spot_img
Thursday, April 2, 2026
spot_img

ದೈವಶಕ್ತಿ ವೃದ್ದಿಯಿಂದ ಅನುಗ್ರಹ ಸಿದ್ಧಿ-ವಿದ್ಯಾಪ್ರಸನ್ನ ಶ್ರೀ

ಕಟ್‌ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನದ ನೂತನ ದಾರುಬಿಂಬದ ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕ ಮಹೋತ್ಸವ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಅಗೋಚರ ಉನ್ನತ ಶಕ್ತಿಯೊಂದಕ್ಕೆ ತಲೆಬಾಗಿ ಬದುಕುವ ಪ್ರಜ್ಞೆ ನಮ್ಮಲ್ಲಿ ಜಾಗೃತವಾಗಬೇಕು. ಅಣುರೇಣುತೃಣಕಾಷ್ಠಗಳಲ್ಲಿ ದೇವದೈವಗಳ ಶಕ್ತಿಯ ಅಸ್ತಿತ್ವವನ್ನು ಕಾಣುತ್ತೇವೆ. ಇಂಥಹ ಆರಾಧನಾ ಶಕ್ತಿಯನ್ನು ಚೈತನ್ಯ ಕಾಪಾಡಿಕೊಳ್ಳುವ ಹೊಣೆಗಾರಿಕೆಯೂ ಭಕ್ತರ ಮೇಲಿದೆ. ಕಾಲಕಾಲಕ್ಕೆ ಸೂಕ್ತ ವಿಧಿವಿಧಾನಗಳನ್ನು ನೆರವೇರಿಸುವುದರಿಂದ ದೈವ ಶಕ್ತಿ ಸಂಚಯ ವೃದ್ಧಿಸುವುದು ಎಂದು ಶ್ರೀಕ್ಷೇತ್ರ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಅವರು ಕಟ್‌ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದಲ್ಲಿ ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನದ ನೂತನ ದಾರುಬಿಂಬದ ಪ್ರತಿಷ್ಠೆ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉರಿಯುತ್ತಿರುವ ದೀಪದಂತೆ ಧಾರ್ಮಿಕ ಕ್ಷೇತ್ರಗಳಲ್ಲಿ ಸಾನಿಧ್ಯದ ಶಕ್ತಿ ಕುಂದದಂತೆ ಕಾಲಕಾಲಕ್ಕೆ ಸೂಕ್ತ ಚೈತನ್ಯ ನೀಡುವ ಕಾರ್ಯಗಳನ್ನು ನಿರ್ವಹಿಸಬೇಕು.ಇದರಿಂದ ಕ್ಷೇತ್ರದಲ್ಲಿ ಶಕ್ತಿ ವೃದ್ದಿಯಾಗಿ ನಂಬಿದ ಭಕ್ತಾಧಿಗಳಿಗೆ ದೇವರ ಅನುಗ್ರಹವಾಗುತ್ತದೆ. ಕಟ್ ಬೇಲ್ತೂರಿನಲ್ಲಿ ಅಂತಹ ದೇವತಾ ಕಾರ್ಯಗಳು ನಿರಂತರವಾಗಿ ನೆಡೆಯುತ್ತಲೇ ಇದೆ. ರಕ್ತಚಂದನ ವೃಕ್ಷದ ಸಣ್ಣ ಸಣ್ಣ ವಿಗ್ರಹಗಳನ್ನು ಬೇರೆ ಬೇರೆ ಕಡೆ ನೋಡಬಹುದು. ಆದರೆ ಇಲ್ಲಿರುವ ಬೃಹತ್ ಆಗಿರುವ, ಭವ್ಯವಾದ ರಕ್ತಚಂದನದ ವಿಗ್ರಹ ಬೇರೆಲ್ಲೂ ಇಲ್ಲ, ಹಿಂದಿನ ವಿಗ್ರಹದಂತೆ ಭವ್ಯವಾದ ವಿಗ್ರಹ ನಿರ್ಮಾಣವಾಗಿದೆ ಎಂದರು.

ವೇ.ಮೂ.ಬ್ರಹ್ಮಶ್ರೀ ಕೆ.ಎಸ್ ಲಕ್ಷ್ಮೀನಾರಾಯಣ ಸೋಮಯಾಜಿ ಕಮ್ಮರಡಿ ಅವರು ಧಾರ್ಮಿಕ ಉಪನ್ಯಾಸ ನೀಡಿ, ಕಷ್ಟ, ನಷ್ಟ, ರೋಗ ರುಜಿನ, ವ್ಯಥೆ ಮನುಷ್ಯ ಸಹಜವಾದುದು. ಪುಣ್ಯ ಕಾರ್ಯದಿಂದ ಸುಖದ ಅಪೇಕ್ಷೆ ಪಡುತ್ತೇವೆ. ಪುಣ್ಯದ ಫಲವಾಗಿ ಸುಖ ಪ್ರಾಪ್ತವಾಗಬೇಕಾದರೆ ಭಗವಂತನ ಅನುಗ್ರಹ ಅಗತ್ಯ. ಪ್ರಾಮಾಣಿಕತೆ, ಸತ್ಯ, ಧರ್ಮಶ್ರದ್ಧೆ ಅನುಸರಿಸುವುದರಿಂದ ಜನ್ಮ ಸಾರ್ಥಕತೆಯಾಗುತ್ತದೆ. ನಾವು ಪಡೆಯುವ ಸಂಸ್ಕಾರ ನಮ್ಮನ್ನು ಉನ್ನತಿಯತ್ತ ತಲುಪಿಸುತ್ತದೆ ಎಂದು ಹೇಳಿದ ಅವರು ದೇವರ ಆರಾಧನೆಯಲ್ಲಿ ವೇದಮಂತ್ರಗಳು ಸಮಸ್ತ ಲೋಕದ ಸುಖಶಾಂತಿಯನ್ನೆ ಬಯಸುತ್ತವೆ. ವೇದಮಂತ್ರದಲ್ಲಿ ಏಕವಚನಕ್ಕೆ ಅವಕಾಶವಿರುವುದಿಲ್ಲ. ಬಿಂಬದಲ್ಲಿ ಸಾನಿಧ್ಯ ಅನುಗ್ರಹಿಸಿ ಸಮಸ್ತರನ್ನು ಸಂರಕ್ಷಿಸುವ ಎಂದು ದೇವಿಯಲ್ಲಿ ಬೇಡಿಕೊಳ್ಳುತ್ತೇವೆ ಎಂದರು.

ಆಡಳಿತ ಸಮಿತಿ ಗೌರವಾಧ್ಯಕ್ಷರಾದ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ದೈವಸ್ಥಾನ ಪುರಾತನವಾದ ಧಾರ್ಮಿಕ ಹಿನ್ನೆಲೆಯುಳ್ಳ ಕ್ಷೇತ್ರ. ಈ ಹಿಂದೆ ಭದ್ರಮಹಾಕಾಳಿಯ ಮೂರ್ತಿಯನ್ನು ರಕ್ತ ಚಂದನ ಮರದಿಂದಲೇ ನಿರ್ಮಿಸಲಾಗಿದ್ದು ಇತ್ತೀಚೆಗೆ ಈ ವಿಗ್ರಹವನ್ನು ಬದಲಾಯಿಸಬೇಕಾದ ಅನಿವಾರ್ಯತೆ ಎದುರಾದ ಸಂದರ್ಭ ಮೂರು ವರ್ಷಗಳ ಕಾಲ ಸೂಕ್ತವಾದ ರಕ್ತಚಂದನ ಮರಕ್ಕಾಗಿ ಶೋಧ ನೆಡೆಸಿ ಕೊನೆಗೆ ಶಿವಮೊಗ್ಗದಲ್ಲಿ ರಕ್ತಚಂದನ ಮರ ದೊರಕಿತು. ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ರಾಜಗೋಪಾಲ ಆಚಾರ್ಯರು ಭದ್ರಮಹಾಕಾಳಿ ದೇವಿಯ ವಿಗ್ರಹವನ್ನು ನಿರ್ಮಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಆಡಳಿತ ಸಮಿತಿ ಗೌರವಾಧ್ಯಕ್ಷರಾದ ಕೆ.ಗೋಪಾಲ ಪೂಜಾರಿ, ಆಡಳಿತ ಸಮಿತಿ ಅಧ್ಯಕ್ಷರಾದ ಕೆ.ಆನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
೨೫ ವರ್ಷಗಳ ಅಧ್ಯಕ್ಷರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಕೋಟೇಶ್ವರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ, ಮುಂಬಯಿ ದೀಪಕ್ ಹಾಸ್ಪಿಟಲ್ ನ ಡಾ.ಭಾಸ್ಕರ ಶೆಟ್ಟಿ ಕೂಕನಾಡು, ವಿಜಯ ಬ್ಯಾಂಕ್ ನಿವೃತ್ತ ಸೀನಿಯರ್ ಮೆನೇಜರ್ ಕೆ.ವಿಠಲ ಶೆಟ್ಟಿ ಕಟ್ ಬೇಲ್ತೂರು, ಉದಯ ನಾರಾಯಣ ಪೂಜಾರಿ, ಪಾಂಡುರಂಗ ಪೂಜಾರಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಶಂಕರ ಶೆಟ್ಟಿ ಕೂಕನಾಡು, ಚಂದ್ರಶೇಖರ ಶೆಟ್ಟಿ, ಪ್ರಭಾಕರ ಪೂಜಾರಿ, ಸಂದೀಪ ಪೂಜಾರಿ, ಸಂಜಯ ಪೂಜಾರಿ, ಸತೀಶ್ ಶೆಟ್ಟಿ ಹೆಗ್ಡೆಯವರಮನೆ, ಅನಿಲ್ ಸುನೀಲ್, ಡಾ.ರಾಮಕೃಷ್ಣ ಕುಲಾಲ್ ಬೆಂಗಳೂರು, ಜಗದೀಶ ಶ್ರೀಯಾನ್ ಬಟ್ಟೆಕುದ್ರು, ಸುರೇಶ, ಮಾಧವ ಪೂಜಾರಿ, ಡಾ.ಭಾಸ್ಕರ ಶೆಟ್ಟಿ ಕೂಕನಾಡು, ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ, ಸುಬ್ಬಣ್ಣ ಶೆಟ್ಟಿ ನಾಗಯ್ಯ ಶೆಟ್ರಮನೆ, ಬಿ.ಭಾಸ್ಕರ ಶೆಟ್ಟಿ ವಾಸ ಶೆಟ್ರಮನೆ, ಹೈಗುಳಿ ಪಾತ್ರಿಗಳಾದ ರವಿ ನಾಯ್ಕ, ಅಮ್ಮನವರ ಪಾತ್ರಿ ಗೋವಿಂದ ಪೂಜಾರಿ, ಅರ್ಚಕರಾದ ದೊಟ್ಟ ಪೂಜಾರಿ, ಜೋಗಿ ಸಮಾಜದ ಶೇಖರ ಬಳೆಗಾರ್ ಉಪಸ್ಥಿತರಿದ್ದರು.

ವಿನಯ ಆಚಾರ್ಯ ಪ್ರಾರ್ಥನೆ ಮಾಡಿದರು. ಆಡಳಿತ ಸಮಿತಿ ಅಧ್ಯಕ್ಷ ಕೆ.ಆನಂದ ಶೆಟ್ಟಿ ಸ್ವಾಗತಿಸಿದರು. ಸೀತಾರಾಮ ಶೆಟ್ಟಿ ಹೆಗ್ಡೆಯವರ ಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯಶಿಕ್ಷಕ ಡಾ.ಕಿಶೋರ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಜ.23ರಂದು ಗುರುವಾರ ಶ್ರೀ ಭದ್ರಮಹಾಕಾಳಿ ಮೊದಲ್ಗೊಂಡು 39 ಬಿಂಬಗಳಿಗೆ ಅಧಿವಾಸ ಪೂಜೆ, ಪ್ರತಿಷ್ಠಾಧಿವಾಸ ಹೋಮ, ಪೀಠಾಧಿವಾಸ ಹೋಮ, ನಪುಂಸಕ ಶಿಲಾಧಿವಾಸ ಹೋಮ, ಶಕ್ತಿ ಹೋಮ, ಸಂಜೆ ಬ್ರಹ್ಮಕುಂಭ ಪ್ರತಿಷ್ಠೆ, ಆಧಿವಾಸ ಹೋಮ ನಡೆಯಿತು. ಜ.24 ಶುಕ್ರವಾರ ಬೆಳಿಗ್ಗೆ ಶ್ರೀ ಭದ್ರಮಹಾಕಾಳಿ ದೇವಿಯ ಭವ್ಯವಾದ ರಕ್ತ ಚಂದನದ ದಾರು ಬಿಂಬ ಪ್ರತಿಷ್ಠಾಪನೆ ನಡೆಯಿತು. ಬ್ರಹ್ಮಕುಂಭಾಭಿಷೇಕ, ಮಹಾಪೂಜೆ, ಅಮ್ಮನವರ ದರ್ಶನ ನಡೆಯಲಿದೆ. ಮಧ್ಯಾಹ್ನ ಮಹಾ‌ಅನ್ನಸಂತರ್ಪಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ  ಅಪರಾಹ್ನ  ನೃತ್ಯ ವಸಂತ ನಾಟ್ಯಾಲಯ ಕುಂದಾಪುರ ಇವರಿಂದ ನೃತ್ಯ ಸಿಂಚನ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!