spot_img
Monday, March 16, 2026
spot_img

ಕುಂದಾಪುರ ಪುರಸಭೆಗೆ ರಾಜ್ಯ ಸರ್ಕಾರದಿಂದ ನೂತನ ಸದಸ್ಯರ ನಾಮ ನಿರ್ದೇಶನ

ಕುಂದಾಪುರ: ರಾಜ್ಯ ಸರ್ಕಾರದಿಂದ ಪುರಸಭೆಯ ಸ್ಥಳೀಯ ಆಡಳಿತಕ್ಕೆ ನೂತನ ನಾಮ ನಿರ್ದೇಶನ ಸದಸ್ಯರನ್ನಾಗಿ ಗಣೇಶ್ ಶೇರಿಗಾರ್, ಅಶೋಕ್ ಸುವರ್ಣ, ಸದಾನಂದ ಖಾರ್ವಿ, ಶಶಿಧರ ಪೂಜಾರಿ, ಶಶಿಧರ ಇವರುಗಳನ್ನು ಸರಕಾರದ ಅಧೀನ ಕಾರ್ಯದರ್ಶಿ , ನಗರಾಭಿವೃದ್ಧಿ ಇಲಾಖೆ ನೇಮಕಗೊಳಿಸಿ ಆದೇಶ ಹೊರಡಿಸಿದೆ.

ಗಣೇಶ್ ಶೇರಿಗಾರ್: ಪ್ರಸ್ತುತ ನಗರ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ,ಎರಡು ಬಾರಿ ಎಪಿ‌ಎಂಸಿ ಉಪಾಧ್ಯಕ್ಷರಾಗಿ, ಎರಡು ಬಾರಿ ಟಿಟಿ ರಸ್ತೆಯ ಪುರಸಭಾ ಸದಸ್ಯರಾಗಿ, ಪತ್ನಿ ರವಿಕಲಾ ಗಣೇಶ್ ಶೇರೆಗಾರರನ್ನು ಎರಡು ಬಾರಿ ಪುರಸಭೆಯ ಸದಸ್ಯರಾಗಿ ಜಯಗಳಿಸುವಲ್ಲಿ ಶ್ರಮಿಸಿ, ಬಸವೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾಗಿ ,ಎಸ್ ಡಿ ಎಂ ಸಿ ಸ್ಥಾಪಕ ಅಧ್ಯಕ್ಷರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾ ಸದಸ್ಯರಾಗಿ ,ಗೆಳೆಯರ ಬಳಗ ಮತ್ತು ಚಿಕ್ಕಮ್ಮ ಕ್ರೀಡಾ ಸಂಘದ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ಅಶೋಕ್ ಸುವರ್ಣ: ಅವರು ಕಳೆದ ೩೫ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ, ಶಾಂತಿನಿಕೇತನ ವಾರ್ಡಿನ ಬುತ್ ಅಧ್ಯಕ್ಷರಾಗಿ ,ಮಾನವ ಬಂಧುತ್ವ ತಾಲೂಕು ಸಮಿತಿಯ ಸಂಚಾರಕರಾಗಿ, ಮೊಗವೀರ ಸಂಘದ ಸಕ್ರಿಯ ಸದಸ್ಯರಾಗಿದ್ದಾರೆ.

ಸದಾನಂದ ಖಾರ್ವಿ: ಕಾಂಗ್ರೆಸ್ ಪಕ್ಷದ ಬಹದ್ದೂರ್ ಶಾ ರಸ್ತೆಯ ಬುತ್ ಅಧ್ಯಕ್ಷರಾಗಿ , ಚಿಪ್ಪು ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷರಾಗಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಮಾಜಿ ನಿರ್ದೇಶಕಾಗಿ, ಶ್ರೀ ಮಂಜುನಾಥ ಧರ್ಮಸ್ಥಳ ಕ್ಷೇತ್ರ ಸ್ವಸಹಾಯ ಸಂಘ ಒಕ್ಕೂಟದ ಮಾಜಿ ಅಧ್ಯಕ್ಷರಾಗಿ , ವಿದ್ಯಾರಂಗ ಮಿತ್ರ ಮಂಡಳಿಯ ಮಾಜಿ ಸಾಮಾಜಿಕ ಕಾರ್ಯದರ್ಶಿಯಾಗಿ, ಮಹಾಕಾಳಿ ದೇವಸ್ಥಾನದ ಮಾಜಿ ಸದಸ್ಯರಾಗಿ , ತೃಪ್ತಿ ಸ್ವಸಹಾಯ ಸಂಘದ ಮಾಜಿ ಅಧ್ಯಕ್ಷರಾಗಿ, ಕಿಂಗ್ಫಿಶರ್ ಸ್ಪೋರ್ಟ್ಸ್ ಕ್ಲಬ್ ನ ಮಾಜಿ ಸದಸ್ಯರಾಗಿ ,ಭಾರತೀಯ ಮುಜದೂರು ಸಂಘದ ಜಿಲ್ಲಾ ಸಂಘದ ಮಾಜಿ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ಶಶಿಧರ ಪೂಜಾರಿ: ಇಂಟಕ್ ತಾಲೂಕು ಯುವ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರಾಗಿ, ನಾಗ ಬೊಬ್ಬರ್ಯ ದೇವಸ್ಥಾನ ಮೀನು ಮಾರ್ಕೆಟ್ ರಸ್ತೆಯ ಸದಸ್ಯರಾಗಿ ,ಲೈನ್ಸ್ ಕ್ಲಬ್ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ಶಶಿಧರ: ಕಾಂಗ್ರೆಸ್ ಪಕ್ಷದ ನಂದಿಬೆಟ್ಟು ವಾರ್ಡಿನ ಬುತ್ ಅಧ್ಯಕ್ಷರಾಗಿ, ದಲಿತ ಹಕ್ಕು ಸಮಿತಿಯ ಮಾಜಿ ಕಾರ್ಯದರ್ಶಿಯಾಗಿ, ಹಲೋ ಗೆಳೆಯ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!