spot_img
Thursday, April 2, 2026
spot_img

ಬಂಡವಾಳದಾರರ ಪರ ಸರ್ಕಾರದ ಒಲುವು ಬಡಜನರಿಗೆ ಸಂಕಷ್ಟ-ಡಾ. ಪ್ರಕಾಶ್ ಕೆ

ನಾಡದಲ್ಲಿ ಸಿಪಿ‌ಐ(ಎಂ) 8ನೇ ಜಿಲ್ಲಾ ಸಮ್ಮೇಳನ, ಬೃಹತ್ ಮೆರವಣಿಗೆ, ಬಹಿರಂಗ ಸಭೆ

ನಾಡ: ಜನಸಾಮಾನ್ಯರು, ಕಾರ್ಮಿಕರ ಪರ ಕಾಳಜಿ ಹೊಂದದ ಕೇಂದ್ರ, ರಾಜ್ಯ ಸರ್ಕಾರಗಳ ನಿಲುವು, ದುಡಿದು ಬದುಕುವ ಜನರಿಗೆ ಸಂಕಷ್ಟವನ್ನುಂಟು ಮಾಡಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಂಡವಾಳದಾರರ ಪರವಾಗಿ ನಿಂತಿದ್ದು ಬಂಡವಾಳಶಾಹಿಗಳ ಕೈಯಲ್ಲಿ ದೇಶವನ್ನು ಕೊಟ್ಟು ಉದ್ಯೋಗವೆಂದರೆ ಲೂಟಿ ಮಾಡುವುದು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಭಾಷಣಕ್ಕಷ್ಟೇ ಸೀಮಿತವಾಗಿ ಉಳಿದಿದೆ. ಉನ್ನತ ಶಿಕ್ಷಣ ಪಡೆದರೂ ಸರಿಯಾದ ಕೆಲಸ ಸಿಗುತ್ತಿಲ್ಲ. ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಕಾರ್ಮಿಕರ ಮಾರುಕಟ್ಟೆ ನಿರ್ಮಾಣವಾಗಿದೆ. ಕಾರ್ಮಿಕರ ಬದುಕು ಬೀದಿದೆ ಬಂದಿದೆ ಎಂದು ಸಿಪಿ‌ಐ(ಎಂ) ರಾಜ್ಯ ಕಾರ್ಯದರ್ಶಿ ಡಾ.ಪ್ರಕಾಶ್ ಕೆ ಹೇಳಿದರು.

ಅವರು ನಾಡಾದಲ್ಲಿ ಎರಡು ದಿನಗಳ ಕಾಲ ನೆಡೆದ ಉಡುಪಿ ಜಿಲ್ಲಾ ಮಾರ್ಕ್ಸ್‌ವಾದಿ ಕಮ್ಯೂನಿಷ್ಟ್ ಪಕ್ಷದ 8ನೇ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದರು.

ಈಗ ರಾಜ್ಯದಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಎನ್ನುವ ಸಂತೋಷದಲ್ಲಿರಬಹುದು. ಆದರೆ ತಲೆ ಮೇಲೆ ತೂಗುಗತ್ತಿ ನೇತಾಡುತ್ತಿರುವುದು ಸ್ಪಷ್ಟ. ಮುಂದೆ ಉಚಿತ ವಿದ್ಯುತ್ ರದ್ದಾದರೆ ವಿದ್ಯುತ್ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಕೇಂದ್ರ ಸರ್ಕಾರ ಸೌರ ವಿದ್ಯುತ್ ನೀಡುವ ವಿಚಾರದಲ್ಲಿ ಕೂಡಾ ಅದಾನಿ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಇಲ್ಲೂ ಕೂಡಾ ಅವ್ಯವಹಾರವಾಗಿದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಬಿಜೆಪಿಯ ಆಡಳಿತದಲ್ಲಿಯೇ ಭೃಷ್ಟಾಚಾರ ಜಾಸ್ತಿಯಾಗುತ್ತಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಬೇಜಬ್ದಾರಿಯಿಂದ ಬಿಪಿ‌ಎಲ್ ಕಾರ್ಡುಗಳು ರದ್ದಾಗುತ್ತಿದೆ. ಮಾಸಿಕ 10 ಸಾವಿರ ಆದಾಯದಲ್ಲಿ ಬದುಕಲು ಸಾಧ್ಯವೇ? ಇಲ್ಲೂ ಕೂಡಾ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದೆ. ಆ ಕಾರಣದಿಂದ ಬಿಪಿ‌ಎಲ್ ಕಾರ್ಡುಗಳು ರದ್ದಾಗುತ್ತಿದೆ. ರಾಜ್ಯದಲ್ಲಿ 15ಲಕ್ಷಕ್ಕೂ ಅಧಿಕ ಬಿಪಿ‌ಎಲ್ ಕಾರ್ಡು ರದ್ದು ಮಾಡಲು ಸಿದ್ಧವಾಗಿದೆ. ಕೇಂದ್ರ ಹಾಗೂ ರಾಜ್ಯ ಎರಡು ಸರ್ಕಾರಗಳು ಭಿನ್ನವಾಗಿಲ್ಲ. ಈ ಹಿಂದೆ ಇದ್ದ ರೀತಿ ಪಡಿತರ ಚೀಟಿ ನೀಡಿ, ಎಪಿ‌ಎಲ್, ಬಿಪಿ‌ಎಲ್ ಎಂದು ಬಡವರಿಗೆ ಅನ್ಯಾಯ ಮಾಡುವುದನ್ನು ನಿಲ್ಲಿಸಿ ಎಂದು ಸರ್ಕಾರಗಳಿಗೆ ಎಚ್ಚರಿಸಿದರು.

ಅಕ್ರಮ ಸಕ್ರಮ ಸಮಿತಿ ಸಭೆ ಕ್ರಮಬದ್ಧವಾಗಿ ಸೇರುತ್ತಿಲ್ಲ. ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರು ಇದ್ದಾರೆ. ಸಕ್ರಮ ಸಕ್ರಮ ಸಭೆ ನಡೆಸಿ ಭೂ ಮಂಜೂರಾತಿ ಮಾಡುವ ಕೆಲಸ ಆಗುತ್ತಿಲ್ಲ. ಕೇಂದ್ರ ಸರ್ಕಾರವೇ ಮಾಡಿರುವ ಅರಣ್ಯ ಕಾಯ್ದೆಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರದ ಮೇಲೆ ಪ್ರತಿಭಟನೆ ಮಾಡುತ್ತಾರೆ. ಅರಣ್ಯ ಕಾಯ್ದೆಗಳನ್ನು ಮಾಡಿರುವುದು ಯಾರು? ಸಾಧ್ಯವಿದ್ದರೆ ಮೋದಿ ಸರ್ಕಾರದ ಮುಂದೆ ದೆಹಲಿಯಲ್ಲಿ ಧರಣಿ ನಡೆಸಿ ಎಂದು ಹೇಳಿದ ಅವರು, ಇವತ್ತು ಕಸ್ತೂರಿ ರಂಗನ್ ವಿಷಯಕ್ಕೆ ಸಾಕಷ್ಟು ಆತಂಕ ಎದುರಾಗಿದೆ. ಅರಣ್ಯದೊಂದಿಗೆ ನಂಟು ಹೊಂದಿರುವ ಆದಿವಾಸಿಗಳು, ಬಡವರನ್ನು ರಕ್ಷಣೆ ಮಾಡಬೇಕು, ಜನವಸತಿಗಳ ರಕ್ಷಣೆ ಮಾಡಬೇಕು. ಅರಣ್ಯದೊಳಗೆ ಎಸ್ಟೆಟ್‌ಗಳನ್ನು ನಡೆಸುತ್ತಿರುವ ದೊಡ್ಡ ದೊಡ್ಡ ಕಾರ್ಪೋರೇಟರ್‌ಗಳನ್ನು ಮೊದಲು ಒಕ್ಕಲೆಬ್ಬಿಸಿ ಎಂದರು.

ಕೇರಳದ ವಯನಾಡಿನಲ್ಲಿ ಆಗಿರುವ ದುರಂತಕ್ಕೂ ಪ್ರವಾಸೋಧ್ಯಮದ ಹೆಸರಲ್ಲಿ ಕಾರ್ಪೋರೇಟ್ ಕಂಪೆನಿಗಳು ಮಾಡಿರುವ ಅತಿಕ್ರಮಣವೇ ಕಾರಣ. ಮೊದಲು ಅರಣ್ಯ ನಾಶ ಮಾಡುವ, ಶ್ರೀಮಂತರನ್ನು ಹೊರಕಳಿಸಿ ಎಂದರು.

ಪಂಚಾಯತ್ ಗಳು ಇವತ್ತು ಯಾವುದೇ ಶಕ್ತಿ ಇಲ್ಲದ ಪೋಸ್ಟಾಪಿಸಿನಂತಾಗಿದೆ. ವೀಕೇಂದ್ರೀರಣದ ಮಹತ್ವಕಾಂಕ್ಷೆಯಲ್ಲಿ ಬದಲಾವಣೆಯಾದರೂ ಕೂಡಾ ಒಕ್ಕೂಟ ವ್ಯವಸ್ಥೆಯನ್ನು ಮರೆತು ಇವತ್ತು ಕೇಂದ್ರ ಸರ್ಕಾರ ಪಂಚಾಯತ್‌ಗಳಿಗೆ ನೇರ ಅನುದಾನ ನೀಡುವ ಪರಂಪರೆ ಬೆಳೆಸಿಕೊಂಡಿದೆ. ಕೇಂದ್ರ ಸರ್ಕಾರದ ಅನುದಾನ ರಾಜ್ಯಕ್ಕೆ ಬಂದು ಅಲ್ಲಿಂದ ಪಂಚಾಯತ್‌ಗಳಿಗೆ ತಲುಪಬೇಕು. ಆದರೆ ಇವತ್ತು ತದ್ವಿರುದ್ಧವಾಗಿದೆ. ಈ ಎಲ್ಲ ಜನವಿರೋಧಿ ನೀತಿಗಳನ್ನು ಅರ್ಥ ಮಾಡಿಕೊಳ್ಳಿ ಎಂದರು.

ಯಾಧವ್ ಶೆಟ್ಟಿ ಮಾತನಾಡಿ, ಇವತ್ತು ನಿರುದ್ಯೋಗ ಸಮಸ್ಯೆ ಹೆಮ್ಮರವಾಗಿ ಬೆಳೆದಿದೆ. ವಿದ್ಯಾವಂತ ಯುವಜನತೆಗೆ ಉದ್ಯೋಗ ಸಿಗುತ್ತದೆ ಎನ್ನುವ ಭರವಸೆ ಇಲ್ಲ. ಬಡವರು, ಕಾರ್ಮಿಕವರ್ಗದ ಕೂಗು ಸರಕಾರಗಳಿಗೆ ಕೇಳುತ್ತಿಲ್ಲ. ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ. ಬಂಡವಾಳಶಾಹಿಗಳಿಗೆ ಅವರಿಗೆ ತಕ್ಕಂತೆ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿದೆ. ದೇಶದಲ್ಲಿ ದ್ವೇಷವನ್ನು ಬಿತ್ತುವ ಕೆಲಸ ಕೇಂದ್ರ ಸರ್ಕಾರದಿಂದ ಆಗುತ್ತಿದೆ. ಯುವಜನರಿಗೆ ತಪ್ಪು ಸಂದೇಶ ನೀಡಿ ಅಪರಾಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ. ಈ ನೆಲದ ಸಂಸ್ಕೃತಿಯನ್ನು ಮರೆತು ಧ್ವನಿ ಎತ್ತಲು ಅವಕಾಶ ನೀಡದೆ ಆಡಳಿತ ನಡೆಸುತ್ತಿರುವುದನ್ನು ನಾವು ಕಾಣುತ್ತೇವೆ. ಕಾರ್ಮಿಕ ಶಕ್ತಿಗಳು ಇನ್ನೂ ಬಲಷ್ಠವಾಗಬೇಕು. ನಮ್ಮ ಹಕ್ಕುಗಳನ್ನು ಕೇಳಬೇಕು, ನಮ್ಮ ಐಕ್ಯತಾ ಶಕ್ತಿಯಿಂದ ಬೆಲೆಯೇರಿಕೆ, ನಿರುದ್ಯೋಗ ವಿರುದ್ಧ ಹೋರಾಟ ತೀವ್ರಗೊಳಿಸೋಣ ಎಂದರು.

ಸಿಪಿ‌ಐ‌ಎಂ ರಾಜ್ಯ ಮುಖಂಡರಾದ ಬಾಲಕೃಷ್ಣ ಶೆಟ್ಟಿ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ರಾಜೀವ ಪಡುಕೋಣೆ ಮಾತನಾಡಿ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆಗೆ ಸಿಹಿನೀರು ಕೊಡುವ ಯೋಜನೆ ಅನುಷ್ಟಾನಾಧಿಕಾರಿಗಳ ಬೇಜಬ್ದಾರಿಯಂದ ಕಳಪೆ ಕಾಮಗಾರಿಯಾಗಿದೆ. ಉಪ್ಪು ಮಿಶ್ರಿತ ನೀರು ಬರುತ್ತಿದೆ. ಕೊಣ್ಕೆ ಭಾಗದಲ್ಲಿ ಆಗುತ್ತಿರುವ ಸಮಸ್ಯೆಯನ್ನು ಕೂಡಲೇ ಸರಿಪಡಿಸದೇ ಇದ್ದರೆ ಸಿಪಿ‌ಎಂ ಉಗ್ರ ಹೋರಾಟ ನಡೆಸಲಿದೆ ಎಂದರು.

ಸಿ.ಪಿ.ಎಂ. ರಾಜ್ಯ ಕಂಟ್ರೋಲ್ ಕಮಿಟಿ ಅಧ್ಯಕ್ಷರಾದ ಕೆ.ಶಂಕರ, ಜಿಲ್ಲಾ ಸಮಿತಿಯ ಸುರೇಶ ಕಲ್ಲಾಗರ, ಎಚ್.ನರಸಿಂಹ, ಚಂದ್ರಶೇಖರ, ಶಶಿಧರ ಗೊಲ್ಲ ಉಪಸ್ಥಿತರಿದ್ದರು.

ನಾಗರತ್ನ ನಾಡ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಫಿಲಿಫ್ ಡಿಸಿಲ್ವಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚಂದ್ರಶೇಖರ ವಂದಿಸಿದರು. ಶ್ರೀಧರ ನಾಡ ಕಾರ್ಯಕ್ರಮ ನಿರ್ವಹಿಸಿದರು.

ಜನವಾದಿ ಮಹಿಳಾ ಸಂಘದವರಿಂದ ಹಾಡು, ನೃತ್ಯ ನಡೆಯಿತು.

ಬಹಿರಂಗ ಸಭೆಗೆ ಮೊದಲು ನಾಡ ಪಡುಕೋಣೆಯಿಂದ ನಾಡ ಗುಡ್ಡೆಯಂಗಡಿ ತನಕ ಬೃಹತ್ ಮೆರವಣಿಗೆ ನಡೆಯಿತು. ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!