spot_img
Thursday, April 2, 2026
spot_img

ತಿರುಪತಿ ರೈಲಿಗೆ ಕರಾವಳಿಗರ ಉತ್ತಮ ಸ್ಪಂದನೆ-ಗಣೇಶ ಪುತ್ರನ್

ಕುಂದಾಪುರ: ಅಕ್ಟೋಬರ್ ೧೦ ರಂದು ವಿಜಯದಶಮಿಯ ದಿವಸ ಹೈದರಾಬಾದ್ ತಿರುಪತಿ (ರೇಣಿಗುಂಟ) ಮಂಗಳೂರು ರೈಲು ಮುರುಡೇಶ್ವರಕ್ಕೆ ವಿಸ್ತರಣೆಗೊಂಡಿದ್ದು, ವಿಸ್ತರಣೆಯಾಗಿ ೩ ತಿಂಗಳಲ್ಲೇ ಜನಪ್ರಿಯತೆಗಳಿಸಿದೆ.

ಉಡುಪಿ ಕುಂದಾಪುರದಿಂದ ಮಂಗಳೂರು ನಗರಕ್ಕೆ ತೆರಳಿ ಅಲ್ಲಿಂದ ತಿರುಪತಿ ರೈಲು ಹತ್ತುತಿದ್ದ ಜನರಿಗೆ ಈಗ ಮನೆ ಬಾಗಿಲಿನಲ್ಲೇ ತಿರುಪತಿ ರೈಲು ಏರುವ ಅವಕಾಶ ಸಿಕ್ಕಿದ್ದು , ಈ ಮುಂಚೆ ಕಾಸರಗೋಡಿನ ನಂತರ ತುಂಬುತಿದ್ದ ರೈಲು ಈಗ ಉಡುಪಿ ತಲುಪುವಷ್ಟರಲ್ಲಿ ಕನಿಷ್ಟ 40-50% ಮೀಸಲು ಸೀಟು ತುಂಬಿ ಓಡುತಿದ್ದು ಜನರಲ್ ಬೋಗಿಗಳೂ ಕೂಡ ತುಂಬಿಯೇ ಇರುತ್ತದೆ.

ಕರಾವಳಿಯಿಂದ ತಿರುಪತಿಗೆ ತೆರಳುವ ಭಕ್ತರ ಜತೆಗೆ, ಮದ್ಯ ಕೇರಳ ಹಾಗು ತಮಿಳುನಾಡಿನಿಂದ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಬರುವ ಭಕ್ತಾದಿಗಳಿಂದಲೂ ರೈಲಿಗೆ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಹಾಗು ಕೊಂಕಣ ರೈಲ್ವೆ ಸಲಹಾ ಸಮಿತಿಯ ಗಣೇಶ್ ಪುತ್ರನ್ ಹರ್ಷ ವ್ಯಕ್ತಪಡಿಸಿದ್ದಾರೆ.

ರೈಲಿನ ಬುಕ್ಕಿಂಗ್ ವೆಬ್ ಸೈಟುಗಳಲ್ಲಿ ಮುರುಡೇಶ್ವರ ರೇಣಿಗುಂಟ ತಿರುಪತಿ ನಡುವೆ ವೈಟಿಂಗ್ ತೋರಿಸುತಿದ್ದು, ಮುರುಡೇಶ್ವರ ಮಂಗಳೂರು ನಡುವೆ ಪೆಬ್ರವರಿ ತಿಂಗಳ ಬುಕ್ಕಿಂಗ್ ಗಮನಿಸಿದರೆ, ಪ್ರತೀ ಪ್ರಯಾಣಕ್ಕೂ ಕೆವಲ 40-50 ಸೀಟುಗಳು ಮಾತ್ರ ಖಾಲಿ ಇರುವುದು ಕಂಡು ಬರುತಿದ್ದು,ಇದು ರೈಲುಕೊಂಕಣ ಮಾರ್ಗದಲ್ಲೇ ಬುಕ್ ಆಗುವ ಮೂಲಕ ಈ ವಿಸ್ತರಣೆಯಿಂದ ಕೊಂಕಣ ನಿಗಮಕ್ಕೂ ಆರ್ಥಿಕ ಲಾಭದಾಯಕವಾಗಿರುವುದನ್ನು ತೋರಿಸುತ್ತಿದೆ.

ಕರಾವಳಿ ಮತ್ರು ತಿರುಪತಿ ನಡುವೆ ಬೆಂಗಳೂರು ಮಾರ್ಗದ ರೈಲು ಓಡಿಸಿದ್ದರೂ ಕನಿಷ್ಟ ೧೬-೨೦ ಘಂಟೆಗಳ ಪ್ರಯಾಣದ ಅವದಿ ಘಾಟ್ ಕಾರಣದಿಂದ ಬೇಕಾಗಿದ್ದು , ಅದಕ್ಕೂ ವೇಗವಾಗಿ ರೇಣಿಗುಂಟಕ್ಕೆ ಈ ಮುರುಡೇಶ್ವರ ಕಾಚಿಗುಡ ರೈಲು ತಲುಪುವುದರಿಂದ ತಿರುಪತಿ ಪ್ರಯಾಣಿಕರಿಗೆ ಈ ರೈಲು ಅತ್ಯಂತ ಸುಲಭ ಸಾಧನವಾಗಿದೆ.

ತಿರುಪತಿ ದೇಗುಲದ 300 ರೂಪಾಯಿ ಟಿಕೇಟಿಗೆ ಇಂಟರ್ ನೆಟ್ ಮೂಲಕ ಬುಕ್ ಮಾಡಲು ಸಾದ್ಯವಿದ್ದು, ಭಕ್ತಾದಿಗಳು ಬುದುವಾರ ಸಂಜೆ ರೈಲಿನ ಮೂಲಕ ತೆರಳುವುದಾದರೆ, ಗುರುವಾರ ಸಂಜೆ,ಶುಕ್ರವಾರ ಬೆಳಿಗ್ಗೆ, ಅಥವಾ ಶನಿವಾರದ ರೈಲಿನಲ್ಲಿ ತೆರಳುವುದಾದರೆ ಬಾನುವಾರ ಸಂಜೆ ,ಸೋಮವಾರ, ಮಂಗಳವಾರದ ಬೆಳಿಗ್ಗೆಯ ದರ್ಶನದ ಟಿಕೇಟು ಪಡೆದರೆ ಉಡುಪಿ ಕಡೆ ಮರಳಿ ಬರುವ ರೈಲು ಹತ್ತುವುದು ಸುಲಭ.

ವಾರಕ್ಕೆರಡು ದಿನ ,ಪ್ರತೀ ಬುದುವಾರ ಮತ್ತು ಶನಿವಾರ ಕುಂದಾಪುರ ಉಡುಪಿ ಮೂಲಕ ಸಂಜೆ ಹೊರಡುವ ತಿರುಪತಿ ರೇಣಿಗುಂಟ ರೈಲು , ಮರುದಿನ ಬೆಳಿಗ್ಗೆ ಹನ್ನೊಂದು ನಲವತ್ತಕ್ಕೆ ರೇಣಿಗುಂಟ ತಲುಪುತ್ತದೆ.

ರೇಣಿಗುಂಟದ ಬಳಿಯೇ ರೂಮ್ ಬುಕ್ ಮಾಡ ಬಹುದು ಅಥವಾ ಸರಕಾರಿ ಬಸ್ ಮೂಲಕ ಅಥವಾ ಪ್ರತೀ ಪ್ರಯಾಣಿಕರಿಗೆ ನೂರು ರೂಪಾಯಿ ಕೊಟ್ಟು ಶೇರ್ ಟಾಕ್ಸಿಗಳ ಮೂಲಕವೂ ತಿರುಮಲ ಬೆಟ್ಟಕ್ಕೆ ತಲುಪ ಬಹುದು. ರೇಣಿಗುಂಟದಿಂದ ತಿರುಪತಿ ಪಟ್ಟಣ ಕೇವಲ ೯ ಕಿಲೊಮೀಟರ್ ದೂರದಲ್ಲಿದೆ.

ಗುರುವಾರ ಸಂಜೆ ಅಥವಾ ಶುಕ್ರವಾರ ಬೆಳಿಗ್ಗೆಯೇ ದರ್ಶನ ಮುಗಿಸಿದರೆ ಶುಕ್ರವಾರ ಸಂಜೆ ೪.೪೫ ಕ್ಕೆ ವಾಪಾಸು ಇದೇ ರೈಲು ರೇಣಿಗುಂಟ ಮೂಲಕ ಉಡುಪಿ ಕುಂದಾಪುರ ಮುರುಡೇಶ್ವರ ಕಡೆ ಬರಲಿದೆ.

ಇನ್ನು ಶನಿವಾರದ ರೈಲು ಹತ್ತಿ ಆದಿತ್ಯವಾರ ರೇಣಿಗುಂಟ ತಲುಪಿದವರಿಗೆ , ಬಾನುವಾರದ ಸಂಜೆ ,ಸೋಮವಾರ ಇಡೀ ದಿನ ಹಾಗು ಮಂಗಳವಾರದ ಬೆಳಿಗ್ಗೆಯವರೆಗೆ ಸಮಯವಿದ್ದು ಮಂಗಳವಾರ ಸಂಜೆ ರೈಲು ವಾಪಾಸು ರೇಣಿಗುಂಟದ ಮೂಲಕ ಉಡುಪಿ ಕಡೆ ಬರಲಿದೆ.

ಭಾರತದ ದಕ್ಷಿಣ ಭಾಗದ ಎಲ್ಲಾ ಐದೂ ರಾಜ್ಯಗಳ ಮೂಲಕ ಹಾದು ಹೋಗುವ ಈ ರೈಲಿನಿಂದ ಗಾರ್ಮೆಂಟ್ ಉದ್ಯಮದ ತಿರುಪುರ್, ಸದ್ಗುರುಗಳ ಈಶ ಯೋಗ ಹಾಗು ಆದಿಯೋಗಿ ಕೇಂದ್ರವಾದ ಕೊಯಂಬತ್ತೂರು, ದಕ್ಷಿಣದ ಸುಪ್ರಸಿದ್ದ ಗಿರಿದಾಮ ಊಟಿ, ತೆಲಂಗಾಣದ ಪ್ರಮುಖ ನಗರಗಳ ಸಂಪರ್ಕ ಲಭಿಸಿದ್ದು, ಮುರುಡೇಶ್ವರ ಹೈದರಾಬಾದಿಗೆ ಸಂಪರ್ಕಿಸುವ ಈ ರೈಲು ಕಾರವಾರಕ್ಕೆ ವಿಸ್ತರಣೆಯಾಗಲಿ ಎಂಬ ಬೇಡಿಕೆಯೂ ಕೇಳಿ ಬಂದಿದೆ ಎಂದು ಗಣೇಶ ಪುತ್ರನ್ ತಿಳಿಸಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!