spot_img
Tuesday, May 19, 2026
spot_img

ಆಜ್ರಿ ತಗ್ಗುಂಜೆ ಫೌಂಡೇಶನ್ ಸಂಸ್ಥೆ ಉದ್ಘಾಟನಾ ಸಮಾರಂಭ

ಜನಪ್ರತಿನಿಧಿ (ಮರವಂತೆ) : ಇತ್ತೀಚೆಗೆ ಪುನರ್ ಪ್ರತಿಷ್ಠಾಪನೆಗೊಂಡ ಆಜ್ರಿ ತಗ್ಗುಂಜೆ ಉಮಾ ಮಹೇಶ್ವರ ದೇವಸ್ಥಾನದ ಧಾರ್ಮಿಕ ಸಭಾ ಕಾರ್ಯಕ್ರಮದ ನಂತರದ ಶುಭ ಸಂದರ್ಭದಲ್ಲಿ ಆಜ್ರಿ ತಗ್ಗುಂಜೆ ಕುಟುಂಬಸ್ಥರು ಮತ್ತು ಊರಿನ ಸಮಾನ ಮನಸ್ಕರಿಂದ ಆಜ್ರಿ ತಗ್ಗುಂಜೆ ಫೌಂಡೇಶನ್ ರಿ., ಎನ್ನುವ ಸಮಾಜ ಸೇವೆ ಮತ್ತು ಪರಿಸರ ಮತ್ತು ಪರಂಪರೆಯ ಪುನರುತ್ಥಾನ ಸೇವಾ ಉದ್ದೇಶವನ್ನಿಟ್ಟುಕೊಂಡು ಆಜ್ರಿ ತಗ್ಗುಂಜೆ ಫೌಂಡೇಶನ್ ಎನ್ನುವ ಸಂಸ್ಥೆಯನ್ನು ಪೂಜ್ಯ ಶ್ರೀ ಶ್ರೀಕೇಮಾರು ಈಶ ವಿಠಲ ದಾಸ ಸ್ವಾಮೀಜಿ ಉದ್ಘಾಟಿಸಿದರು.

ಉದ್ಘಾಟಿಸಿ ಮಾತನಾಡಿದ ಕೇಮಾರು ಈಶ ವಿಠಲ ಸ್ವಾಮೀಜಿಯವರು ತುಳುವ ಕರ್ನಾಟಕದ ನಮ್ಮ ಹಿರಿಯರ ಪರಂಪರೆಯ ರಕ್ಷಣೆಗೆ ಆಜ್ರಿ ತಗ್ಗುಂಜೆ ಫೌಂಡೇಶನ್ (ರಿ.,)ನ ಶೈಕ್ಷಣಿಕ, ಮತ್ತು ಸಾಮಾಜಿಕ ಸೇವಾ ಕಾರ್ಯ, ಪರಿಸರ ಮತ್ತು ಪಾರಂಪರಿಕ ವಸ್ತುಗಳ ರಕ್ಷಣೆಯ ಕಾರ್ಯಕ್ರಮ ಯಶಸ್ವಿಯಾಗಲಿ. ತುಳುವ ಕರ್ನಾಟಕದ ಸನಾತನ ಧರ್ಮದ ಅನುವಾಯಿಗಳಾದ ನಾವೆಲ್ಲರೂ ನಶಿಸುತ್ತಿರುವ ಪ್ರಾಚೀನ ವಸ್ತುಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಸಾಮಾಜಿಕ ಕರೆ ನೀಡಿದರು. ಪ್ರತಿಯೊಬ್ಬ ನಾಗರೀಕನು ಈ ಸನಾತನ ಪರಂಪರೆಯ ರಕ್ಷಣೆಯ ಯಾಗದಲ್ಲಿ ಸಹಕರಿಸಿ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಆಶಿಸಿ, ಆಶೀರ್ವಚಿಸಿದರು.

ಆಜ್ರಿ ತಗ್ಗುಂಜೆ ಫೌಂಡೇಶನ್ (ರಿ.,) ವತಿಯಿಂದ ನಡೆಸಲಾದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ, ಮಾತನಾಡಿದ, ಶ್ರೀ ಕಲ್ಲಡ್ಕ ಪ್ರಭಾಕರ ಭಟ್‌ರವರು ಆಜ್ರಿ ತಗ್ಗುಂಜೆ ಫೌಂಡೇಶನ್‌ನ ಈ ಸಾಮಾಜಿಕ ಮತ್ತು ಶೈಕ್ಷಣಿಕ ಸನಾತನ ಪಾರಂಪರಿಕ ವಸ್ತುಗಳ ರಕ್ಷಣಾ ಕಾರ್ಯ ಯಶಸ್ವಿಯಾಗಿ ಮುಂದುವರಿಯಲಿ ಎಂದು ಹಾರೈಸಿದರು.

ಆಜ್ರಿ ತಗ್ಗುಂಜೆ ಫೌಂಡೇಶನ್‌ನ ಅಧ್ಯಕ್ಷರಾದ ಶ್ರೀ ಆಜ್ರಿ ತಗ್ಗುಂಜೆ ಸಚಿನ್ ಶೆಟ್ಟಿಯವರು ಫೌಂಡೇಶನ್ ನ ಧ್ಯೇಯೋದ್ದೇಶ ಮತ್ತು ವಿಶೇಷವಾಗಿ ನಮ್ಮ ಸುತ್ತಮುತ್ತಲಿನ ಚಾರಿತ್ರಿಕ, ಮೋನೋಮೆಂಟ್ ಮತ್ತು ಕಣ್ಮರೆಯಾಗುತ್ತಿರುವ ನಮ್ಮ ಹಿರಿಯರು ನಮ್ಮ ದೈನಂದಿನ ಜೀವನದಲ್ಲಿ ಬಳಸುತ್ತಿದ್ದ ಗೃಹೋಪಯೋಗಿ ಮತ್ತು ಕೃಷಿ ಸಂಬಂಧ ಪಟ್ಟ ಮತ್ತು ತುಳುವ ಕರ್ನಾಟಕದ ದೈವಗಳಿಗೆ ಸಂಬಂಧ ಪಟ್ಟ ನದಿ ಮತ್ತು ಕರಗಿಸುವ ಅಸಂಪ್ರದಾಯಿಕ ಅವೈಜ್ಞಾನಿಕ ಕಾರ್ಯವನ್ನು ಬಿಟ್ಟು, ಹಳೆಯ ವಸ್ತುಗಳನ್ನು, ಧಾರ್ಮಿಕ ಸಂಕೋಚಗೊಂಡ ಹಳೆಯ ವಸ್ತು ಮತ್ತು ಪೂಜಾ ಮೂರ್ತಿಗಳನ್ನು ಉಳಿಸಿ, ಮುಂದಿನ ತಲೆಮಾರಿಗೆ ನಮ್ಮ ಪರಂಪರೆಯ ಅಪೂರ್ವ ವಸ್ತುಗಳನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು. ಅದನ್ನು ಉಳಿಸಿಕೊಳ್ಳಬೇಕಾದದ್ದು ಪ್ರತಿಯೊಬ್ಬರ ಸಹಕಾರವನ್ನು ಬಯಸಿದರು. ಅಲ್ಲದೇ ಫೌಂಡೇಶನ್‌ನ ಇತರೆ ಸೇವಾ ಕಾರ್ಯಗಳ ಬಗ್ಗೆ ವಿವರಿಸಿದರು.

ಈ ಸಮಾರಂಭದಲ್ಲಿ ಆಜ್ರಿ ತಗ್ಗುಂಜೆ ಉಮಾ ಮಹೇಶ್ವರ ದೇವಸ್ಥಾನದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಆಸ್ಟ್ರೇಲಿಯಾ ಮತ್ತು ಅತಿಥಿಗಳಾದ ಆಜ್ರಿ ತಗ್ಗುಂಜೆ ಫೌಂಡೇಶನ್‌ನ ಗೌರವ ಅಧ್ಯಕ್ಷರಾದ ತೋನ್ಸೆ ಸುಧಾಕರ ಶೆಟ್ಟಿ, ತೋನ್ಸೆ ಆನಂದ ಎಂ. ಶೆಟ್ಟಿ, ಸಿ.ಎಂ.ಡಿ. ಆಗ್ರನಿಕ್ ಇಂಡಸ್ಟ್ರೀಸ್ ಲಿ., ಮುಂಬೈ ಡಾ. ಅತುಲ್ ಕುಮಾರ್ ಶೆಟ್ಟಿ, ನಿವೃತ್ತ ಉಪನ್ಯಾಸಕ ಎಸ್. ಶಶಿಧರ ಶೆಟ್ಟಿ, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಸಿ.ಎಂ.ಡಿ. ಫೋರ್ಚುನ್ ಗ್ರೂಫ್ ಆಫ್ ಹೋಟೆಲ್ಸ್ ದುಬೈ, ಟ್ರಸ್ಟಿಗಳಾದ ಹರೀಶ್ ಹೆಗ್ಡೆ, ಸಂಪತ್ ಶೆಟ್ಟಿ ತಗ್ಗುಂಜೆ ಉಪಸ್ಥಿತರಿದ್ದರು. ಪ್ರೊಪೇಸರ್ ಮುರುಗೇಶಿ, ಪ್ರಾಚ್ಯ ವಸ್ತು ವಿಭಾಗ ನಿವೃತ್ತ ಪ್ರಾಧ್ಯಾಪಕ, ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜು, ಪ್ರಾಚ್ಯ ವಸ್ತುಗಳ ಉಳಿಸುವ ಪ್ರಾಮುಖ್ಯತೆ ಮತ್ತು ಕಾಲ ಮಾನಗಳ ಬಗ್ಗೆ ವಿವರಣೆ ನೀಡಿದರು.
ಬಾಂಡ್ಯ ಸುಬ್ಬಣ್ಣ ಶೆಟ್ಟಿ, , ಹಾರಾಡಿ ದಯಾನಂದ ಶೆಟ್ಟಿ ಡೈರೆಕ್ಟರ್, ಸಿಟಿ ಸೆಂಟರ್ ಬ್ರಹ್ಮಾವರ, ಕಟ್ಕೇರೆ ಪ್ರೇಮಾನಂದ ಶೆಟ್ಟಿ, ಶ್ರೀಮತಿ ಶಿಲ್ಪ ದಯಾನಂದ ಶೆಟ್ಟಿ ಆಸ್ಟ್ರೇಲಿಯ, ಹುಂತ್ರಿಕೆ ಸುಧಾಕರ ಶೆಟ್ಟಿ, ಬೈಕಾಡಿ ಸುಪ್ರಸಾದ್ ಹೆಗ್ಡೆ, ಪ್ರೊ. ಬಾಲಕೃಷ್ಣ ಶೆಟ್ಟಿ ನಿವೃತ್ತ ಪ್ರಾಂಶುಪಾಲರು ಕಟೀಲು ಕಾಲೇಜು, ಐಕಳ ಹರೀಶ್ ಶೆಟ್ಟಿ, ಜಾಗತೀಕ ಬಂಟರ ಪ್ರತಿಷ್ಠಾನ ಮತ್ತು ಉಳ್ತೂರು ಮೋಹನದಾಸ ಶೆಟ್ಟಿ ಖಜಾಂಚಿ ಜಾಗತೀಕ ಬಂಟರ ಪ್ರತಿಷ್ಠಾನ ಉಪಸ್ಥಿತರಿದ್ದರು.

 


ಆರ್.ಜೆ. ಎನ್. ನಯನ ಕಾರ್ಯಕ್ರಮ ನಿರೂಪಿಸಿದರು. ಆಜ್ರಿ ತಗ್ಗುಂಜೆ ಫೌಂಡೇಶನ್ (ರಿ.,)ನ ಟ್ರಸ್ಟಿಗಳಾದ ಸಂಪತ್ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!