spot_img
Sunday, February 15, 2026
spot_img

ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆ: ಎನ್.ಮಂಜಯ್ಯ ಶೆಟ್ಟಿ ನೇತೃತ್ವದ ತಂಡಕ್ಕೆ ಭರ್ಜರಿ ಗೆಲುವು

ಜನಪ್ರತಿನಿಧಿ ವಾರ್ತೆ (ಕುಂದಾಪುರ): ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ ನಿ., ವಂಡ್ಸೆ ಇದರ ಆಡಳಿತ ಮಂಡಳಿಗೆ ಜ.18ರಂದು ನಡೆದ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳು ಹಾಲಿ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ನೇತೃತ್ವದ ವಂಡ್ಸೆ ರೈತ ಸಹಕಾರಿ ಬಳಗ ಭರ್ಜರಿ ಗೆಲುವು ಸಾಧಿಸಿದೆ.
ಬಿಜೆಪಿ ಬೆಂಬಲಿತ ರೈತಧ್ವನಿ ಗುಂಪು ಹೀನಾಯ ಸೋಲು ಕಂಡಿದೆ. ಕಾಂಗ್ರೆಸ್ ಪಕ್ಷ ಇಲ್ಲಿ ಎನ್.ಮಂಜಯ್ಯ ಶೆಟ್ಟಿ ನೇತೃತ್ವದ ವಂಡ್ಸೆ ರೈತ ಸಹಕಾರಿ ಬಳಗದೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಎಲ್ಲಾ 12 ಸ್ಥಾನಗಳಲ್ಲಿ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ನೇತೃತ್ವದ ಅಭ್ಯರ್ಥಿಗಳು ಸಾವಿರಕ್ಕೂ ಮಿಕ್ಕಿ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದರು. ಒಟ್ಟು 13 ಸ್ಥಾನಗಳ ಪೈಕಿ ಪರಿಶಿಷ್ಟ ಪಂಗಡ ಸ್ಥಾನಕ್ಕೆ ಅವಿರೋಧ ಆಯ್ಕೆ ಆಗಿತ್ತು. ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ನೇತೃತ್ವದ ತಂಡ ಎಲ್ಲಾ 13 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.
ಸಾಮಾನ್ಯ ಮೀಸಲು ಕ್ಷೇತ್ರದಿಂದ ಎನ್.ಮಂಜಯ್ಯ ಶೆಟ್ಟ ಸಬ್ಲಾಡಿ. ರಾಜರಾಮ ಶೆಟ್ಟಿ ಇಡೂರು, ಜಗನ್ನಾಥ ಶೆಟ್ಟಿ ಹೊಸೂರು, ರಾಮಚಂದ್ರ ಮಂಜ ಮಾರಣಕಟ್ಟೆ, ಸಂಜೀವ ಪೂಜಾರಿ, ಅರುಣ್ ಕುಮಾರ್ ಶೆಟ್ಟಿ ಹೊಸೂರು ನಿಡೂಟಿ, ಪ್ರಭಾಕರ ಕೆರಾಡಿ, ಹಿಂದುಳಿದ ವರ್ಗ ‘ಅ’ ಕ್ಷೇತ್ರದಿಂದ ಗುಂಡು ಪೂಜಾರಿ ಹರವರಿ, ಹಿಂದುಳಿದ ವರ್ಗ ‘ಬ’ ಕ್ಷೇತ್ರದಿಂದ ಶೇಖರ ಶೆಟ್ಟಿ ನೂಜು ಬೆಳ್ಳಾಲ, ಮಹಿಳಾ ಮೀಸಲು ಕ್ಷೇತ್ರದಿಂದ ಜಲಜಾಕ್ಷಿ ಶೆಡ್ತಿ ಹೊಸೂರು ನಿಡೂಟಿ, ಅಂಬಿಕಾ ಶೆಟ್ಟಿ ವಂಡ್ಸೆ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ರಾಜ ನಾಯ್ಕ ಇಡೂರು ಗೆಲುವು ಸಾಧಿಸಿದ್ದಾರೆ. ಪರಿಶಿಷ್ಟ ಪಂಗಡದ ಸ್ಥಾನದಿಂದ ಸಂತೋಷ ನಾಯ್ಕ ಕೆರಾಡಿ ಅವಿರೋಧ ಆಯ್ಕೆಯಾಗಿದ್ದರು.
ಚುನಾವಣಾಧಿಕಾರಿಯಾಗಿ ಸುಮಿತ್ರಾ ಕುಮಾರಿ ಎನ್.ಎಸ್ ಕರ್ತವ್ಯ ನಿರ್ವಹಿಸಿದರು. ಸಹಾಯಕ ಚುನಾವಣಾಧಿಕಾರಿ ಸಂತೋಷ್ ಕುಮಾರ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮತಿ ಶೆಟ್ಟಿ ಸಹಕರಿಸಿದರು.
ಫಲಿತಾಂಶದ ವಿವರ: ಸಾಮಾನ್ಯ ಕ್ಷೇತ್ರದಲ್ಲಿ ಅರುಣ್ ಕುಮಾರ್ ಶೆಟ್ಟಿ-1394 ಮತ, ಗೋವರ್ದನ ಶೆಟ್ಟಿ-353 ಮತ, ಜಗನ್ನಾಥ ಶೆಟ್ಟಿ-1260 ಮತ, ದೀಪಕ ಕುಮಾರ್ ಶೆಟ್ಟಿ-467 ಮತ, ಪ್ರತಾಪಚಂದ್ರ ಶೆಟ್ಟಿ-208 ಮತ, ಪ್ರಭಾಕರ ಶೆಟ್ಟಿ-1217 ಮತ, ಭಾಸ್ಕರ ಶೆಟ್ಟಿ-396 ಮತ, ಎನ್.ಮಂಜಯ್ಯ ಶೆಟ್ಟಿ-1443 ಮತ, ರಾಜರಾಮ ಶೆಟ್ಟಿ-1254 ಮತ, ರಾಜೇಶ ಮುಳ್ಳಾಣ-433 ಮತ, ರಾಮಚಂದ್ರ ಮಂಜ-1370 ಮತ, ಸರ್ವೋತ್ತಮ ಶೆಟ್ಟಿ-265 ಮತ, ಸಂಜೀವ ಪೂಜಾರಿ-1223 ಮತ ಪಡೆದರು.
ಮಹಿಳಾ ಮೀಸಲು ಕ್ಷೇತ್ರದಿಂದ ಅಂಬಿಕಾ ಶೆಟ್ಟಿ-1292 ಮತ, ಜಲಜಾಕ್ಷಿ ಶೆಡ್ತಿ-1230 ಮತ, ನಿರ್ಮಲ ಶೆಟ್ಟಿ-424 ಮತ, ಶ್ರೀಮತಿ ಶೆಟ್ಟಿ-172 ಮತ, ಸಾದಮ್ಮ ಶೆಟ್ಟಿ-145 ಮತ ಪಡೆದಿದ್ದಾರೆ.
ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಲ್ಲಿ ಗುಂಡು ಜಿ.ಪೂಜಾರಿ –1377 ಮತ, ಶಿವರಾಮ ಗಾಣಿಗ-418 ಮತ ಪಡೆದಿದ್ದಾರೆ.
ಹಿಂದುಳಿದ ವರ್ಗ ಬ ಮೀಸಲು ಕ್ಷೇತ್ರದಲ್ಲಿ ಚಂದ್ರಶೇಖರ ಶೆಟ್ಟಿ-514 ಮತ, ಶೇಖರ ಶೆಟ್ಟಿ- 1302 ಮತ ಪಡೆದಿದ್ದಾರೆ.
ಪ.ಜಾ ಮೀಸಲು ಕ್ಷೇತ್ರದಲ್ಲಿ ಆನಂದ-425 ಮತ, ರಾಜು ನಾಯ್ಕ ಇಡೂರು-1375 ಮತ ಪಡೆದಿದ್ದಾರೆ.
ಒಟ್ಟು 2165 ಮತಗಳ ಪೈಕಿ, 1913 ಮತ ಚಲಾವಣೆ ಆಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!