spot_img
Sunday, February 15, 2026
spot_img

ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆ: ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲದ ಹೋರಾಟ

ಜನಪ್ರತಿನಿಧಿ ವಾರ್ತೆ ( ಕುಂದಾಪುರ): ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತರ ತಂಡ ಸಮಬಲದ ಹೋರಾಟ ನೀಡಿದೆ.

ಬಿಜೆಪಿ ನೇತೃತ್ವದ ಸಹಕಾರ ಭಾರತಿ ತಂಡ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಕೃಷ್ಣ ಪೂಜಾರಿ, ಸಂಜೀವ ಪೂಜಾರಿ, ನಟರಾಜ, ರಾಮ್ ಕಿಶನ ಹೆಗ್ಡೆ ಗೆಲುವು ಸಾಧಿಸಿದ್ದಾರೆ. ಮಹಿಳಾ ಮೀಸಲು ಕ್ಷೇತ್ರದಲ್ಲಿ ಅನುಪಮ ಶೆಟ್ಟಿ, ಹಿಂದುಳಿದ ವರ್ಗ ಎ ಕ್ಷೇತ್ರದಲ್ಲಿ ಅಶೋಕ್ ಶ್ರೀಯಾನ್ ಗೆಲುವು ಸಾಧಿಸಿದ್ದಾರೆ.

ವಿಕಾಸ್ ಹೆಗ್ಡೆ ನೇತೃತ್ವದ ಸೇವೆಗಾಗಿ ಸಹಕಾರ ಒಕ್ಕೂಟ ಸಾಮಾನ್ಯ ಕ್ಷೇತ್ರದಲ್ಲಿ ಶೀನ ಪೂಜಾರಿ, ಗೋಪಾಲ ಶೆಟ್ಟಿಗಾರ್ ಗೆಲುವು ಸಾಧಿಸಿದ್ದಾರೆ. ಮಹಿಳಾ ಮೀಸಲು ಕ್ಷೇತ್ರದಲ್ಲಿ ಸವಿತಾ ಪೂಜಾರಿ, ಹಿಂದುಳಿದ ವರ್ಗ ಬ ಕ್ಷೇತ್ರದಲ್ಲಿ ವಿಕಾಸ್ ಹೆಗ್ಡೆ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಮಾಲಿನಿ ಗೆಲುವು ಸಾಧಿಸಿದ್ದಾರೆ. ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ವೀರ ಅವಿರೋಧವಾಗಿ ಆಯ್ಕೆಯಾಗಿದ್ದರು.

13 ಸ್ಥಾನಗಳನ್ನು ಹೊಂದಿರುವ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಪರಿಶಿಷ್ಟ ಪಂಗಡದ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿತ್ತು. 1 ಸ್ಥಾನ ಜಿಲ್ಲಾ ಬ್ಯಾಂಕ್ ಪ್ರತಿನಿಧಿಗೆಗೆ ಮೀಸಲಿರಿಸಲಾಗಿತ್ತು. ಉಳಿದ 11 ಸ್ಥಾನಗಳಿಗೆ ಇಂದು (ಜ.19ರಂದು) ಚುನಾವಣೆ ನಡೆದಿತ್ತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!