spot_img
Sunday, February 15, 2026
spot_img

ಗುಡ್ಡಮ್ಮಾಡಿಯಲ್ಲಿ ಸ್ಕಂದ ಭವನ ಉದ್ಘಾಟನೆ | ಯಥಾರ್ಥ ಭಕ್ತಿಯಿಂದ ಪರಮಾನುಗ್ರಹ ಸಿದ್ಧಿ-ವಿದ್ಯಾಸಾಗರ ಶ್ರೀ

ಕುಂದಾಪುರ: ಸುಬ್ರಹ್ಮಣ್ಯ ಸಂಕರ್ಷಣ ದೇವರು. ಅನ್ನವೆಂದರೆ ರಕ್ಷಣೆಯೂ ಹೌದು, ಸಂಹಾರವೂ ಹೌದು. ಸಂಕರ್ಷಣನನ್ನು ಅನ್ನವೆಂದು ಭಾವಿಸಲಾಗುತ್ತದೆ. ಸಂಕರ್ಷಣರೂಪಿಯಾದ ಭಗವಂತನ ಆರಾಧನೆ ಯಥಾರ್ಥವಾದರೆ ಪರಮಾನುಗ್ರಹ ಸಿದ್ಧಿಯಾಗುತ್ತದೆ ಎಂದು ಉಡುಪಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರು ಹೇಳಿದರು.

ಅವರು ಶ್ರೀ ಕ್ಷೇತ್ರ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಬಳಿ ನಿರ್ಮಿಸಲ್ಪಟ್ಟ ನೂತನ ಸಭಾಗೃಹ ಮತ್ತು ಭೋಜನಶಾಲೆ ಕಟ್ಟಡ ಸ್ಕಂದ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ದೇವಸೇನಾನಿ ಸುಬ್ರಹ್ಮಣ್ಯ ದೇವತೆಗಳಿಗೆ ಇಷ್ಟಾರ್ಥ ಅನುಗ್ರಹಿಸಿದ ಉಲ್ಲೇಖವಿದೆ. ಭಕ್ತಾನುಗ್ರಹರೂಪನಾದ ಸುಬ್ರಹ್ಮಣ್ಯ ದೇವರು ಆರಾಧನೆಯಿಂದ ಸಕಲ ಕಷ್ಟನಷ್ಟಗಳು ದೂರಾಗುತ್ತದೆ. ಸಂಕಷ್ಟಗಳು ಸಂಕರ್ಷಣನಿಂದ ಇಲ್ಲವಾಗುತ್ತದೆ ಎಂದು ಹೇಳಿದ ಅವರು ಗ್ರಾಮಾಂತರ ಪ್ರದೇಶದ ಈ ದೇವಸ್ಥಾನದಲ್ಲಿ ಸುಸಜ್ಜಿತವಾದ ಸ್ಕಂದ ಭವನ ನಿರ್ಮಾಣಗೊಂಡಿರುವುದು ಭಕ್ತರಿಗೆ ಅನುಕೂಲವಾಗಲಿದೆ ಎಂದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸ್ಕಂದ ಭವನ ಉದ್ಘಾಟಿಸಿ, ದೇವಸ್ಥಾನಗಳಲ್ಲಿ ಮೂಲಭೂತ ಸೌಕರ್ಯಗಳು ಉತ್ತಮವಾಗಿದ್ದಾಗ ಭಕ್ತರಿಗೆ ಭಾವುಕತೆ ಉಂಟು ಮಾಡುತ್ತದೆ. ಜನರನ್ನು ಸಂಘಟಿಸುವ, ಒಗ್ಗೂಡಿಸುವ ಕೆಲಸ ದೇವಸ್ಥಾನಗಳಿಂದ ಆಗುತ್ತದೆ. ಸಮಾಜದ ಏಳ್ಗೆಯಲ್ಲಿ ದೇವಸ್ಥಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ದೇವಸ್ಥಾನಗಳಲ್ಲಿ ನಡೆಯುವ ಪರಂಪರೆಯ ಪೂಜಾ ವಿಧಾನಗಳು ಸಂಸ್ಕೃತಿ, ಸಂಸ್ಕಾರವನ್ನು ಗಟ್ಟಿಗೊಳಿಸುತ್ತವೆ. ಗುಡ್ಡಮ್ಮಾಡಿಯ ಈ ದೇವಸ್ಥಾನವೂ ಐತಿಹಾಸಿಕ ಮಹತ್ವದ ಹಿನ್ನೆಲೆಯುಳ್ಳ ದೇವಸ್ಥಾನ. ಅರುಣ್ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಇದೀಗ ಸುಸಜ್ಜತವಾದ ಸಭಾಭವನ ನಿರ್ಮಾಣವಾಗಿದ್ದು ಭಕ್ತರಿಗೆ ಇನ್ನಷ್ಟು ಅನುಕೂಲವಾಗಿದೆ ಎಂದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೆ.ಬಾಬು ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಿಲ್ಪಿಗಳಾದ ನಾರಾಯಣ ರಾವ್ ಶಿವಮೊಗ್ಗ, ರವೀಂದ್ರ ಮೆಂಡನ್, ಭಾಸ್ಕರ ಶೆಟ್ಟಿ ಗುಡ್ಡಮ್ಮಾಡಿ, ಡಾ.ಸುರೇಶ ಶ್ಯಾನುಭಾಗ್, ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಮರಿ, ಕಲಾವಿದ ಕ್ಷೀರನ್ ಶೆಟ್ಟಿಗಾರ್ ಬಂಟ್ವಾಡಿ ಅವರನ್ನು ಸನ್ಮಾನಿಸಲಾಯಿತು.

ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಬಿ.ಅರುಣ ಕುಮಾರ್ ಶೆಟ್ಟಿ ದಂಪತಿಗಳನ್ನು ಸ್ವಾಮೀಜಿಗಳು ಆಶೀರ್ವದಿಸಿ, ಸನ್ಮಾನಿಸಿದರು.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಬಿ.ಅರುಣ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ದೇವಸ್ಥಾನದ ಭಕ್ತರು, ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿ ಹೊಂದುತ್ತಾ ಬಂದಿದೆ. 1992ರಲ್ಲಿ ದೇವಸ್ಥಾನದ ಗರ್ಭಗುಡಿಯನ್ನು ಶಿಲಾಮಯವಾಗಿ ಜೀರ್ಣೋದ್ಧಾರ ಮಾಡಲಾಯಿತು. ಭಕ್ತರ ಅನುಕೂಲಕ್ಕಾಗಿ ಸುಮಾರು ರೂ.2.5ಕೋಟಿ ವೆಚ್ಚದಲ್ಲಿ ಸ್ಕಂದ ಭವನವನ್ನು ನಿರ್ಮಾಣ ಮಾಡಲಾಗಿದೆ. ೪೦೦ ಮಂದಿಗೆ ಏಕಕಾಲದಲ್ಲಿ ಭೋಜನ ಸ್ವೀಕರಿಸಲು ಇಲ್ಲಿ ಸಾಧ್ಯವಾಗುತ್ತದೆ ಎಂದರು.

ನಾಗೇಶ ಶಾನುಭಾಗ್ ಮತ್ತು ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!