spot_img
Sunday, February 15, 2026
spot_img

ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಜೋನ್ಸನ್ ಡಿ‌ಅಲ್ಮೇಡಾ, ಉಪಾಧ್ಯಕ್ಷರಾಗಿ ಕಿರಣ್ ಮೆಲ್ವಿನ್ ಲೋಬೊ ಪುನರಾಯ್ಕೆ

ಜನಪ್ರತಿನಿಧಿ ವಾರ್ತೆ] ಕುಂದಾಪುರ, ಫೆ.1: ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ, ಕುಂದಾಪುರ ಇದರ ನೂತನ ಅಧ್ಯಕ್ಷರಾಗಿ ಜೋನ್ಸನ್ ಡಿ‌ಅಲ್ಮೇಡಾ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಿರಣ್ ಮೆಲ್ವಿನ್ ಲೋಬೊ ನಾಡ ಪಡುಕೋಣೆ ಆಯ್ಕೆಗೊಂಡರು.

ಜ.31ರಂದು ನೂತನ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಮೈಕಲ್ ಪಿಂಟೊ ಪಿಯುಸ್ ನಗರ ಕೋಟೇಶ್ವರ, ಫಿಲಿಪ್ ಡಿಕೋಸ್ಟಾ ಕೋಣಿ, ಶ್ರೀಮತಿ ಶಾಂತಿ ಡಾಯಸ್ ಬೈಂದೂರು, ಶಾಂತಿ ಆರ್.ಕರ್ವಾಲ್ಲೊ ಕುಂದಾಪುರ, ಬ್ಯಾಪಿಸ್ಟ್ ಡಾಯಸ್ ಸಂತೆಕಟ್ಟೆ, ಸಂತೋಷ್ ಓಜ್ವಾಲ್ಡ್ ಡಿಸಿಲ್ವಾ ಕಾರ್ಕಳ, ಲಿಪ್ಟನ್ ಒಲಿವೇರಾ ತ್ರಾಸಿ, ಶ್ರೀಮತಿ ಡೈನಾ ಡಿ.ಅಲ್ಮೆಡಾ ಕುಂದಾಪುರ, ವಿನೋದ್ ಕ್ರಾಸ್ಟೊ ಕುಂದಾಪುರ, ಟೆರೆನ್ಸ್ ಸುವಾರಿಸ್ ಮೂಡುಬೈಲು ಉಡುಪಿ, ಓಜ್ಲಿನ್ ಫ್ರಾನ್ಸಿಸ್ ರೆಬೆಲ್ಲೊ ತಲ್ಲೂರು, ವಿಲ್ಸನ್ ಡಿಸೋಜ ಶಿರ್ವ, ಡೇರಿಕ್ ಡಿಸೋಜ ಸಾಸ್ತಾನ,  ಪಿ ವಲೈಂಟೆನ್ ಡಿಸೋಜ ಸಂತೆಕಟ್ಟೆ, ರೋವನ್ ಡಿಕೊಸ್ಟಾ ಕುಂದಾಪುರ ಉಪಸ್ಥಿತರಿದ್ದರು.

ಸಹಕಾರಿ ಇಲಾಖೆಯ ಅಭಿವೃದ್ದಿ ಅಧಿಕಾರಿ ಸುನೀಲ್ ಕುಮಾರ್ ಸಿ.ಎಂ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಮೇಬಲ್ ಡಿ ಅಲ್ಮೇಡಾ ವಂದಿಸಿದರು.

ಜ.20ರಂದು ನೂತನ ಆಡಳಿತ ಮಂಡಳಿಯ ಎಲ್ಲಾ 17 ಸ್ಥಾನಕ್ಕೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಹಾಲಿ ಅಧ್ಯಕ್ಷರಾದ ಜೋನ್ಸನ್ ಡಿ‌ಅಲ್ಮೇಡಾ ಅವರ ನೇತೃತ್ವದ ತಂಡ ಅವಿರೋಧ ಆಯ್ಕೆಯಾಗಿತ್ತು.

ಜೋನ್ಸನ್ ಡಿ‌ಅಲ್ಮೇಡಾ ಅವರು ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನೆಡೆಸುತ್ತಿರುವ ಇವರ ನೇತೃತ್ವದಲ್ಲಿ ಸಂಸ್ಥೆ 1 ಸಾವಿರ ಕೋಟಿ ವ್ಯವಹಾರ ದಾಖಲಿಸಿ ಸಾಧನೆ ಮಾಡಿತ್ತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!