spot_img
Monday, March 16, 2026
spot_img

ಒಂದೇ ಕಲಿಕಾ ಕೇಂದ್ರದಲ್ಲಿ ಎರಡು ತಿಟ್ಟುಗಳ ಶಿಕ್ಷಣ ಸಿಗುವುದು ಕಲಾಭ್ಯಾಸಿಗಳ ಭಾಗ್ಯ-ಪ್ರಸಾದ್ ಕುಮಾರ್ ಮೊಗೆಬೆಟ್ಟು

ತೆಕ್ಕಟ್ಟೆ ಹಯಗ್ರೀವದಲ್ಲಿ ತೆಂಕುತಿಟ್ಟು ಭಾಗವತಿಕೆ ತರಗತಿ ಉದ್ಘಾಟನೆ

ಜನಪ್ರತಿನಿಧಿ ವಾರ್ತೆ (ತೆಕ್ಕಟ್ಟೆ): ಕರಾವಳಿಯ ಅಭಿಮಾನದ ಕಲಾಸಂಸ್ಥೆಯಾದ ಯಶಸ್ವೀ ಕಲಾವೃಂದದ ಆಶ್ರಯದಲ್ಲಿ ಇನ್ನು ಮುಂದೆ ಬಡಗಿನ ಹಿಮ್ಮೇಳದೊಂದಿಗೆ ತೆಂಕುತಿಟ್ಟು ಹಿಮ್ಮೇಳ ತರಗತಿಯೂ ನಡೆಯುತ್ತಿರುವುದು ಅತ್ಯಂತ ಸಂತಸ ತಂದಿದೆ. ತಾಳ ಮದ್ದಳೆಯೊಂದಿಗೆ ಜಾಗಟೆಯ ಮಧುರ ಮೈತ್ರಿ ಬಯಸುವ ಕಲಾಸಕ್ತರಿಗೆ ಬೆಳ್ಳಿ ಹಬ್ಬದ ಸಂಸ್ಥೆ ನೀಡಿದ ಚಿನ್ನದ ಅವಕಾಶವಿದು. ಒಂದೇ ಕಲಿಕಾ ಕೇಂದ್ರದಲ್ಲಿ ಯಕ್ಷಗಾನ ಕಲಾಮಾತೆಯ ಯುಗ್ಮ ನಯನಗಳಂತಿರುವ ಎರಡು ತಿಟ್ಟುಗಳ ಸಶಕ್ತ ಶಿಕ್ಷಣ ಸಿಗುವುದೆಂದರೆ ನಿಜಕ್ಕೂ ಕಲಾಭ್ಯಾಸಿಗಳ ಭಾಗ್ಯವೆನ್ನಬೇಕು. ಯಶಸ್ವೀ ಕಲಾವೃಂದದ ಕಲಾತ್ಮಕ ಯೋಚನೆಯ ಮಹತ್ವಪೂರ್ಣ ನಡೆಯಿದು. ತೆಂಕು ತಿಟ್ಟಿನ ಅಗ್ರಮಾನ್ಯ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಗುರುತನದಲ್ಲಿ ತರಗತಿಗಳು ನಡೆಯುವ ಸಂಗತಿ ಪ್ರಶಂಸನೀಯ ಎಂದು ತರಗತಿಯನ್ನು ಉದ್ಘಾಟಿಸಿ ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಮಾತನ್ನಾಡಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಸಿನ್ಸ್ 1999 ಶ್ವೇತಯಾನ-97 ಕಾರ್ಯಕ್ರಮದಡಿಯಲ್ಲಿ ಜನವರಿ 11ರಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮೊಗೆಬೆಟ್ಟು ಮಾತನ್ನಾಡಿದರು.
ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಅನೇಕ ಪ್ರಸಿದ್ಧ ಭಾಗವತರ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್. ಲವಲವಿಕೆಯಿಂದ ಭಾಗವತಿಕೆಯ ಮೂಲ ಪಾಠವನ್ನು ಮಾಡುತ್ತಾ, ಗಾನಾಮೃತದ ಮೂಲ ಸತ್ವವನ್ನು ವಿವರಿಸುತ್ತಾ ಪ್ರಸಿದ್ಧಿ ಹೊಂದಿದ ಭಾಗವತರು. ೭೫ರ ಇಳೀ ವಯಸ್ಸಿನಲ್ಲಿಯೂ ಅನೇಕ ಶಿಷ್ಯರಿಗೆ ಶಿಕ್ಷಕನಾಗಿ ಮುಂದುವರಿಯುತ್ತಿರುವುದು ಶ್ಲಾಘನೀಯ. ಅನುಭವೀ ಹಿರಿಯರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಶ್ರೇಷ್ಠ ಪ್ರಶಸ್ತಿ ಪಾರ್ಥಿಸುಬ್ಬ ಪ್ರಶಸ್ತಿ ಲಭಿಸಿರುವುದು ಅನೇಕರ ಪ್ರಶಂಸೆಗೆ ಪಾತ್ರವಾಗಿದೆ. ಅಕಾಡೆಮಿಯ ಪ್ರಶಸ್ತಿ ಗೌರವ ಇನ್ನಷ್ಟು ಹೆಚ್ಚಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾಂಬಾಡಿಯವರನ್ನು ಅಭಿನಂದಿಸಿ ಮಾತನ್ನಾಡಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುದರ್ಶನ ಉರಾಳ, ಶ್ವೇತಯಾನದ ಕಾರ್ಯಾಧ್ಯಕ್ಷ ಗೋಪಾಲ ಪೂಜಾರಿ ಕೊಮೆ, ಪವನ್ ಆಚಾರ್, ಕಾರ್ಯದರ್ಶಿ ವೆಂಕಟೇಶ ವೈದ್ಯ, ಮೋಹನಚಂದ್ರ ಪಂಜಿಗಾರು ಉಪಸ್ಥಿತರಿದ್ದರು.

ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗುರು ಲಂಬೋದರ ಹೆಗಡೆ ಪ್ರಾಸ್ತಾವಿಕ ಮಾತನ್ನಾಡಿದರು. ಪೂಜಾ ಆಚಾರ್, ಪಂಚಮಿ ವೈದ್ಯ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!