spot_img
Sunday, February 15, 2026
spot_img

ಚಿಕ್ಕಮಗಳೂರು ಅಲ್ಲ, ಬೆಂಗಳೂರಿನಲ್ಲಿ ಸಿಎಂ ಸಮ್ಮುಖದಲ್ಲೇ ಆರು ಮಂದಿ ನಕ್ಸಲರ ಶರಣಾಗತಿ | ಶರಣಾಗತಿಗೆ ನಕ್ಸಲರ ಬೇಡಿಕೆ ಏನು ಗೊತ್ತಾ ?

ಜನಪ್ರತಿನಿಧಿ (ಚಿಕ್ಕಮಗಳೂರು/ಬೆಂಗಳೂರು)ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಸುಮಾರು ಎರಡು ದಶಕಗಳ ಕಾಲ ಬಂದೂಕು ಹಿಡಿದು ಹೋರಾಟ ನಡೆಸಿದ್ದ 6 ಮಂದಿ ನಕ್ಸಲರು ಇಂದು(ಬುಧವಾರ) ಶರಣಾಗತಿಗೆ ಸಮ್ಮತಿಸಿದ್ದಾರೆ.

ಮುಂಡಗಾರು ಲತಾ, ಸುಂದರಿ ಕುಟ್ಟೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ. ವಸಂತ, ಟಿ. ಎನ್. ಜೀಶ್ ಅಲಿಯಾಸ್ ಜಯಣ್ಣ ಬುಧವಾರ ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಮುಂದೆ ಶರಣಾಗಲಿದ್ದಾರೆ. ಸರ್ಕಾರ- ನಕ್ಸಲರ ಮಧ್ಯ ಮಧ್ಯಸ್ಥಿಕೆ ವಹಿಸಿರುವ ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡ ಕೆ.ಎಲ್‌. ಅಶೋಕ್ ಶರಣಾಗತಿ ವಿಷಯ ಖಚಿತಪಡಿಸಿದ್ದಾರೆ.

ಜಿಲ್ಲಾಡಳಿತದ ತಾವು ಸಮಾಜದ ಮುಖ್ಯ ವಾಹಿನಿಗೆ ಬರುವುದಾಗಿ ನಕ್ಸಲೀಯರು ಪತ್ರ ಬರೆದ ಹಿನ್ನೆಲೆಯಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗೆ ಅನ್ವಯವಾಗುವಂತೆ 18 ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದರು. ಈ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿಸಸಲಾಗಿತ್ತು. ಕೆಲವು ಬೇಡಿಕೆ ಈಡೇರಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಶರಣಾಗತಿಗೆ ಮುಂದಾದ ನಕ್ಸಲರ ಬೇಡಿಕೆ ಏನು ?

ಆರು ಮಂದಿ ನಕ್ಸಲರು ಪ್ರಕಟಣೆಗಳನ್ನು ಮುಂದಿಟ್ಟಿದ್ದಾರೆ. ಜೈಲಿನಲ್ಲಿರುವ ನಕ್ಸಲರ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಮಾಡಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು. ವಿಕ್ರಂಗೌಡ ಎನ್‌ಕೌಂಟರ್‌ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಬೇಕು, ಆದಿವಾಸಿ, ದಲಿತ, ರೈತ, ಕೂಲಿ ಕಾರ್ಮಿಕರು, ಪರಿಸರ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರ ಖಚಿತ ಹೆಜ್ಜೆ ಇಡಬೇಕು ಎಂದು ನಕ್ಸಲರು ಪ್ರಕಟಣೆಯ ಮೂಲಕ ಬೇಡಿಕೆ ಇಟ್ಟಿದ್ದಾರೆ.

ಮುಖ್ಯಮಂತ್ರಿ ನಕ್ಸಲರು ಬರೆದ ಪತ್ರದಲ್ಲಿ ಏನಿದೆ?: 

ನಕ್ಸಲ್ ಪುನರ್ವಸತಿ ಸಮಿತಿಗೆ ಆರು ಮಂದಿ ನಕ್ಸಲೀಯರು ಜ.3 ರಂದು ಹಲವು ಬೇಡಿಕೆ ಮುಂದಿಟ್ಟು ಪತ್ರ ಬರೆದಿದ್ದಾರೆ. ಇದೇ ಪತ್ರ ಕೇರಳ ಹಾಗೂ ತಮಿಳುನಾಡು ರಾಜ್ಯ ಸರ್ಕಾರಕ್ಕೂ ಸಲ್ಲಿಸಲಾಗಿದೆ. ಈ ಪತ್ರದಲ್ಲಿ ಉಲ್ಲೇಖಿಸಿರುವ ಪ್ರಕಾರ, ಸಮಾಜ, ಸರ್ಕಾರ ಹಾಗೂ ಜನಪರ ಸಂಘಟನೆಗಳುಏನುಬಯಸುತ್ತಿವೆ ಎಂಬುದು ಅರಿವಾಗಿದೆ.

ದೇಶದ ಇಂದಿನ ಸಂದರ್ಭ, ಚಳವಳಿಗಳು ಪಡೆಯುತ್ತಿರುವ ರೂಪಾಂತರ, ಸಾಮಾಜಿಕ ಅಗತ್ಯ ಎಲ್ಲ ಗಮನಿಸಿ ಸಶಸ್ತ್ರ ಹೋರಾಟದ ಮಾರ್ಗ ಬದಲಾಯಿಸಿ ಪ್ರಜಾ ತಾಂತ್ರಿಕ ಮುಖ್ಯವಾಹಿನಿಗೆ ಮರಳುವುದು ಒಳ್ಳೆಯದು. ಅದಕ್ಕೆ ಸಾಧ್ಯತೆ ಇದೆ ಎಂದು ಮನವರಿಕೆ ಆಗಿದೆ. ನಾವು ಯಾವುದೇ ಒತ್ತಡವಿಲ್ಲದೆ ಸ್ವ ಇಚ್ಛೆಯಿಂದ ಮುಖ್ಯ ವಾಹಿನಿಗೆ ಬರಲು ಬಯಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಶರಣಗಾಗುವ ನಕ್ಸಲರು 

* ಮುಂಡಗಾರು ಲತಾ
* ಸುಂದರಿ ಕುಟ್ಲೂರು
* ವನಜಾಕ್ಷಿ ಬಾಳೆಹೊಳೆ
* ಮಾರಪ್ಪ ಅರೋಲಿ
* ಕೆ.ವಸಂತ
* ಟಿ.ಎನ್‌. ಜೀಶ್‌

ಬೆಳಗ್ಗೆ ಹೊತ್ತಿಗೆ ಚಿಕ್ಕಮಗಳೂರಿನಲ್ಲಿ ಶರಣಾಗತಿಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೇ, ಈಗ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಶರಣಾಗುತ್ತಾರೆ ಎಂಬ ವರದಿಯಾಗಿದೆ. ಆರು ನಕ್ಸಲರು ಆಗಮನ ಕುಟುಂಬ ಸದಸ್ಯರ ಜತೆ ಚರ್ಚೆ. ಬಳಿಕ ಡೀಸಿ ಕಚೇರಿಗೆ ಶರಣಾಗತಿಯ ಬಳಿಕ ವಶಕ್ಕೆ ಪಡೆಯಲಿರುವ ಪೊಲೀಸರು, ನಂತರ ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!