spot_img
Wednesday, April 1, 2026
spot_img

ಮಹಾಕುಂಭ ಮೇಳ : ಸುಮಾರು 2,000 ವೃದ್ಧರಿಗೆ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ವ್ಯವಸ್ಥೆ!

ಜನಪ್ರತಿನಿಧಿ (ಪ್ರಯಾಗ್ ರಾಜ್‌) : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ 2025 ಮುಗಿಯುವುದರೊಳಗೆ 2,000 ವೃದ್ಧರಿಗೆ ಸಂಗಮದಲ್ಲಿ ಪುಣ್ಯ ಸ್ನಾನಕ್ಕಾಗಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ಸೋಮವಾರ ತಿಳಿಸಿದೆ.

ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಸಂಗಮದ ದಡದಲ್ಲಿ ಪೆಂಡಲ್ ಹಾಕಲಾಗುತ್ತಿದೆ. ಶ್ರವಣ ಕುಂಭ ಉಪಕ್ರಮದಡಿ ಇದೊಂದು ಪ್ರಮುಖ ಕಾರ್ಯಕ್ರಮವಾಗಿದೆ. ಶ್ರವಣ ದೋಷವಿರುವವರಿಗೆ ತಪಾಸಣೆ ಮತ್ತು ನೆರವು ನೀಡುವ ಮೂಲಕ ಸಾವಿರಾರು ಜನರಿಗೆ ಸೇವೆ ನೀಡಲಾಗುತ್ತದೆ.

ಮಹಾ ಕುಂಭ ಮೇಳದಲ್ಲಿ ಇದೇ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ಸರ್ಕಾರ ವೃದ್ಧರು ಮತ್ತು ಮತ್ತು ಶ್ರವಣದೋಷವುಳ್ಳವರಿಗೆ ವಿಶೇಷ ಶಿಬಿರವನ್ನು ಪ್ರಾರಂಭಿಸಿದೆ. ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿರುವ ಈ ಶಿಬಿರದಲ್ಲಿ ಅಗತ್ಯವಿರುವವರಿಗೆ ಉಚಿತ ತಪಾಸಣೆ ನಡೆಸಿ, ಪರಿಕರಗಳನ್ನು ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಈ ಉಪಕ್ರಮದ ಮೂಲಕ, ವಯಸ್ಸಾದವರು, ವಿಶೇಷವಾಗಿ ಸರ್ಕಾರಿ ವೃದ್ಧಾಶ್ರಮಗಳಿಂದ ಬಂದವರು ಕುಂಭಮೇಳವನ್ನು ಕಣ್ತುಂಬಿಕೊಳ್ಳಬಹುದಾಗಿದ್ದು,. ವಿವಿಧ ವೃದ್ಧಾಶ್ರಮಗಳ ಹಿರಿಯ ನಾಗರಿಕರಿಗಾಗಿ ಕುಂಭ ಪ್ರದೇಶದಲ್ಲಿ 100 ಹಾಸಿಗೆಗಳ ಆಶ್ರಮವನ್ನು ಸ್ಥಾಪಿಸಲಾಗಿದೆ.

ವಯಸ್ಸಾದ ಭಕ್ಚರು ಆರಾಮವಾಗಿ ಉಳಿಯಲು, ಸಂಗಮ ಸ್ನಾನ ಮತ್ತು ಮಹಾ ಕುಂಭದ ಇತರ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಆಶ್ರಮದಲ್ಲಿ ವಿಶೇಷ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.

ಇಲ್ಲಿಯವರೆಗೆ, ಮಿರ್ಜಾಪುರ, ಗೊಂಡಾ, ಸಿದ್ಧಾರ್ಥನಗರ, ಭದೋಹಿ, ಕೌಶಂಬಿ, ಹರ್ದೋಯಿ, ಸೀತಾಪುರ್ ಮತ್ತು ಲಖನೌ ಜಿಲ್ಲೆಗಳಿಂದ 500 ಕ್ಕೂ ಹೆಚ್ಚು ಹಿರಿಯ ನಾಗರಿಕರು ಮಹಾಕುಂಭದಲ್ಲಿ ಭಾಗವಹಿಸಿದ್ದಾರೆ. ಫೆಬ್ರವರಿ 26 ರೊಳಗೆ 2,000 ಹಿರಿಯ ಭಕ್ತರಿಗೆ ಪುಣ್ಯ ಸ್ನಾನವನ್ನು ಸರ್ಕಾರ ಯೋಜಿಸಿದೆ.

ಡಬಲ್ ಇಂಜಿನ್ ಸರ್ಕಾರವು ರಾಜ್ಯದಾದ್ಯಂತ ಹಿರಿಯ ನಾಗರಿಕರ ಸುರಕ್ಷತೆ, ಗೌರವ ಮತ್ತು ಆರೋಗ್ಯಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮಹಾಕುಂಭ ಪ್ರದೇಶದಲ್ಲಿ ಶ್ರಾವಣ ಕುಂಭ ಆಯೋಜಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ರಾಜ್ಯ ಸಚಿವ ಅಸಿಮ್ ಅರುಣ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!