spot_img
Tuesday, March 24, 2026
spot_img

ಬಹುಮುಖ ಪ್ರತಿಭಾನ್ವಿತೆ ಸುವಿಧಾ ಎಸ್.ಮೊಗವೀರ

ಅಬಾಕಾಸ್ ಗ್ಯಾಜ್ಯುವೇಶನ್ ನಲ್ಲಿ ಪ್ರಮಾಣ ಪತ್ರ ಪಡೆಯುತ್ತಿರುವುದು.
ಅಬಾಕಾಸ್ ಗ್ಯಾಜ್ಯುವೇಶನ್ ನಲ್ಲಿ ಪ್ರಮಾಣ ಪತ್ರ ಪಡೆಯುತ್ತಿರುವುದು.

 

ಕುಂದಾಪುರ, ಸೆ.4: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ರಲ್ಲಿ 619 ಅಂಕ ಗಳಿಸಿರುವ ಕುಂದಾಪುರ ಶ್ರೀ ವೆಂಕಟರಮಣ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಸುವಿಧಾ ಎಸ್ ಮೊಗವೀರ ಅರಾಟೆ ಬಹುಮುಖ ಪ್ರತಿಭಾನ್ವಿತೆ. ಕಲಿಕೆಯಲ್ಲಿ ಮಾತ್ರ ಗುರುತಿಸಿಕೊಳ್ಳದೇ ಚಿತ್ರಕಲೆ, ಅಬಾಕಾಸ್, ಗಿಟಾರ್ ನುಡಿಸುವಿಕೆಯಲ್ಲಿಯೂ ಸಾಧನೆ ಮಾಡುತ್ತಿರುವ ಸುವಿಧಾ ಪಲ್ಲವಿಸುತ್ತಿರುವ ನವ ಪ್ರತಿಭೆ.

ಕುಂದಾಪುರ ತಾಲೂಕು ಅರಾಟೆ ಜಂಬೆಕಲ್ಲು ನಿವಾಸಿ ಸುಧಾಕರ ಮೊಗವೀರ ಮತ್ತು ವಿಶಾಲಾಕ್ಷಿ ಎಸ್ ಮೊಗವೀರ ಅವರ ಪುತ್ರಿಯಾಗಿರುವ ಸುವಿಧಾ, ಪಾಠ ಹಾಗೂ ಪಾಠೇತರ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲವಾಗಿರುವ ಹುಡುಗಿ. ಚಿತ್ರಕಲೆಯ ಬಗ್ಗೆ ಚಿಕ್ಕಂದಿನಿಂದಲೇ ಅಭಿರುಚಿ ಬೆಳೆಸಿಕೊಂಡ ಸುವಿಧಾರ ಸುಪ್ತ ಪ್ರತಿಭೆಗೆ ಶಿಕ್ಷಕಿ ವೀಣಾ ಹೆಚ್ಚಿನ ಉತ್ತೇಜನ ನೀಡಿದರು. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿತ್ರಕಲಾ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಿರುವ ಸುವಿಧಾ, ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ರಾಷ್ಟ್ರ ಮಟ್ಟಕ್ಕೂ ಆಯ್ಕೆಯಾಗಿದ್ದಾರೆ. ಪರಿಸರ, ಪ್ರಕೃತಿ, ಹಾಗೂ ಕಲ್ಪನಾತೀತವಾದ ವಿಷಯಗಳ ಕುರಿತು ವರ್ಣಚಿತ್ರಗಳನ್ನು ಪರಿಣಾಮಕಾರಿ ಹಾಗೂ ಪ್ರಭಾವಶಾಲಿಯಾಗಿ ಚಿತ್ರಿಸುವ ಈ ಉದಯೋನ್ಮುಖ ಪ್ರತಿಭೆ ಮುಂದೆ ಚಿತ್ರಕಲೆಯಲ್ಲಿ ಬೆಳಗುವ ಭರವಸೆ ಮೂಡಿಸಿದ್ದಾರೆ.

ಅಬಾಕಾಸ್ ತರಬೇತಿ ಪಡೆದಿರುವ ಇವರು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ, ದ್ವಿತೀಯ ಬಹುಮಾನ ಪಡೆದಿದ್ದಾರೆ. 8ನೇ ತರಗತಿಯಲ್ಲಿಯೇ ಅಬಾಕಾಸ್ ಮುಗಿಸಿರುವ ಸುವಿಧಾ, ಕ್ವೀಜ್‌ನಲ್ಲಿಯೂ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಸಂಗೀತ ವಾದನಗಳ ಬಗ್ಗೆ ಆಸಕ್ತಿ ಹೊಂದಿರುವ ಸುವಿಧಾ ಗಿಟಾರ್ ನುಡಿಸಬಲ್ಲರು. ಗಿಟಾರ್‌ನಲ್ಲಿ ಇನ್ನಷ್ಟು ತರಬೇತಿ ಪಡೆಯುವ ಇಚ್ಛೆಯನ್ನು ಹೊಂದಿದ್ದಾರೆ.

ಈಕೆಯ ಪ್ರತಿಭೆಯನ್ನು ಗುರುತಿಸಿ ಮೊಗವೀರ ರಕ್ಷಣಾ ವೇದಿಕೆ ಕಂಡ್ಲೂರು ಶ್ರೀರಾಮ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಿದೆ. ಪ್ರಸ್ತುತ ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ಸುವಿಧಾ,, ತನ್ನ ಆಸಕ್ತಿಗೆ ಪೋಷಕರು ಹಾಗೂ ಶಿಕ್ಷಕರ ವೃಂದದವರ ಸಹಕಾರವೇ ಕಾರಣ. ಮನೆಯಲ್ಲಿ ಮತ್ತು ಶಾಲೆಯಲ್ಲಿ ಒಳ್ಳೆಯ ಪ್ರೋತ್ಸಾಹ ಸಿಕ್ಕಿದೆ ಎನ್ನುತ್ತಾರೆ.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!