spot_img
Sunday, February 15, 2026
spot_img

ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರ ಸಂಘ: ಮಂಜಯ್ಯ ಶೆಟ್ಟಿ ನೇತೃತ್ವದ ತಂಡ ಅವಿರೋಧ ಆಯ್ಕೆ

ಕುಂದಾಪುರ: ಕುಂದಾಪುರ ತಾಲೂಕು ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರ ಸಂಘ ನಿ., ಆಲೂರು ಇದರ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ನಿರ್ದೇಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಹಾಲಿ ಅಧ್ಯಕ್ಷ ಹರ್ಕೂರು ಮಂಜಯ್ಯ ಶೆಟ್ಟಿ ನೇತೃತ್ವದ ತಂಡ ಅವಿರೋಧವಾಗಿ ಆಯ್ಕೆಯಾಗಿದೆ. ಸತತವಾಗಿ ಮೂರನೇ ಬಾರಿಗೆ ಇಲ್ಲಿ ಅವಿರೋಧ ಆಯ್ಕೆ ನಡೆದಿದೆ.

ಸಾಮಾನ್ಯ ಸ್ಥಾನದಿಂದ ರಘುರಾಮ ದೇವಾಡಿಗ ಆಲೂರು, ಸತೀಶ ಶೆಟ್ಟಿ ಆಲೂರು, ಸೂಲ್ಯ ಪೂಜಾರಿ ನಾರ್ಕಳಿ ಹರ್ಕೂರು, ಗೋಪಾಲ ಆಲಿಯಾಸ್ ಗೋವಿಂದ ಹಳ್ಳದನೀರು, ಹೊಯ್ಯಾಣ, ಸಂತೋಷ ಕುಮಾರ ಶೆಟ್ಟಿ ಆಲೂರು, ಚಂದ್ರಶೇಖರ ಶೆಟ್ಟಿ ಎಮ್, ಹಕ್ಲಮನೆ, ಗೋಳಿಕೆರೆ ಆಲೂರು, ಅಮರನಾಥ ಶೆಟ್ಟಿ ನಾರ್ಕಳಿ ಹಳ್ಳಿಜಡ್ಡು ಹರ್ಕೂರು ಆಯ್ಕೆಯಾದರು.

ಮಹಿಳಾ ಮೀಸಲು ಸ್ಥಾನದಿಂದ ಅಕ್ಕಯ್ಯ ಯಾನೆ ಆಶಾ ಸಸಿಹಿತ್ಲು, ಆಲೂರು. ಲಲಿತಾ ಕುಲಾಲ, ಪೇಟೆ ಆಲೂರು, ಹಿಂದುಳಿದ ವರ್ಗ ಪ್ರವರ್ಗ-ಎ ಮೀಸಲು ಸ್ಥಾನದಿಂದ ರಾಜೇಶ ಎನ್.ಡಿ ಆಲೂರು, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನದಿಂದ ಮಂಜಯ್ಯ ಶೆಟ್ಟಿ ಹೊಸಿಮನೆ ಹರ್ಕೂರು, ಪ.ಜಾತಿ ಮೀಸಲು ಸ್ಥಾನದಿಂದ ಸುರೇಶ ಆಲೂರು, ಪ.ಪಂಗಡ ಮೀಸಲು ಸ್ಥಾನದಿಂದ ಸುರೇಂದ್ರ ಮಧುಕೊಡ್ಲು, ನಾರ್ಕಳಿ ಆಯ್ಕೆಗೊಂಡರು.

ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್ ಸಿ.ಎಮ್ ಆಯ್ಕೆ ಪ್ರಕ್ರಿಯೆ ನಿರ್ವಹಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವರಾಮ ಪೂಜಾರಿ ಮತ್ತು ವ್ಯವಸ್ಥಾಪಕರಾದ ಸಂಜೀವ ಪೂಜಾರಿ ಆಲೂರು ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!