spot_img
Monday, March 16, 2026
spot_img

ಪ್ಲಾಸ್ಟಿಕ್ ಪ್ರಕೃತಿಯ ವರವೋ? ಶಾಪವೋ?

ಪ್ಲಾಸ್ಟಿಕ್… ಇದು ಎಂಥ ಅದ್ಭುತ ಆವಿಷ್ಕಾರ ಎನ್ನುವ ನಿಲುವು ಬಹುತೇಕರದು. ಪ್ರತಿಯೊಂದು ವಸ್ತು ಒಂದು ಕಾಲಘಟ್ಟದ ನಂತರ ತನ್ನ ನಿಜ ಬಣ್ಣ ಬಯಲು ಮಾಡಿದಂತೆ ಪ್ಲಾಸ್ಟಿಕ್ ಕೂಡ ಇತ್ತೀಚಿಗೆ ತನ್ನ ಮುಖವಾಡವನ್ನು ಕಳಚುವುದರೊಂದಿಗೆ ತನ್ನ ನೈಜತೆಯನ್ನು ತೋರಿದೆ. ಹಲವು ವಸ್ತುಗಳಿಗೆ ಪರ್ಯಾಯ ಎಂಬಂತೆ ಬಳಕೆಯಾಗುತ್ತಿರುವ ಈ ಪ್ಲಾಸ್ಟಿಕ್ ಎಷ್ಟು ಸರಳ ಬಳಕೆಯಾಗಿದೆ ಅಲ್ವಾ?? ಅಷ್ಟೇ ಸುಲಭವಾಗಿ ನಮಗೆ ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ ಹಾಗೂ ಹೃದಯದ ಸಮಸ್ಯೆಗಳನ್ನು ಸಾಗಾಟ ಮಾಡುತ್ತಲಿದೆ ಎಂಬ ಸತ್ಯ ನಮಗೆ ತಿಳಿಯುತ್ತಿಲ್ಲ.

ಅಂದರೆ ಈ ಬರಹ ಪ್ಲಾಸ್ಟಿಕ್ ಬಳಕೆದಾರರಿಗೆ ಮಾತ್ರ; ನಮಗಲ್ಲ ಅನ್ನುವವರು ಸ್ವಲ್ಪ ಈ ಕಡೆ ಗಮನ ಹರಿಸಿ. ಅಂಕಿ ಅಂಶಗಳ ಪ್ರಕಾರ ನಮ್ಮ ಭೂಮಂಡಲವು 71% ರಷ್ಟು ನೀರಿನಿಂದ ಆವೃತವಾಗಿದ್ದರೆ 90% ಪ್ಲಾಸ್ಟಿಕ್ ನಿಂದ ತುಂಬಿಹೋಗಿದೆ. ಇವುಗಳ ಮರುಬಳಕೆಯ ಅಂಕಿ ಅಂಶ ನಮ್ಮನ್ನು ಸ್ತಬ್ಧವಾಗಿಸುತ್ತದೆ. ಇದರಲ್ಲಿ 37 % ಪ್ಲಾಸ್ಟಿಕ್ ಭೂಮಿಯನ್ನು ಸೇರಿದರೆ 20% ಜಲ ಮೂಲಗಳನ್ನು ತಲುಪುತ್ತಿದೆ. ಇನ್ನು 12 % ಪ್ಲಾಸ್ಟಿಕ್ ಯಾವುದೋ ಒಂದು ರೂಪದಲ್ಲಿ ಮತ್ತೆ ಮಾನವನ ದೇಹವನ್ನೇ ಪ್ರವೇಶಿಸುತ್ತದೆ. 14 % ಪ್ಲಾಸ್ಟಿಕ್ ಎಲ್ಲಿ ಹೋಗುತ್ತಿದೆ ಎಂಬುದರ ಮಾಹಿತಿಯೇ ಇಲ್ಲ. ಉಳಿದ 17 % ಪ್ಲಾಸ್ಟಿಕ್ ಮರುಬಳಕೆಗೆ ಹೋಗುತ್ತಿದೆ. ಆದರೂ ಮರುಬಳಕೆಯಾಗಿ ಬರುತ್ತಿರುವ ಪ್ಲಾಸ್ಟಿಕ್ ಕೇವಲ 9% . ಸಿಂಪಲ್ಲಾಗಿ ಹೇಳಬೇಕೆಂದರೆ ನಾವು ತಯಾರಿಸುವ 100% ಪ್ಲಾಸ್ಟಿಕ್ ನಲ್ಲಿ ಕೇವಲ 9% ಮರುಬಳಕೆಯಾಗುತ್ತಿದೆ. ಉಳಿದ 91% ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿಯೇ ಉಳಿದಿದೆ.

ಹಲವು ವರ್ಷಗಳಿಂದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಯಾಗಿಸುವುದರ ಕುರಿತು ಸರ್ಕಾರ, ಸಂಘ – ಸಂಸ್ಥೆಗಳು ಅನೇಕ ಅಭಿಯಾನ ಕಾರ್ಯಕ್ರಮಗಳನ್ನು ನಡೆಸಿದರೂ ಜನ ಅದರ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ಪ್ಲಾಸ್ಟಿಕ್ ಮಾಲಿನ್ಯದ ಕುರಿತು ಒಂದು ಅಸಡ್ಡೆಯೇ ಉಳಿದಿತ್ತು. ಆದರೆ ಇತ್ತೀಚಿಗೆ ದೊರೆತ ಅಂಕಿ ಅಂಶಗಳು ಎಂತವರಲ್ಲಿಯೂ ಭಯ ಮೂಡಿಸುವಂತಿತ್ತು.

ಜನದಟ್ಟಣೆ ಇರುವ ಪ್ರದೇಶದಲ್ಲಿ ಪ್ಲಾಸ್ಟಿಕ್ ಸಂಗ್ರಹ ಮಾಡಿದಾಗ ಕೇವಲ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದುವರೆ ಟನ್ ಪ್ಲಾಸ್ಟಿಕ್ ಸಂಗ್ರಹವಾಗಿದೆ. ಇದು ಅರಣ್ಯ ವಲಯಕ್ಕೆ ಸೇರಿರುವ ಪ್ರದೇಶವಾಗಿರುವುದರಿಂದ ಅಲ್ಲಿನ ಅರಣ್ಯ ಅಧಿಕಾರಿಗಳೇ ಹೇಳುವಂತೆ ಆಕಸ್ಮಿಕವಾಗಿ ಯಾವುದೇ ಕಾರಣವಿಲ್ಲದೆ ಸತ್ತ ಕಾಡು ಪ್ರಾಣಿಗಳ ಮರಣೋತ್ತರ ಪರೀಕ್ಷೆ ನಡೆಸಿದಾಗ ಆ ಪ್ರಾಣಿಗಳ ಹೊಟ್ಟೆಯಲ್ಲಿ 60% ಪ್ಲಾಸ್ಟಿಕ್ ಕಂಡು ಬರುತ್ತಿದೆ. ಮನುಷ್ಯ ತನ್ನ ಮೋಜು ಮಸ್ತಿಗೆ ಅರಣ್ಯಗಳಲ್ಲಿ ಪಾರ್ಟಿ ಮಾಡಿ, ಕುಡಿದು ಮರದಲ್ಲಿ ಸಿಕ್ಕಿಸಿದ ಬಾಟಲಿಗೆ ಪ್ರಾಣಿಯೊಂದು ತಲೆ ಸವರಿಕೊಳ್ಳುತ್ತಿದ್ದಾಗ ಬಾಟಲಿಯ ಗಾಜಿಂದ ಅಲ್ಲೇ ಪ್ರಾಣ ಬಿಟ್ಟಿದೆ.

ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಲಿದೆ. Single use plastic ನ ಬಳಕೆಯ ಪ್ರಮಾಣ ಕಡಿಮೆಯಾಗುತ್ತಲಿದೆ. ಆಗಲೇ ಹೇಳಿದಂತೆ ಲೆಕ್ಕಕ್ಕೆ ಸಿಗದೆ ಕಣ್ಮರೆಯಾಗುತ್ತಿರುವ ಪ್ಲಾಸ್ಟಿಕ್ ಮಾನವನ ಮನರಂಜನೆಯ ಹೆಸರಿನಲ್ಲಿ ಕಾಡು ಸೇರುತ್ತಲಿದೆ. ಇವುಗಳು ಮಣ್ಣಲ್ಲಿ ಕರಗಲು ಕನಿಷ್ಠ ಒಂದು ಸಾವಿರ ವರ್ಷಗಳು ಬೇಕು. ಕೇವಲ 75 ರಿಂದ 80 ವರ್ಷಗಳವರೆಗೆ ಭೂಮಿಯ ಅತಿಥಿಯಾಗಿ ಬಂದಿರುವ ನಾವು ಭೂಮಿಯ ತಿಥಿ ಮಾಡಲು ಸಂಕಲ್ಪ ಮಾಡಿದಂತಿದೆ. ನಾವು ಭೂಮಿ, ಆಕಾಶ, ನೀರನ್ನು ದೇವರಂತೆ ಪೂಜಿಸಿ ನಮ್ಮೆಲ್ಲ ಪಾಪ ಕರ್ಮಗಳನ್ನು ನದಿಗಳಲ್ಲಿ ಸುರಿಯುತ್ತಿದ್ದೇವೆ.

21 ನೆಯ ಶತಮಾನದಲ್ಲಿರುವ ನಮಗೆ ತಿಳಿಯಬೇಕಾದದ್ದು ನದಿ – ಪರಿಸರ ಇದ್ದರೆ ಮಾತ್ರ ನಮ್ಮ ಉಳಿವು ಎಂದು. ಪ್ರಕೃತಿಯನ್ನು ಪ್ರಕೃತಿ ಹಾಗೆ ನೋಡಿ; ಪೂಜೆ ಪುನಸ್ಕಾರದ ಹೆಸರಿನಲ್ಲಿ ಪ್ರಕೃತಿಯ ಅಂತ್ಯವಾಗುವುದು ಬೇಡ. ಈಗಾಗಲೇ ನಾವು ಮಾಡಿರುವ ತಪ್ಪಿಗೆ ಸರ್ಕಾರ ಸಾವಿರಾರು ಕೋಟಿ ಹಣವನ್ನು ವ್ಯಯಿಸಿ ನಮಾಮಿ ಗಂಗಾ ಯೋಜನೆಯನ್ನು ತಂದಿದೆ. ಆದರೂ ಗಂಗೆ ಮತ್ತೆ ತನ್ನ ನೈಜ ಸ್ಥಿತಿಗೆ ಬರುವ ಸಾಧ್ಯತೆ ಕಡಿಮೆ, ಅದರ ಪವಿತ್ರತೆ ಮರಳಿ ಬರುವುದು ಸಾಧ್ಯವೇ? ಈಗಾಗಲೇ ಪ್ಲಾಸ್ಟಿಕ್ ನಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದೇವೆ. ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆಗೆ ನಾವು ಸೇವಿಸುವ ಹಾಲು ಹಸಿವಿನಿಂದ ಬರುತ್ತದೆ ಎಂಬ ವಿಚಾರವನ್ನು ಗ್ರಾಫಿಕ್ಸ್ ಮೂಲಕ ತಿಳಿಸಬೇಕಾಗಬಹುದು.

ಹಾಗಾಗಿ ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ. ಏಕೆಂದರೆ ಅತಿ ಹೆಚ್ಚು ಪ್ಲಾಸ್ಟಿಕ್ ಮಾಲಿನ್ಯ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾವನ್ನು ಹಿಂದೆ ಹಾಕಿ ಟಾಪ್ 5ನೇ ಸ್ಥಾನದಲ್ಲಿ ನಿಂತಿದ್ದೇವೆ. ಭಾರತವು ದಿನಕ್ಕೆ 26,000 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ತಯಾರು ಮಾಡುತ್ತಿದೆ. ಇಂದಿನಿಂದಾದರೂ ಪ್ಲಾಸ್ಟಿಕ್ ಮುಕ್ತ ಪೃಥ್ವಿಯನ್ನು ತಯಾರು ಮಾಡಲು ಪ್ರಯತ್ನ ನಡೆಸೋಣ. ಧರಿತ್ರಿಗೆ ಅವಳಂತೆಯೇ ಉಸಿರಾಡಲು ಬಿಡೋಣ. ಹಾಗಾಗಿ Let’s Say No To Plastic. ಪ್ಲಾಸ್ಟಿಕ್ ಮುಕ್ತ ಪರಿಸರದಲ್ಲಿ ಸ್ವಚ್ಛಂದವಾಗಿ ಬದುಕಲು ಕಲಿಯೋಣ…

-ರಶ್ಮಿ ಉಡುಪ ಮೊಳಹಳ್ಳಿ
SKVMS GFGC Kundapura Koteshwara

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!