spot_img
Monday, March 16, 2026
spot_img

ಗಾಂಧಿಜೀ ಎಂದೂ ಟೋಪಿ ಧರಿಸಲಿಲ್ಲ. ಆದರೆ ಗಾಂಧಿ ಟೋಪಿಯನ್ನು ವಿಶ್ವವೇ ಸ್ಮರಿಸುತ್ತದೆ : ನಾಯಕತ್ವದ ಬಗ್ಗೆ ನಮೋ ಉವಾಚ

ಜನಪ್ರತಿನಿಧಿ (ನವ ದೆಹಲಿ) : ಯುವಕರು ಸ್ವಾರ್ಥ ಇರಿಸಿಕೊಂಡು ರಾಜಕೀಯಕ್ಕೆ ಬರಬಾರದು. ಮಿಷನ್ (ಗುರಿ) ಇರಿಸಿಕೊಂಡು ರಾಜಕೀಯಕ್ಕೆ ಬರಬೇಕು. ಆಗ ಅವರು ಯಶಸ್ವಿ ರಾಜಕಾರಣಿ ಎನ್ನಿಸಿಕೊಳ್ಳಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪೀಪಲ್‌ ಬೈ ಡಬ್ಲ್ಯೂಟಿಎಫ್‌ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮೋದಿ, ಉದ್ಯಮಿಯಾಗಬೇಕೆನ್ನುವವರು ತಮ್ಮ ಕಂಪನಿಯ ಬೆಳವಣಿಗೆಯನ್ನು ನೋಡುತ್ತಾರೆ. ಆದರೆ ರಾಜಕಾರಣಿಯಾಗಬೇಕೆನ್ನುವವರು ರಾಷ್ಟ್ರ ಮೊದಲು ಎನ್ನುತ್ತಾ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ದರಾಗಿರಬೇಕು. ಆಗ ಅವರನ್ನು ಸಮಾಜ ಒಪ್ಪಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ರಾಜಕೀಯಕ್ಕೆ ಬರುವುದು ಬೇರೆ, ರಾಜಕೀಯದಲ್ಲಿ ಯಶಸ್ವಿಯಾಗುವುದು ಬೇರೆ. ನೀವು ಒಂದು ತಂಡದ ಆಟಗಾರರಾಗಿ ಕೆಲಸ ಮಾಡಿದಾಗ ಮತ್ತು ಜನರ ಕಲ್ಯಾಣಕ್ಕೆ ಸಮರ್ಪಿತರಾದಾಗ ಮಾತ್ರ ಯಶಸ್ವಿ ರಾಜಕಾರಣಿ ಆಗುತ್ತೀರಿ. ಸ್ವಾರ್ಥ ಉದ್ದೇಶ ಇರಿಸಿಕೊಂಡು ರಾಜಕೀಯಕ್ಕೆ ಬರಬಾರದು. ಸ್ವಾರ್ಥಿ ರಾಜಕಾರಣಿಗಳಿಗೆ ಉಳಿಗಾಲವಿಲ್ಲ. ಗಾಂಧಿಜೀ ಎಂದೂ ಟೋಪಿ ಧರಿಸಲಿಲ್ಲ. ಆದರೆ ಈಗ ಗಾಂಧಿ ಟೋಪಿಯನ್ನು ವಿಶ್ವವೇ ಸ್ಮರಿಸುತ್ತದೆ. ಅದೇ ನಿಜವಾದ ನಾಯಕತ್ವ ಹಾಗೂ ಸಂವಹನದ ನೈಜ ಶಕ್ತಿ ಎಂದವರು ಹೇಳಿದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!