spot_img
Thursday, April 2, 2026
spot_img

ಕನ್ನಡಿಗ ಡಾ.ಹರ್ಷ ದೇಶದ ಅಗ್ರಗಣ್ಯ ಗ್ಲೂಕೋಮಾ ತಜ್ಞ : ಅಮೇರಿಕದ ಸ್ಪಾನ್ ಪೋರ್ಟ್ ವಿವಿ ವರದಿಯಲ್ಲಿ ಪ್ರಶಂಸೆ

ಕುಂದಾಪುರ: (ಜನಪ್ರತಿನಿಧಿ ವಾರ್ತೆ) ಭಾರತದ ಗ್ಲೂಕೋಮ ತಜ್ಞರ ಪೈಕಿ ಬನ್ನೇರುಘಟ್ಟ ರಸ್ತೆಯಲ್ಲಿರುವ ನಾರಾಯಣ ನೇತ್ರಾಲಯದ ಸಂಶೋಧಕ ವೈದ್ಯ ಡಾ.ಬಿ.ಎಲ್ ಹರ್ಷ ಅವರು ಅಗ್ರಸ್ಥಾನದಲ್ಲಿದ್ದಾರೆ ಎಂದು ಅಮೇರಿಕಾದ ಸ್ಪಾನ್ ಪೋರ್ಟ್ ವಿಶ್ವವಿದ್ಯಾಲಯವು ಪ್ರಕಟಿಸಿದೆ.

ಡಾ.ಹರ್ಷ ಅವರು ನೇತ್ರ ತಜ್ಞರಾಗಿದ್ದು ಗ್ಲೂಕೋಮಾ ಕ್ಷೇತ್ರದಲ್ಲಿ ವಿಶೇಷ ತಜ್ಞರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಪ್ರಕಟಿತ ಸಂಶೋಧನಾ ಲೇಖನಗಳ ಆಧಾರದ ಮೇಲೆ ಪ್ರತಿಷ್ಠಿತ ಸ್ಪಾನ್ ಪೋರ್ಟ್ ವಿಶ್ವವಿದ್ಯಾಲಯವು ಅಕ್ಟೋಬರ್ ತಿಂಗಳಲ್ಲಿ ಪ್ರಕಟಿಸಿರುವ ಈ ವರ್ಷದ ಪಟ್ಟಿಯ ಪ್ರಕಾರ ಭಾರತದ ಶ್ರೇಷ್ಟ ಎರಡು ಸಾವಿರ ನೇತ್ರ ತಜ್ಞರಲ್ಲಿ ಒಬ್ಬರಾಗಿದ್ದಾರೆ. ಹಾಗೂ ಗ್ಲೋಕೋಮಾ ತಜ್ಞರಲ್ಲಿ ಭಾರತದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಡಾ.ಬಿ.ಎಲ್.ಹರ್ಷ ಅವರು ಹಿರಿಯ ಕವಿ ಬಿ.ಆರ್ ಲಕ್ಷ್ಮಣ ರಾವ್ ಅವರ ಹಿರಿಯ ಪುತ್ರ. ಹಾಗೂ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರಾದ ಐರೋಡಿ ಜಗದೀಶ ಕಾರಂತರ ಅಳಿಯ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!