spot_img
Sunday, May 17, 2026
spot_img

ವಾರಾಹಿ ಕಾಲುವೆಗೆ ತಕ್ಷಣ ನೀರು ಹಾಯಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲು ನೀರಾವರಿ ಸಚಿವರಿಗೆ ಹರಿಪ್ರಸಾದ್ ಶೆಟ್ಟಿ ಮನವಿ

ಕುಂದಾಪುರ: ಉಡುಪಿ ಜಿಲ್ಲೆಯ ವಾರಾಹಿ ಕಾಲುವೆಯಲ್ಲಿ ಇಲ್ಲಿಯ ತನಕ ನೀರು ಹಾಯಿಸಿಲ್ಲ. ನೀರಿಲ್ಲದೆ ರೈತರು ಸಂಕಷ್ಟ ಪಡುತ್ತಿದ್ದು ತಕ್ಷಣ ನೀರು ಹಾಯಿಸಲು ವಾರಾಹಿ ನೀರಾವರಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಉಪಮುಖ್ಯಮಂತ್ರಿಗಳು, ಭಾರೀ ಮತ್ತು ಮಧ್ಯಮ ನೀರಾವರಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮನವಿ ಮಾಡಿದ್ದಾರೆ.

2024 ನೇ ಸಾಲಿನಲ್ಲಿ ವಾರಾಹಿ ಯೋಜನೆ ಉದ್ಘಾಟನೆಗೊಂಡು ಕಾಲುವೆಗೆ ನೀರು ಹಾಯಿಸಲಾಗಿತ್ತು. ಪ್ರಾರಂಭದ 2 ವರ್ಷದಲ್ಲಿ ಖಾಸಗಿಯವರ ಹಿತಾಸಕ್ತಿಗೆ ಕಾಲುವೆಗೆ ನೀರು ಹಾಯಿಸಲು ಅನಗತ್ಯ ವಿಳಂಬ ಮಾಡುತ್ತಿದ್ದರು. ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನಾನೂಕೂಲವಾಗುತಿತ್ತು.

2016 ನೇ ಸಾಲಿನಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಮನವಿ ಮೇರೆಗೆ ಅಂದಿನ ನೀರಾವರಿ ಸಚಿವರು ಈ ವಿಚಾರದ ಕುರಿತು ಅಧಿಕಾರಿಗಳ, ಜನಪ್ರತಿನಿಧಿಗಳ ಮತ್ತು ರೈತರ ಸಭೆ ಕರೆದು ಪ್ರತಿ ವರ್ಷ ಕಾಲುವೆಗೆ ನೀರು ಹಾಯಿಸಲು ವಿಳಂಬ ಮಾಡುವಂತಿಲ್ಲ. ಯಾವುದೇ ಕಾರಣ ನೀಡದೇ ಪ್ರತಿವರ್ಷ ಡಿಸೆಂಬರ್ 1 ಕ್ಕೆ ನೀರು ಹಾಯಿಸಬೇಕು ಎಂದು ಆದೇಶಿಸಿದ್ದರು ಮತ್ತು ಉಡುಪಿ ಜಿಲ್ಲಾಧಿಕಾರಿಯವರು ಪ್ರತಿವರ್ಷ ಈ ಬಗ್ಗೆ ಗಮನಹರಿಸಬೇಕೆಂದು ಇಲಾಖಾ ಆದೇಶ ಮಾಡಿದ್ದರು. ಅಂದಿನಿಂದ ಪ್ರತಿವರ್ಷ ಡಿಸೆಂಬರ್ ಮೊದಲ ವಾರದಲ್ಲಿ ಕಾಲುವೆಗೆ ನೀರು ಹಾಯಿಸಲಾಗುತಿತ್ತು.

ಈ ವರ್ಷ ಈ ತನಕ ಕಾಲುವೆಗೆ ನೀರು ಹಾಯಿಸಿಲ್ಲ ಯಾವಾಗ ನೀರು ಹಾಯಿಸಲಾಗುವುದೆಂದು ಪ್ರಕಟಣೆ ಮಾಡಿಲ್ಲ.ಈಗಾಗಲೇ ಹಿಂಗಾರು ಬಿತ್ತನೆ ಮಾಡಿರುವ ರೈತರು ಕಂಗಾಲಾಗಿದ್ದಾರೆ.ಈ ನೀರನ್ನೇ ನಂಬಿ ಸಾವಿರಾರು ಎಕ್ರೆ ಅಡಿಕೆ ತೋಟ ಮಾಡಿದ್ದು ತೋಟಗಳಿಗೆ ನೀರಿನ ಕೊರತೆಯಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಕಾಲುವೆಗೆ ಹಾನಿಯಗುವುದು ಸಾಮಾನ್ಯ ವಿಚಾರ. ವಾರಾಹಿ ಇಲಾಖೆ ನೆಡದದ್ದೇ ದಾರಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷ ರೈತರು ಕಾಡಿಬೇಡಿ ನೀರು ಪಡೆಯುವ ಪರಿಸ್ಥಿತಿ ಎದುರಾಗಿರುವುದು ನೋವಿನ ಸಂಗತಿ.

ಆದ್ದರಿಂದ ತಾವು ಕೂಡಲೇ ಮದ್ಯಪ್ರವೇಶಿಸಿ ತಕ್ಷಣ ವಾರಾಹಿ ಕಾಲುವೆಗೆ ನೀರು ಹಾಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!