spot_img
Wednesday, April 1, 2026
spot_img

ಸಂವಿಧಾನ ಸಂಘದ ನಿಯಮಗಳಿರುವ ಪುಸ್ತಕವಲ್ಲ ! : ದೇಶದ ಗಮನ ಸೆಳೆದ ಪ್ರಿಯಾಂಕಾ ಗಾಂಧಿ ಭಾಷಣ

ಜನಪ್ರತಿನಿಧಿ (ನವ ದೆಹಲಿ) : ಸಂಭಲ್‌ ಹಾಗೂ ಮಣಿಪುರ ಹಿಂಸಾಚಾರ ವಿಷಯದಲ್ಲಿ ಮೌನ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆಯಲ್ಲಿ ಇಂದು(ಶುಕ್ರವಾರ) ಸಂವಿಧಾನದ ವಿಷಯದ ಚರ್ಚೆಯಲ್ಲಿ ಪಾಲ್ಪಡೆದು ಮಾತನಾಡಿದ ಸಂಸದೆ ಪ್ರಿಯಾಂಕ ಗಾಂಧಿ, ದೇಶದ ಸಂವಿಧಾನ ಸಂಘದ ನಿಯಮಗಳಿರುವ ಪುಸ್ತಕವಲ್ಲ ಎನ್ನುವುದನ್ನು ನರೇಂದ್ರ ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ವಯನಾಡು ಲೋಕಸಭಾ  ಉಪ ಚುನಾವಣೆಯಲ್ಲಿ ಗೆಲುವು ದಾಖಲಿಸಿದ ನಂತರ ಸಂಸತ್ತಿಗೆ ಪ್ರವೇಶಿರುವ ಪ್ರಿಯಾಂಕಾ ಇದೇ ಮೊದಲ ಬಾರಿಗೆ ತಮ್ಮ ಭಾಷಣ ಮಾಡಿದರು. ತಮ್ಮ ಮೊದಲ ಭಾಷಣದಲ್ಲೇ ನರೇಂದ್ರ ಮೋದಿ ವಿರುದ್ಧ ಹಾಗೂ ಆರ್‌ಎಸ್‌ಎಸ್‌ ಉಲ್ಲೇಖಿಸಿ ಟೀಕಿಸಿರುವ ಅವರು ದೇಶದ ಗಮನ ಸೆಳೆದರು.

ದೇಶದ ಸಂವಿಧಾನ ಏಕತೆ, ನ್ಯಾಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣಾ ಕವಚಸವಾಗಿದೆ ಎಂದು ಅವರು ತಮ್ಮ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲ್ಯಾಟರಲ್‌ ಎಂಟ್ರಿ, ಖಾಸಗೀಕರಣದ ಮೂಲಕ ಮೀಸಲಾತಿ ನೀತಿಯನ್ನು ದುರ್ಬಲಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಒಂದು ವೇಳೆ ಈಗಿನ ಹಾಗೇ ಲೋಕಸಭಾ ಚುನಾವಣಾ ಫಲಿತಾಂಶ ಬರದಿದ್ದರೇ ಸರ್ಕಾರ ಸಂವಿಧಾನವನ್ನೇ ಬದಲಿಸುವ ಕೆಲಸಕ್ಕೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

I have understood that our Constitution is a protective shield that keeps the countrymen safe : Priyanka Gandhi

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!