spot_img
Wednesday, April 1, 2026
spot_img

ಕಾಳಾವರ ಗ್ರಾಮ ಪಂಚಾಯತ್ ಮಕ್ಕಳ ವಿಶೇಷ ಗ್ರಾಮ ಸಭೆ | ಗಮನ ಸೆಳೆದ ಮಕ್ಕಳ ನಾಟಕ

ಜನಪ್ರತಿನಿಧಿ (ಕಾಳಾವರ) : ಕಾಳಾವರ ಗ್ರಾಮ ಪಂಚಾಯತ್ ವ್ಯಾಪಿಯ ಮಕ್ಕಳ ವಿಶೇಷ ಗ್ರಾಮ ಸಭೆ ಇಂದು (ಸೋಮವಾರ, ಫೆ. 3) ಕಾಳಾವರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು.

ಗ್ರಾಮಸಭೆಯ ನ್ಯೂಡಲ್ ಅಧಿಕಾರಿ ಕುಸುಮಾಕರ ಶೆಟ್ಟಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ನಾವಡ ಅವರು ತಮ್ಮಟೆ ಬಾರಿಸುವ ಮೂಲಕ ಮಕ್ಕಳ ವಿಶೇಷ ಗ್ರಾಮ ಸಭೆಗೆ ಚಾಲನೆ ನೀಡಿದರು.

ಕಾಳಾವರ ವಕ್ವಾಡಿ ಮತ್ತು ಅಸೋಡು ಶಾಲೆಯ ಮಕ್ಕಳು ಸಳ್ವಾಡಿ ಬ್ಯಾಂಕ್ ಆಫ್ ಬರೋಡ ತನಕ ಪಥ ಸಂಚಲನ ನೆಡೆಸಿ ಸಾರ್ವಜನಿಕರ ಗಮನ ಸೆಳೆದರು. ನಾಡಗೀತೆಯೊಂದಿಗೆ ಪ್ರಾರಂಭವಾದ ಸಭೆಯನ್ನು ಉದ್ದೇಶಿಸಿ ನ್ಯೂಡಲ್ ಅಧಿಕಾರಿ ಕುಸುಮಾಕರ್ ಶೆಟ್ಟಿ, ಪಂಚಾಯತ್ ಸದಸ್ಯ ವಕ್ವಾಡಿ ರಮೇಶ್ ಶೆಟ್ಟಿ ಮಕ್ಕಳ ಗ್ರಾಮಸಭೆ ಮಹತ್ವವನ್ನು ತಿಳಿಸಿದರು.

ಪ್ರತಿ ಶಾಲೆಯ ಮಕ್ಕಳು ತಾವು ಎದುರಿಸುತ್ತಿರುವ ಸಮಸ್ಯೆಯನ್ನು ಮುಂದಿಟ್ಟು ಪರಿಹಾರಕ್ಕೆ ಗ್ರಾಮ ಪಂಚಾಯತ್ ಮುಂದಾಗಬೇಕೆಂದು ಒತ್ತಾಯಿಸಿದರು. ಸ್ವಯಂ ಸೇವಾ ಸಂಸ್ಥೆ ನಮ್ಮ ಭೂಮಿಯ ಶ್ರೀನಿವಾಸ್ ಗಾಣಿಗ,  ಗ್ರಾಮ ಆಡಳಿತ ಅಧಿಕಾರಿ ಪ್ರಕಾಶ್ ಸುವರ್ಣ, ಗ್ರಾಮಾಂತರ ಸಹಾಯಕ ಸಬ್ ಇನ್ಸ್ಪೆಕ್ಟರ್, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ,ಗ್ರಾಮ ಪಂಚಾಯತ್ ಸದಸ್ಯರು ಎಲ್ಲ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಸಭೆಯಲ್ಲಿ ಉಪಸ್ಥಿತರಿದ್ದರು.
ಕುಂದಾಪುರ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿ ವಾಸುದೇವ ಗಂಗೇರ ಅವರು ಗ್ರಾಮ ಸಭೆಯಲ್ಲಿ ಪ್ರದರ್ಶನ ಮಾಡಲು ಶಾಲೆಯ ಮಕ್ಕಳಿಗಾಗಿಯೇ ನಿರ್ದೇಶನ ಮಾಡಿದ ಪರಿಸರ ಅರಣ್ಯ ಸಂಪತ್ತು ನಾಶದಿಂದ ಆಗುವ ಹಾನಿಯ ಕುರಿತು ಸಣ್ಣ ನಾಟಕ ಪ್ರದರ್ಶನ ಹಾಗೂ ಕಾಳಾವರ,ಅಸೋಡು ಮತ್ತು ವಕ್ವಾಡಿ ಮಕ್ಕಳ ಜನ ಜಾಗೃತಿ ಮೂಡಿಸುವ ಸ್ಕಿಟ್ ಗಳು ಎಲ್ಲರ ಗಮನ ಸೆಳೆದು ಮೆಚ್ಚುಗೆ ಗಳಿಸಿತು.

ಇದೇ ಸಂದರ್ಭದಲ್ಲಿ ಕುಂದಾಪುರ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿ ವಾಸುದೇವ ಗಂಗೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾಳಾವರ ಗ್ರಾಮ ಪಂಚಾಯತ್ ಪಿಡಿಒ ಮಂಜಯ್ಯ ಬಿಲ್ಲವ ಸ್ವಾಗತಿಸಿದರು. ನಮ್ಮ ಭೂಮಿ ಹಾಗೂ ಬೀಮಾ ಸಂಘದ ಪ್ರತಿನಿಧಿ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ರಾಮಚಂದ್ರ ನಾವಡ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!