spot_img
Wednesday, April 1, 2026
spot_img

ಮೋದಿ 100 ಗಂಟೆ ಕೆಲಸ ಮಾಡುತ್ತಾರೆ, ಯುವಕರಿಗೆ 70 ಗಂಟೆ ಕೆಲಸ ಮಾಡುವುದಕ್ಕೇನು ? : ಇನ್ಫೋಸಿಸ್‌ ನಾರಾಯಣ ಮೂರ್ತಿ

ಜನಪ್ರತಿನಿಧಿ (ಬೆಂಗಳೂರು) : ಇನ್ಫೋಸಿಸ್‌ನ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇದೀಗ ಮತ್ತೊಮ್ಮೆ ಕೆಲಸದ ಅವಧಿಯ ಬಗ್ಗೆ ಮಾತನಾಡಿದ್ದಾರೆ. ಸಿಎನ್‌ಬಿಸಿ ಗ್ಲೋಬಲ್‌ ಲೀಡರ್‌ಶಿಪ್‌ ಸಮ್ಮಿಟ್‌ನಲ್ಲಿ ಅವರು, ನನಗೆ ಭಾರತದಲ್ಲಿ ಐಟಿ ಉದ್ಯೋಗದಲ್ಲಿ ವಾರದಲ್ಲಿ 6 ದಿನ ಬದಲಿಗೆ ಕೇವಲ 5 ದಿನ ಕೆಲಸ ಮಾಡಬೇಕು ಎನ್ನುವ ಕಾನ್ಸೆಪ್ಟ್‌ ಬಂದಾಗ ಆಶ್ಚರ್ಯವಾಗಿತ್ತು. ನಾನು ಈ ವಿಷಯ ಕೇಳಿ ಕಂಗಾಲಾಗಿದ್ದೆ. ಐಟಿ ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸದ ಅವಧಿಯನ್ನು ಆರು ದಿನಗಳ ಬದಲಿಗೆ 5 ದಿನ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ನೀವು ದಯವಿಟ್ಟು ಕ್ಷಮಿಸಿ ನಾನು ಸತ್ತರೂ ಕೆಲಸದ ಅವಧಿಯ ಬಗ್ಗೆ ನನಗೆ ಇರುವ ಅಭಿಪ್ರಾಯವನ್ನು ನಾನು ಬದಲಾಯಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದವರು ಹೇಳಿದ್ದಾರೆ. ಮುಂದುವರಿದು ಪ್ರಧಾನಿ ನರೇಂದ್ರ ಮೋದಿ ಅವರು ವಾರಕ್ಕೆ 100 ಗಂಟೆ ಕೆಲಸ ಮಾಡುತ್ತಾರೆ. ಅವರನ್ನು ಮೆಚ್ಚಿಕೊಳ್ಳುವ ಯುವಕರಿಗೆ 70 ಗಂಟೆ ಕೆಲಸ ಮಾಡಲು ಏನು. ದೇಶದ ಯುವಕರು ಸಹ ವಾರಕ್ಕೆ ಕನಿಷ್ಠ 70 ಗಂಟೆಯಾದರೂ ಕೆಲಸ ಮಾಡಬೇಕು. ನಾನು ಕೆಲಸಕ್ಕೆ ಸೇರಿದಾಗ ದಿನಕ್ಕೆ 14 ಗಂಟೆ ಕೆಲಸ ಮಾಡ್ತಿದ್ದೆ. ಬೆಳಿಗ್ಗೆ ಆಫೀಸ್‌ಗೆ ಬಂದರೆ, ರಾತ್ರಿನೇ ಮನೆಗೆ ಹೋಗ್ತಿದ್ದೆ. ನಾನು ಪೂರ್ತಿ ಸಮರ್ಪಣಾ ಮನೋಭಾವನೆಯಿಂದ ಕೆಲಸ ಮಾಡುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.

ವಿಶ್ವದಲ್ಲಿ ಕಠಿಣ ಪರಿಶ್ರಮದ ರಾಷ್ಟ್ರಗಳು ಸಾಕಷ್ಟು ಅಭಿವೃದ್ಧಿ ಸಾಧಿಸಿವೆ. ವಿದ್ಯಾವಂತ ಹಾಗೂ ಪ್ರತಿಭೆ ಇರುವವರು ದಿನಕ್ಕೆ ಕನಿಷ್ಠ 10 ಗಂಟೆಯಾದರೂ ಕೆಲಸ ಮಾಡಬೇಕು. ಆಗ ಮಾತ್ರ ನಮ್ಮ ಭಾರತ ಅಭಿವೃದ್ಧಿ ಆಗುತ್ತದೆ ಎಂದು ಅವರು  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ಷಮೆ ಕೇಳಿದ್ದರು : ನಾರಾಯಣ ಮೂರ್ತಿ ಅವರು ಕೆಲಸದ ಅವಧಿಯ ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ದೇಶದ ಯುವಕರು ಕನಿಷ್ಠ 70 ಗಂಟೆ ಕೆಲಸ ಮಾಡಬೇಕು ಎಂದಿದ್ದರು. ಅವರ ಹೇಳಿಕೆಗೆ ದೇಶದ ಯುವ ಸಮೂಹ ಹಾಗೂ ಸಾಮಾನ್ಯ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಅವರು ನೀಡಿದ ಹೇಳಿಕೆಯನ್ನು ಹಿಂಪಡೆದಿರುವುದಾಗಿಯೂ, ಜನರ ಬಳಿ ಕ್ಷಮೆ ಕೇಳುವುದಾಗಿಯೂ ಹೇಳಿದ್ದರು. ಆದರೆ, ಇದೀಗ ನಾನು ಸತ್ತರೂ ಕೆಲಸದ ಅವಧಿಯ ಬಗ್ಗೆ ನನ್ನ ಅಭಿಪ್ರಾಯವನ್ನು ನಾನು ಬದಲಾಯಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!