spot_img
Thursday, December 5, 2024
spot_img

ಸಂವಿಧಾನದ ಆಶಯಗಳು ನಮ್ಮ ರಾಜಕೀಯದ ಮತ್ತು ಸರ್ಕಾರದ ಸಿದ್ಧಾಂತವೂ ಹೌದು : ಸಿದ್ದರಾಮಯ್ಯ

ಜನಪ್ರತಿನಿಧಿ (ಬೆಂಗಳೂರು) : ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ನಮ್ಮ ರಾಜಕೀಯದ ಮತ್ತು ಸರ್ಕಾರದ ಸಿದ್ಧಾಂತವೂ ಹೌದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಂವಿಧಾನದ ಮೂಲ ಆಶಯಗಳೊಂದಿಗೆ ಸಾಗುತ್ತಿರುವ ನಮ್ಮ ಸರ್ಕಾರ ಎದುರಾಗುವ ಎಲ್ಲ ಪ್ರತಿರೋಧಗಳನ್ನು ಬಾಬಾಸಾಹೇಬ್ ಅಂಬೇಡ್ಕರರು ನಮ್ಮ ಕೈಯಲ್ಲಿಟ್ಟು ಹೋಗಿರುವ ಸಂವಿಧಾನದ ಅಸ್ತ್ರದ ಮೂಲಕವೇ ಎದುರಿಸಿ ಮುನ್ನಡೆಯಲಿದೆ ಎಂದವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಸಂವಿಧಾನದ ಪ್ರಸ್ತಾವಣೆಯಲ್ಲಿರುವ ಸಮಾಜವಾದಿ ಮತ್ತು ಜಾತ್ಯತೀತ ಆಶಯಗಳನ್ನು ಎತ್ತಿಹಿಡಿಯುತ್ತಿರುವುದು ಅತೀವ ಸಂತೋಷ ಮತ್ತು ಭವಿಷ್ಯದಲ್ಲಿ ಭರವಸೆಯನ್ನು ಮೂಡಿಸಿದೆ. ಭಾರತೀಯ ಸಂವಿಧಾನವು ಅಂಗೀಕಾರಗೊಂಡ ಈ ದಿನದಂದು ಸಂವಿಧಾನಶಿಲ್ಪಿ ಅಂಬೇಡ್ಕರರನ್ನು ಗೌರವದಿಂದ ನೆನೆಯುತ್ತೇನೆ ಎಂದಿದ್ದಲ್ಲದೇ, ನಾಡಿನ ಜನತೆಗೆ ಸಂವಿಧಾನ ದಿನಾಚರಣೆಯ ಶುಭಾಶಯ ಕೊರಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!