spot_img
Tuesday, March 31, 2026
spot_img

ಜ.14: ಹಾಡಿಗರಡಿ ದೈವಸ್ಥಾನ: ವಾರ್ಷಿಕ ಹಾಲುಹಬ್ಬ-ಗೆಂಡಸೇವೆ

ಕುಂದಾಪುರ: ನಾಡದ ಶ್ರೀ ಹಾಡಿಗರಡಿ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ-ಗೆಂಡಸೇವೆ, ಮಹಾ ಅನ್ನಸಂತರ್ಪಣೆ ಜನವರಿ 14 ಮತ್ತು 15ರಂದು ನಡೆಯಲಿದೆ.
ಜ.14 ಮಂಗಳವಾರ ಬೆಳಿಗ್ಗೆ 12ಕ್ಕೆ ಮಂಗಳಾರತಿ, ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಕೊಡಗುಂಜಿ ಕಳುವಿನ ಬಾಗಿಲುವಿನಲ್ಲಿ ಮೂಲಸ್ಥಾನ ಸ್ವಾಮಿ ಪೂಜೆ, 5.30ಕ್ಕೆ ನಾಗ ಸನ್ನಿಧಿಯಲ್ಲಿ ಪೂಜೆ, ನಾಗದರ್ಶನ, 6.30ಕ್ಕೆ ಹಣ್ಣುಕಾಯಿ ಸಮರ್ಪಣೆ, 7 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, 7.30ಕ್ಕೆ ದೈವದರ್ಶನ, ಗೆಂಡಸೇವೆ, 8 ಗಂಟೆಗೆ ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ, 9.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ:
ರಾತ್ರಿ 9.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಹಾಡಿಗರಡಿ ದೈವಸ್ಥಾನ ಸಮಿತಿಯ ಅಧ್ಯಕ್ಷರಾದ ನಾಗೇಶ್ ಪಿ.ಕಾಂಚನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬೈ ಹೈಕೋರ್ಟ್ ವಕೀಲರಾದ ಚಂದ್ರ ಕೆ.ನಾಯ್ಕ್ ಬೆದ್ರಾಡಿಮನೆ ನಾಡ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಚಂದ್ರಕಾಂತ ರತ್ನ ಫೌಂಡೇಶನ್ ಪ್ರವರ್ತಕರಾದ ಬಸವರಾಜ್ ಕುದ್ರಿಸಾಲು ನಾಡ ಪ್ರತಿಭಾಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಿಸಲಿದ್ದಾರೆ. ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗಿರೀಶ್ ಭಟ್ ಶುಭಶಂಸನೆಗೈಯಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮುಂಬೈಯ ನಿವೃತ್ತ ಬಿಎಎಸ್‍ಎಫ್ ಮೆನೇಜಿಂಗ್ ಡೈರೆಕ್ಟರ್ ಪ್ರದೀಪ್ ಚಂದನ್, ಕುಂದಬಾರಂದಡಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ, ನಾಡ ಕಡಿಕೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ನಾರಾಯಣ ಶೆಟಿ ಸಂಸಾಡಿ, ಪಡುಕೋಣೆ ಶ್ರೀರಾಮ ದೇವಸ್ಥಾನದ ಅಧ್ಯಕ್ಷರಾದ ರಾಮ ಪೂಜಾರಿ, ಬೆಂಗಳೂರು ಉದ್ಯಮಿಗಳು, ಅನ್ನಸಂತರ್ಪಣೆ ಸೇವಾಕರ್ತರಾದ ಮಹೇಶ್ ಎನ್., ಕಾಂಚನ್ ನಾವುಂದ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು, ವಿಯೆಟ್ನಾ ಇಂಡಿಯಾ ಅಂತರಾಷ್ಟ್ರೀಯ ಐಕಾನಿಕ್ ಆವಾರ್ಡ್ ಪುರಸ್ಕøತರಾದ ಗಣೇಶ ಮೊಗವೀರ, ನಾಡ ಗುಡ್ಡೆಯಂಗಡಿ ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷರಾದ ಉಪೇಂದ್ರ ಪ್ರಭು ಅವರನ್ನು ಸನ್ಮಾನಿಸಲಾಗುವುದು.
ಚಂದ್ರಕಾಂತ ರತ್ನ ಫೌಂಡೇಶನ್ (ಸಿ.ಆರ್‍ಎಫ್) ನಾಡ ಇವರ ಸಹಯೋಗದೊಂದಿಗೆ ವಿದ್ಯಾರ್ಥಿವೇತನ ವಿತರಣೆಗೆ ಸಹಭಾಗಿತ್ವ ನೀಡಲಿದ್ದಾರೆ. ಆ ದಿನ ಸಂಜೆ ಹಾಡಿಗರಡಿ ಶ್ರೀ ನಂದಿಕೇಶ್ವರ ಮಕ್ಕಳ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಪ್ರಾಂಜಲಿ ಎಸ್ ಪಡುಕೋಣೆ ಮತ್ತು ಪ್ರಾಂಜಲ್ ಸದಾನಂದ ಬಳ್ಕೂರು ಇವರಿಂದ ಭರತನಾಟ್ಯ, ಸತೀಶ್ ಎಂ.ನಾಯಕ್ ನಾಡ ಮತ್ತು ತಂಡದವರಿಂದ ಗಿಂಡಿ ನರ್ತನ ನಡೆಯಲಿದೆ.
ಸಭಾ ಕಾರ್ಯಕ್ರಮದ ನಂತರ ಬ್ಲೂಸ್ಕೈ ಇವೆಂಟ್ಸ್ ಕುಂದಾಪುರ ಇವರ ಸಾರಥ್ಯದಲ್ಲಿ ಸಾಂಸ್ಕøತಿಕ ಸಂಭ್ರಮ ನಡೆಯಲಿದೆ.
ಜನವರಿ 15ರಂದು ಬೆಳಿಗ್ಗೆ 10 ಗಂಟೆಗೆ ಹಣ್ಣುಕಾಯಿ ಸಮರ್ಪಣೆ, ಮಂಗಳಾರತಿ, ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಪ್ರಸಾದ ವಿತರಣೆ, ರಾತ್ರಿ 7.30ಕ್ಕೆ ಮಹಾಪೂಜೆ, ಮಂಗಳಾರತಿ, ರಾತ್ರಿ 8 ಗಂಟೆಗೆ ಸರ್ವ ದೈವಗಳ ದರ್ಶನ ಸೇವೆ, ಹೂ ಸಮರ್ಪಣೆ, ಬಲಿಪೂಜೆ, 8.30ಕ್ಕೆ ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!