spot_img
Wednesday, April 1, 2026
spot_img

ಮೀನುಗಾರಿಕೆ ವೇಳೆ ಮೀನುಗಾರ ಸಮುದ್ರಕ್ಕೆ ಬಿದ್ದು ಕಣ್ಮರೆಯಾಗಿ 9 ದಿನ: ಇನ್ನೂ ಕುರುಹು ಅಲಭ್ಯ

ಕುಂದಾಪುರ: ಜನವರಿ 2-2025 ಮೀನುಗಾರಿಕಾ ಪರ್ಷಿನ್ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ ಗಂಗೊಳ್ಳಿ ಲೈಟ್‌ಹೌಸ್ ನಿವಾಸಿ ನಾರಾಯಣ ಮೊಗವೀರ (58) ಎನ್ನುವವರು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಕಾಣೆಯಾಗಿ ೯ ದಿನಗಳು ಕಳೆದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಗಂಗೊಳ್ಳಿಯ ಪರ್ಷಿನ್ ಬೋಟ್ ಗಳು, ಕರಾವಳಿ ಕಾವಲು ಪಡೆ ಮತ್ತು ಮುಳುಗು ತಜ್ಞ ದಿನೇಶ್ ಖಾರ್ವಿ ಮತ್ತು ತಂಡ, ನಾರಾಯಣ ಮೊಗವೀರ ಅವರ ಮನೆಯವರು ಸತತ 8 ದಿನಗಳಿಂದ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಇನ್ನೂ ಕೂಡ ಅವರ ಬಗ್ಗೆ ಯಾವುದೇ ಕುರುಹು ಕಂಡು ಬಂದಿಲ್ಲ.

ಮುಳುಗು ತಜ್ಞರ ಪ್ರಕಾರ ವ್ಯಕ್ತಿಯ ಸುಳಿವು ಹೆಚ್ಚಾಗಿ ಭಟ್ಕಳ ಹೊನ್ನಾವರ ತದಡಿ ಬೇಲಿಕೇರಿ ಕಾರವಾರ, ಈ ಭಾಗದಲ್ಲಿ ಕಂಡುಬರುವ ಹೆಚ್ಚಿನ ಸಾಧ್ಯತೆ ಇದೆ ಎನ್ನಲಾಗಿದೆ.

ಇತ್ತ ಗಂಗೊಳ್ಳಿಯಲ್ಲಿ ಮೀನುಗಾರ ನಾರಾಯಣ ಮೊಗವೀರ ಮನೆಯಲ್ಲಿ ಅಕ್ರಂದನ ಮುಗಿಲು ಮುಟ್ಟಿದೆ. ನಾರಾಯಣ ಮೊಗವೀರ ಅವರ ಮನೆಗೆ ಇಂದು ಮೊಗವೀರ ಮಹಾಜನ ಸೇವಾ ಸಂಘದ ನಿಯೋಗ ಭೇಟಿ ನೀಡಿ ಸಾಂತ್ವಾನ ಹೇಳಿದೆ. ಶೋಧ ಕಾರ್ಯ ತೀವ್ರಗೊಳಿಸುವ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!