ಕುಂಜೆ ಶಾಲೆಯ ಶಿಕ್ಷಕರಾದ ನಾರಾಯಣ ಕೊಠಾರಿ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!