spot_img
Saturday, February 14, 2026
spot_img

ಕುಂದಾಪುರದಲ್ಲಿ ಯಕ್ಷರಾತ್ರಿ ದಶಯಾನ | ಹುತಾತ್ಮ ಯೋಧ ಅನೂಪ್ ಪೂಜಾರಿಗೆ ನುಡಿನಮನ | ಸಾಧಕರಿಗೆ ಸನ್ಮಾನ

ಜನಪ್ರತಿನಿಧಿ (ಕುಂದಾಪುರ) : ಕುಂದಾಪುರದ ನೆಹರೂ ಮೈದಾನದಲ್ಲಿ ಯಕ್ಷ ಸಂಘಟಕ ಕೋಣಿ ಗಜೇಂದ್ರ ಆಚಾರ್ ಸಾರಥ್ಯದಲ್ಲಿ ಪೆರ್ಡೂರು ಮೇಳದವರಿಂದ ಯಕ್ಷರಾತ್ರಿ ದಶಯಾನ ನೆರವೇರಿತು. ಈ ವೀರ ಯೋದ ಅನೂಪ್ ಪೂಜಾರಿ ಬೀಜಾಡಿಯವರಿಗೆ ನುಡಿನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಯಕ್ಷರಾತ್ರಿ ಯಶೋಗಾತೆ ಗೌರವವಾಗಿ ಪದ್ಮಮ್ಮ ಹೊದ್ರೋಳ್ಳಿ ಬೀಜಾಡಿ ಇವರಿಗೆ ಸಲ್ಲಿಸಲಾಯಿತು, ಕಲಾಗೌರವವಾಗಿ ಕಮಲಶಿಲೆ ಮಹಾಬಲ ದೇವಾಡಿಗ, ರವೀಂದ್ರ ದೇವಾಡಿಗ ಕಮಲಶಿಲೆ, ಸುಬ್ರಹ್ಮಣ್ಯ ಗಾಣಿಗ ಕೋಣಿ ಇವರಿಗೆ ಸಲ್ಲಿಸಲಾಯಿತು, ಶ್ರೇಷ್ಠ ಸಂಘಟನಾ ಗೌರವವಾಗಿ ಸಂಪತ್ ಕನ್ನಂತ್ ಕುಡೇರಿ, ಪ್ರಸಂಗಕರ್ತೆ ಶ್ವೇತಾ ಬೋಳಂಬಳ್ಳಿ, ಯಕ್ಷಗುರು ಪ್ರಸಾದ ಮೊಗೆಬೆಟ್ಟು, ನಿರೂಪಕರಾದ ದಾಮೋದರ ಶರ್ಮಾ ಬಾರ್ಕೂರು, ಪ್ರವೀಣ್ ಭಂಡಾರಿ ಕೋಣಿ ಇವರನ್ನುಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಾರಾಯಣ ಆಚಾರ್ ಭವಾನಿ ಬಿಲ್ಡರ್ಸ್ ಉಡುಪಿ, ಉದ್ಯಮಿ ಉದಯ ಆಚಾರ್ ಹುಚ್ಕೆರೆ, ಹಿರಿಯ ಧಾರ್ಮಿಕ ಮುಖಂಡ ಕೋಣಿ ಕೃಷ್ಣದೇವ ಕಾರಂತ್, ಪೆರ್ಡೂರು ಮೇಳದ ಯಜಮಾನರಾದ ವೈ. ಕರುಣಾಕರ ಶೆಟ್ಟಿ, ಭಾಗವತ ರಾಘವೇಂದ್ರ ಆಚಾರ್ ಜನ್ಸಾಲೆ, ಯಕ್ಷಪೋಷಕ ಮಹಮದ್ ಇಕ್ಬಾಲ್ ಹಾಲಾಡಿ, ಹಿಂದುಳಿದ ವರ್ಗಗಳ ಮಕ್ಕಳ ಕಲ್ಯಾಣ ಇಲಾಖೆಯ ಶ್ರೀಕಾಂತ ಗುನಗ, ಉದ್ಯಮಿ ಮನೋಹರ ಕೋಣಿ, ಮಧುಕರ ಮಣಿಯಾಡಿ, ಅಶೋಕ ಪೂಜಾರಿ ಕೋಣಿ ಉಪಸ್ಥಿತರಿದ್ದರು.

ದಾಮೋದರ ಶರ್ಮಾ ನಿರೂಪಿಸಿ, ಕಾರ್ಯಕ್ರಮ ಸಂಘಟಕ ಗಜೇಂದ್ರ ಆಚಾರ್ ಕೋಣಿ ಸ್ವಾಗತಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಬಳಿಕ, ಯುವ ಪ್ರಸಂಗಕರ್ತೆ ಶ್ವೇತಾ ಬೋಳಂಬಳ್ಳಿ ಕಥಾ ಸಾಹಿತ್ಯದ, ಪ್ರಸಾದ್ ಕುಮಾರ್ ಮೊಗೆಬೆಟ್ಟು ಪದ್ಯ ಸಾಹಿತ್ಯದ ಕ್ಷೀರ ಸಮುದ್ರ ಪ್ರಸಂಗ ಬಿಡುಗಡೆ, ಪ್ರಥಮ ಪ್ರದರ್ಶನ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!